ವರದಿ ; ಅಂತೋನಿ ಲುವಿಸ್,ಮಣಿಪಾಲ್
ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ವತಿಯಿಂದ ” ಕೊಂಕಣಿ ಭಾಶೆ ಮತ್ತು ಸಂಸ್ಕ್ರತಿ ಹಿಂದೆ, ಇಂದು ಮತ್ತು ಭವಿಶ್ಯತ್ತಲ್ಲಿ ಹೇಗಿರಬೇಕು” ಎಂಬ ವಿಶಯದೊಂದಿಗೆ ” ಕೊಂಕಣಿ ಸಾಹಿತ್ಯ, ಕಲಾ ಮತ್ತು ಸಾಂಸ್ಕ್ರತಿಕ ಸಂಘಟನೆ ಉಡುಪಿ ಜಿಲ್ಲೆ” ಇದರ ಸಹಯೊಗದೊಂದಿಗೆ ತಾ 11 ರಂದು ಉಡುಪಿ ಡೊನ್ ಬೊಸ್ಕೊ ಸಭಾ ಭವನದಲ್ಲಿ ಜರಗಿತು. ಸಂಘಟನೆಯ ಅಧ್ಯಕ್ಷ್ ಶೀ ಲುವಿಸ್ ಡಿ’ ಆಲ್ಮೆಡಾ ರವರು ಸ್ವಾಗತಿಸಿದರು. ಪ್ರಭಂದ ಸ್ಪರ್ದೆಯ ಕಾರ್ಯದರ್ಶಿ ಶ್ರಿಮತಿ ಮಾಧುರಿ ಪಾಟೀಲ್ ರವರು ಸಾಹಿತ್ಯ ಸಮ್ಮೇಳನದ ಪರವಾಗಿ ಮಾತನಾಡಿ ಮಾರ್ಚ್ 20 ಮತ್ತು 21 ರಂದು ಮಣಿಪಾಲದ ಆರ್. ಎಸ್. ಬಿ ಸಭಾ ಭವನದಲ್ಲಿ ಎರಡು ದಿನದ ಸಾಹಿತ್ಯ ಸಮ್ಮೇಳನ ಜರುಗಲಿದ್ದು ಆ ಸಮಾರಂಭದಲ್ಲಿ ಪ್ರಭಂದ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದು ವಿವರ ನೀಡಿದರು. ಡಾ. ಜೆರಾಲ್ಡ್ ಪಿಂಟೊರವರು ಸ್ಪರ್ದೆಯ ನಿಯಮಗಳನ್ನು ತಿಳಿಸಿದರು. ವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನದ ವತಿಯಿಂದ ಆಗಮಿಸಿದ ಸಧಸ್ಯರಾದ ಶ್ರಿಮತಿ ಸುಹಾರ್ಷಾ ಭಟ್, ಶ್ರಿಮತಿ ಮಂಜುಳಾ ಶೆಣೈ, ಶ್ರೀ ಆಲ್ಫೊನ್ಸ್ ಡಿ’ ಕೊಸ್ತಾ ಉಪಸ್ಥಿತರಿದ್ದರು. ಈ ಸ್ಪರ್ದೆಯಲ್ಲಿ 18 ಜನ ಭಾಗವಹಿಸಿದ್ದರು. ಕೊನೆಯಲ್ಲಿ ಸಂಘಟನೆಯ ಕಾರ್ಯದರ್ಶಿ ಶ್ರಿಮತಿ ರೋಜಿ ಬಾರೆಟ್ಟೊರವರು ಧನ್ಯವಾದ ಅರ್ಪಿಸಿದರು. ಶ್ರಿಮತಿ ಶೈಲಾ ¥sóÉರ್ನಾಂಡಿಸ್ ರವರು ಕಾರ್ಯಕ್ರಮ ನಿರ್ವಹಿಸಿದರು.