ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ – ಕಾರ್ಮಿಕ ಸಂತ ಜೋಸೆಫ್ ಚರ್ಚ್ ವಾಮಂಜೂರ್, ಹಾಗೂ “ಸಾಂಗಾತಿ ವಾಮಂಜೂರ್” ಇವರ ಜಂಟಿ ಆಶ್ರಯದಲ್ಲಿ “ಕೊಂಕಣಿ ಕಲಾ ಸಂಭ್ರಮ್” ಕಾರ್ಯಕ್ರಮ ಸೆಪ್ಟೆಂಬರ್ 22 ರಂದು ವಾಮಂಜೂರ್ ಚರ್ಚ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷರಾದ ಸಿಟಿ ವಲಯದ ಮುಖ್ಯ ಧರ್ಮಗುರು ಹಾಗೂ ವಾಮಂಜೂರು ಚರ್ಚ್ನ ಧರ್ಮಗುರು ಆತೀ ವಂ| ಫಾದರ್ ಜೇಮ್ಸ್ ಡಿಸೋಜ, ವಂ| ಫಾದರ್ ಐವನ್ ಅಶ್ವಿನ್ ಡಿಸೋಜ ವಾಮಂಜೂರು ಚರ್ಚ್ನ ಸಹಾಯಕ ಧರ್ಮಗುರುಡೊಲ್ಪಿ ಎಫ್ ಲೋಬೊ,ಹಿರಿಯ ಸಾಹಿತಿ ವಾಮಾಂಜೂರ್. ಚಾರ್ಲ್ಸ್ ಪಾಯ್ಸ್ ಉಪಾಧ್ಯಕ್ಷರು ವಾಮಂಜೂರು ಚರ್ಚ್. ಪ್ಯಾಟ್ರಿಕ್ ಲೋಬೊ ಸದಸ್ಯರು, “ಸಾಂಗಾತಿ ವಾಮಂಜೂರ್ ” ಶೇಖರ್ ಗೌಡ ಸಂಚಾಲಕರು ಸೇಸು ಗೌಡ ಕುಡ್ಮಿ ಜಾನಪದ ಕಲಾ ಪಂಗಡ, ಕೊಂಪದವ್. ಕೇಶವ್ ರಾಯ್ ಕಾಮತ್ ಉಧ್ಯಮಿ ವಾಮಾಂಜೂರ್. ಸುನಿಲ್ ಸಿದ್ದಿ ಮುಂಡುಗೊಡ್ ಯಲ್ಲಾಪುರ್. ಸಪ್ನಾ ಕ್ರಾಸ್ತಾ ಸದಸ್ಯರು ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ. ಕಾರ್ಯಕ್ರಮದ ಸಂಯೋಜಕರು, ರೋಶನ್ ಎಮ್. ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಕಾರ್ಯಕ್ರಮದ ಉದ್ಘಾಟನೆ ವೇದಿಕೆಯಲ್ಲಿರುವ ಗಣ್ಯರು ಡೋಲು (ಬ್ಯಾಂಡ್) ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ಸಪ್ನಾ ಕ್ರಾಸ್ತಾ ಇವರಿಗೆ ಅವರ ಸಾಧನೆಯನ್ನು ಗುರುತಿಸಿ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾದಕ್ಕೆ ಸನ್ಮಾನಿಸಿದರು. ಲವಿನಾ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು. ಸಪ್ನಾ ಕ್ರಾಸ್ತಾ ವಾಮಂಜೂರ್ ಸ್ವಾಗತ ಕೋರಿದರು.ಪ್ಯಾಟ್ರಿಕ್ ಲೋಬೊ ಇವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಕೊಂಕಣಿ ಭಾಷೆಯ ವೈಭವ ಪ್ರದರ್ಶಿಸಲು ವಿವಿಧ ಪಂಗಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುನಿಲ್ ಪಿಂಟೋರವರು ನಿರೂಪಿಸಿದರು.