

ಮಂಗಳೂರು: ಫ್ಲೊಯ್ಡ್ ಡಿ’ಮೆಲ್ಲೊ ಕಾಸ್ಸಿಯಾ ಇವರು ಅರ್ಪಿಸುವ ಕೊಂಕಣಿಯ ಸಂಗೀತ ರಸಸಂಜೆ ಕಾರ್ಯಕ್ರಮ ಕಾಳ್ಜಾ ಉಮಾಳೆ ಇದೇ ನವೆಂಬರ್ 13ರಂದು, ಸಂಜೆ 5 ಗಂಟೆಗೆ, ಮಂಗಳೂರಿನ ಡಾನ್ ಬೋಸ್ಕೊ ಸಭಾಂಗಣದಲ್ಲಿ ನಡೆಯಲಿದೆ.
ಇದು ಕೊಂಕಣಿ ಭಾಷೆಯ ಸಂಗೀತ ಕಾರ್ಯಕ್ರಮದಲ್ಲಿ ಹೊಸ ಪ್ರಯೋಗವಾಗಿದ್ದು, ಮಂಗಳೂರಿನ ಹಲವಾರು ಜನಪ್ರಿಯ ಹಾಗೂ ಪ್ರತಿಭಾನ್ವಿತ ಗಾಯಕರು, ಕಲಾವಿದರು, ಸಂಗೀತಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತಾವೆಲ್ಲರೂ ಬಂದು ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ಆಯೋಜಕರ ವಿನಂತಿಸಿದ್ದಾರೆ.
ಫ್ಲೊಯ್ಡ್ ಇವರು, ಈ ಹಿಂದೆಯೂ ಹಲವಾರು ಕೊಂಕಣಿ ಕಾರ್ಯಕ್ರಮಗಳನ್ನು, ಆಯೋಜಿಸಿ ಅನುಭವ ಉಳ್ಳವರು. ಒಬ್ಬ ನಟನಾಗಿ, ಕಾರ್ಯಕ್ರಮ ನಿರೂಪಕನಾಗಿ, ಸಂಘಟಕನಾಗಿ, ಅನುಭವವನ್ನು ಹೊಂದಿದ್ದು, ಪ್ರಸ್ತುತ ಡಾನ್ ಬೋಸ್ಕೊ ನಾಟಕ ಸಭೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಕೊಂಕಣಿಯ ಖ್ಯಾತ ಗಾಯಕಿ ಜೋಶಲ್ ಡಿಸೋಜಾ, ಎಂಟಿಜಿ ಖ್ಯಾತಿಯ ವೆಲಿಟಾ ಲೋಬೊ, ಎಸ್‌ಒಎಡಿ ಖ್ಯಾತಿಯ ಸೋನಾಲ್ ಮೊಂತೇರೊ, ಸುನಿಲ್ ಮೊಂತೇರೊ, ಜೇಸನ್ ಲೋಬೊ, ರೋಲ್ಸ್‌ಟನ್ ಪಿಂಟೊ ಮತ್ತು ದಿತೇಶ್ ಡಿಸೋಜಾ ಪ್ರೇಕ್ಷಕರನ್ನು ಆಕರ್ಷಿಸಲಿದ್ದಾರೆ.
ಖ್ಯಾತ ಸಂಗೀತಗಾರರಾದ ರಾಜೇಶ್ ಮೊಯ್ಲಿ, ರಾಜೇಂದ್ರ ಬಬ್ಲಿ, ರಾಲ್ಫ್ ರೋಷನ್, ವಿಜಯ್ ನೊರೊನ್ಹಾ ಮತ್ತು ಪ್ರಜ್ವಲ್ ಫ್ರಾಂಟೆರಿಯೊ ಸಂಗೀತವನ್ನು ನಿಭಾಯಿಸಲಿದ್ದಾರೆ. ‘ಶೋ ಸ್ಟಾಪರ್ಸ್’ ತಂಡವು ತಮ್ಮ ಪಾದರಸದ ಹೆಜ್ಜೆಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಕ್ಲೀಟಸ್ ಮತ್ತು ತಂಡದವರು ತಮ್ಮ ಹಾಸ್ಯ ಪ್ರದರ್ಶನದ ಮೂಲಕ ನಗೆ-ಗಲಭೆ ಸೃಷ್ಟಿಸಲಿದ್ದಾರೆ. ಮನು ಬಂಟ್ವಾಳ್ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರೆ, ಫ್ಲಾಯ್ಡ್ ಸ್ವತಃ ಸಂಗೀತವನ್ನು ಸಂಯೋಜಿಸಲಿದ್ದಾರೆ. ಡೆಲಿಯಾ ಐವಿನ್ ಕ್ರಾಸ್ತಾ ಮತ್ತು ಪ್ರೀತಮ್ ನೊರೊನ್ಹಾ ಕಾರ್ಯಕ್ರಮದ ಸಂಯೋಜಕರಾಗಿದ್ದು, ಪ್ರವೇಶ ಉಚಿತ ಮತ್ತು ಎಲ್ಲರಿಗೂ ಮುಕ್ತವಾಗಿದೆಯೆಂದು ತಿಳಿಸಿದ್ದಾರೆ

