JANANUDI.COM NETWORK

ಕೋಲಾರ,ಮೇ.12: ಶ್ರೀ ದೇವರಾಜ್ ಅರಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ನರ್ಸಿಂಗ್ ಸರ್ವಿಸ್ ಡಿಪಾರ್ಟಮೆಂಟ್ ಆರ್ ಎಲ್ ಜೆ ಹೆಜ್ & ಆರ್ ಸಿ ಸಹಕಾರದೊಂದಿಗೆ ಮೇ 12 ರಂದು ಬೆಳಿಗ್ಗೆ 9.30 ಕ್ಕೆ ಅಂತರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಆಚರಿಸಲಾಯಿತು.
ಈ ದಿನದಂದು ಕೋವಿಡ್ – 19 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಸ್ಕ್ ಮತ್ತು ಕೋವಿಡ್ -19 ಆರೋಗ್ಯ ಮಾಹಿತಿ ಕರ ಪತ್ರವನ್ನು ಎಲ್ಲಾ ರೋಗಿಗಳಿಗೆ ಮತ್ತು ಆರೈಕೆ ನೀಡುವವರಿಗೆ ಆರ್ ಎಲ್ ಜೆ ಹೆಜ್ & ಆರ್ ಸಿ ನಲ್ಲಿ ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಡಾ. ಜೀನತ್ ಸಿ.ಜೆ ರವರ ನೇತೃತ್ವದಲ್ಲಿ ನಡೆಸಲಾಗಿದ್ದು ಅವರು ದಾದಿಯರನ್ನು ಮತ್ತು ಶುಶ್ರೂಷ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಇದರಿಂದ ದಾದಿಯರು ಮತ್ತು ಶುಶ್ರೂಷ ವಿದ್ಯಾರ್ಥಿಗಳು ರೋಗಿಗಳ ಆರೈಕೆಯನ್ನು ಮಾಡುವುದಕ್ಕಾಗಿ ತಮ್ಮನ್ನು ಸಮರ್ಪಿಸಿದರು ಮತ್ತು ಶುಶ್ರೂಷ ವಿದ್ಯಾರ್ಥಿಗಳು ಪ್ರಮಾಣವನ್ನು ಸ್ವೀಕರಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
