ಕೋಟ : ತಾಯಿ ಊಟ ಬಡಿಸದೇ, ನೀನೇ ಬಡಿಸಿಕೊಂಡು ಉಣ್ಣು, ನೀರಲ್ಲಿ ಆಟವಾಡಬೇಡ ಎಂದಿದಕ್ಕೆ ಬಾಲಕನು ನೇಣಿಗೆ ಶರಣು

JANANUDI NEWS NETWORK         

ಚಿತ್ರ ಸಾಂದರ್ಭಿಕ

ಕೋಟ : ತಾಯಿಯು ಊಟ ಬಡಿಸದೇ, ನೀನೇ ಹೋಗಿ ಬಡಿಸಿಕೋ ಎಂದು ಹೇಳಿದ್ದಕ್ಕೆ ಬಾಲಕನೊಬ್ಬ ನೇಣಿಗೆ ಶರಣಾದ ಕರಾಳ ಕುಂದಾಪುರ ಸಮೀಪದ ಕೋಟದಲ್ಲಿ ಸೋಮವಾರದಂದು ನಡೆದಿದೆ.

  ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಕೋಟ ಸಮೀಪದ ಕಾರ್ಕಡ ನಿವಾಸಿ ಲಕ್ಷ್ಮೀ ಎಂಬವರ ಪುತ್ರ 9ನೇ ತರಗತಿ ವಿದ್ಯಾರ್ಥಿ ನಾಗೇಂದ್ರ (14) ಎಂದು ಗುರುತಿಸಲಾಗಿದೆ.

    ಈತನ ತಾಯಿ ಲಕ್ಷ್ಮೀ ಅವರು, ಜೀವನೋಪಾಯಕ್ಕಾಗಿ ಕಾರ್ಕಡದಲ್ಲಿ ತನ್ನ ಮನೆಯ ಪಕ್ಕದಲ್ಲೇ ವೀರಭದ್ರ ಎಂಬ ಸಣ್ಣ ಕ್ಯಾಂಟೀನ್‌ ನಡೆಸುತ್ತಿದ್ದಾರೆ. ವಿಪರೀತ ಮಳೆ ಹಿನ್ನೆಲೆ ಶಾಲೆಗೆ ರಜೆಯಿದ್ದ ಕಾರಣ ನಾಗೇಂದ್ರ ಕಾರ್ಕಡ ಶಾಲಾ ಮೈದಾನಲ್ಲಿ ಆಡಲು ಹೋಗಿದ್ದು, ಮಧ್ಯಾಹ್ನ ಊಟಕ್ಕೆಂದು ಕ್ಯಾಂಟಿನ್ ಬಳಿ ಬಂದು ಬಾಲಕ ತಾಯಿ ಬಳಿ ಊಟ ಬಡಿಸಲು ಹೇಳಿದ್ದಾನೆ. ತಾಯಿ ನೀರಲ್ಲಿ ಆಟವಾಡಬೇಡ ಎಂದು ಬುದ್ದಿವಾದ ಹೇಳಿ, ಇದೇ ವೇಳೆ ಕ್ಯಾಂಟೀನ್‌ನಲ್ಲಿ ಗ್ರಾಹಕರಿದ್ದುದರಿಂದ ಮಗನಿಗೆ ಮನೆಗೆ ಹೋಗಿ ನೀನೆ ಊಟ ಬಡಿಸಿಕೊಂಡು ಉಣ್ಣುವಂತೆ ತಾಯಿ ಹೇಳಿದ್ದಾರೆ.

    ಆದರೆ ಹಠ ಸ್ವಭಾವದ ಹುಡುಗ ಇಷ್ಟಕ್ಕೆ ಸಿಟ್ಟುಗೊಂಡ ಆತ ಮನೆಗೆ ತೆರಳಿ, ಸಿಟೌಟ್‌ನಲ್ಲಿ ಬಟ್ಟೆ ಒಣಗಿಸಲು ಕಟ್ಟಿದ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.