ಕೊಲ್ಲೂರು ಅರಶಿನಗುಂಡಿ ಜಲಪಾತ ವೀಕ್ಷಣೆಯ ದುರಂತ: ಕಾಲು ಜಾರಿ ಜಲಪಾತದಲ್ಲಿ ಕೊಚ್ಚಿ ಹೋದ ಯುವಕ /Kolluru Arashinagundi Falls View Tragedy: A young man slipped and got swept away in the falls

ಕುಂದಾಪುರ:ಜು.24. ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆಯಲ್ಲಿ ಜು.23 ರಂದು ಯುವಕನೋರ್ವ ಕಾಲು ಜಾರಿ ಬಿದ್ದು ನೀರುಪಾಲಾದ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಶಿನಗುಂಡಿ ಜಲಪಾತದಲ್ಲಿ ಸಂಭವಿಸಿದೆ. ನೀರುಪಾಲಾದ ಯುವಕ. ಭದ್ರಾವತಿ ಮೂಲದ ಶರತ್ ಕುಮಾರ್ (23) ಎಂದು ತಿಳಿದು ಬಂದಿದೆ.

ಭಾನುವಾರ ಮಧ್ಯಾಹ್ನ ಕೊಲ್ಲೂರಿಗೆ ತನ್ನ ಸ್ನೇಹಿತ ಗುರುರಾಜ್ ನೊಂದಿಗೆ ಕಾರಿನಲ್ಲಿ ಬಂದಿದ್ದ ಶರತ್ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದರು. ಈ ವೇಳೆ ಬಂಡೆಕಲ್ಲಿನ ಮೇಲೆ ನಿಂತು ಜಲಪಾತದಿಂದ ನೀರು ಧುಮ್ಮಿಕ್ಕುವ ದೃಶ್ಯ ನೋಡುತ್ತಿದ್ದ ವೇಳೆ ಕಾಲು ಜಾರಿ ನೀರಿನ ಸೆಳೆತದಲ್ಲಿ ಕೊಚ್ಚಿ ಹೋಫಿದ್ದಾನೆ.

  ಅವಘಡ ನಡೆದ ಕೂಡಲೇ ಶರತ್ ಸ್ನೇಹಿತ ಗುರುರಾಜ್ ಸಮೀಪದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿದರು, ಆದರೂ ಶರತ್ ಪತ್ತೆಯಾಗಲಿಲ್ಲ. ಅಗ್ನಿಶಾಮಕ ದಳ, ಅರಣ್ಯ ಇಲಾಖೆ‌ ಸಿಬ್ಬಂದಿಗಳು, ಕೊಲ್ಲೂರು ಪೊಲೀಸರು ಸೋಮವಾರ ಬೆಳಿಗ್ಗೆನಿಂದಲೂ ಪುನ: ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಈಜುಪಟು ಈಶ್ವರ್ ಮಲ್ಪೆ ಮತ್ತವರ ತಂಡವೂ ಆಗಮಿಸಿದೆ.

ಶರತ್ ಸ್ವ ಉದ್ಯೋಗಿಯಾಗಿದ್ದು, ಅವರ ಸ್ನೇಹಿತ ಗುರುರಾಜ್ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಭಾನುವಾರ ರಜೆ ಹಿನ್ನೆಲೆ ಜಲಪಾತ ವೀಕ್ಷಣೆಗೆ ಬಂದಿದ್ದರು. ಕಳೆದ‌ ಕೆಲ ದಿನಗಳಿಂದ‌ ಮಳೆ ಜೋರಾಗಿ ಸುರಿಯುತ್ತಿದ್ದರಿಂದ ಅರಶಿನಗುಂಡಿ ಜಲಪಾತದಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಆದರೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರವೇಶ ದ್ವಾರದಲ್ಲಿರುವುದನ್ನು ನೋಡಿ ಶರತ್ ಹಾಗೂ ಆತನ‌ ಸ್ನೇಹಿತ ಬೇರೊಂದು ದಾರಿಯಲ್ಲಿ ಜಲಪಾತಕ್ಕೆ‌ ತೆರಳಿದ್ದರು ಎನ್ನಲಾಗಿದೆ.

ಶರತ್ ಜಾರುವ ವೇಳೆ ಸ್ನೇಹಿತ ಗುರುರಾಜ್ ಚೀತ್ರಿಕರಿಸಿದ ವಿಡೀಯೊ ವೈರಲ್ ಆಗಿದೆ

ಶರತ್ ಸ್ನೇಹಿತ ಗುರುರಾಜ್ ಜಲಪಾತದ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ‌ಸೆರೆ ಹಿಡಿಯುತ್ತಿರುವ ವೇಳೆಯಲ್ಲೇ ಶರತ್ ಕಾಲು ಜಾರಿ ಬಿದ್ದಿದ್ದು, ಆ ದೃಶ್ಯವೂ ಮೊಬೈಲ್ ನಲ್ಲಿ‌ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Kolluru Arashinagundi Falls View Tragedy: A young man slipped and got swept away in the falls


Kundapur: Ju.24. On June 23, while going to see the waterfall, a young man slipped and fell into the water at the Arashinagundi waterfall under Kollur police station. A young man from Neerupala. It has been learned that Sarath Kumar (23) hails from Bhadravati.
Sarath, who had come to Kolluri with his friend Gururaj in a car on Sunday afternoon, had gone to Arashinagundi waterfall. At this time, while standing on a rock and watching the water gushing from the waterfall, he slipped and was crushed by the water.
Soon after the accident happened, Sharath’s friend Gururaj informed the forest department personnel nearby. The alert personnel informed the police and conducted an operation with the cooperation of the locals, but Sharath was never found. The fire brigade, forest department staff, Kollur police have been involved in re-operation since Monday morning, swimmer Ishwar Malpe and other teams have also arrived.
Sarath is self-employed and his friend Gururaj is working in an IT company and came to see the background falls on Sunday. Arashinagundi waterfall has been banned for tourists as it has been raining heavily for the past few days. However, it is said that Sharath and his friend went to the waterfall by a different route after seeing the forest department personnel at the entrance.
A video filmed by friend Gururaj while Sarath is sliding has gone viral
While Sharath’s friend Gururaj was capturing the scenes of the waterfall on his mobile phone, Sharath slipped and fell, and that scene was also captured on his mobile phone. This video is currently going viral on social media.