

ಮಂಗಳೂರು ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕೊಂಕಣಿ ಮಾನ್ಯತಾ ದಿವಸ್ ಆಚರಣೆಯನ್ನು ಆಗೋಸ್ಟ್ 24 ರಂದು ರೋಯ್‍ಕ್ಯಾಸ್ತೆಲಿನೊ (ಕೊಂಕಣಿ ಸಾಹಿತ್ಯಆಕಾಡೆಮಿ ಮಾಜಿ ಅಧ್ಯಕ್ಷರು ಹಾಗೂ ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಧಿಕಾರಿ) ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಂದನೀಯ ಗುರುಗಳಾದ ಮೆಲ್ವಿನ್ ಡಿಕುನ್ಹರವರು ವಸ್ತು ಪ್ರದರ್ಶನದ ಉದ್ಘಾಟನೆಗೈದರು.
ಮ್ಯಾಕ್ಸಿಮ್ ಲುದ್ರಿಕ್ ಇಲ್ಲಿನಪುರಾತನ ಕಾಲದಕಾಲದ ವಸ್ತುಗಳ ಪರಿಚಯಿಸಿದರು. ಈ ಕಾರ್ಯಕ್ರಮದಲ್ಲಿ ವಂದನೀಯ ಗುರು ಸ್ಟೀಫನ್ ಪಿರೇರಾ, ವಂದನೀಯ ಗುರು ದೀಪ್ ಯಫೆರ್ನಾಂಡಿಸ್, ವಂದನೀಯ ಗುರು ಗ್ರೆಗೊರಿ ಡಿಸೋಜ, ವಂದನೀಯ ಗುರು ಜೋನ್ ಪಿಂಟೊ, ವಂದನೀಯ ಗುರು ಫ್ರಾನ್ಸಿಸ್, ವಂದನೀಯ ಗುರು ವಿಲ್ಪೇಡ್ ರೊಡ್ರಿಗಸ್ ಹಾಗೂ ಇತರಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಡರು. ವಂದನೀಯ ಗುರು ಐವನ್‍ಡಿಸೋಜ (ನಮಾನ್ ಬಾಳೊಕ್ ಜೆಜು ಸಂಪಾದಕರು ಹಾಗೂ ಕಾರ್ಯಕ್ರಮದ ಸಂಯೋಜಕರು) ಸರ್ವರನ್ನು ಸ್ವಾಗತಿಸಿದರು.
ಎಲ್ಸನ್ ಹಿರ್ಗಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ವಸ್ತು ಪ್ರದರ್ಶನವನ್ನು ಪುಣ್ಯಕ್ಷೇತ್ರದ ಸಭಾಂಗಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಯಿತು.





