ಕೋಲಾರ :ಅಪರ ಜಿಲ್ಲಾಧಿಕಾರಿ ಭೂಪರಿವರ್ತನೆ ಸಂಬಂಧ ಲಂಚ ಸ್ವೀಕರಿ ಸುತ್ತಿದ್ದರೆನ್ನಲಾರೆಂಬ ಕಾರಣಕ್ಕೆ ಎಸಿಬಿ ಅಧಿಕಾರಿಗಳು ದಿಢೀರ್ ಧಾಳಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ :ಅಪರ ಜಿಲ್ಲಾಧಿ ಕಾರಿ ಡಾ.ಸಿ.ವಿ.ಸ್ನೇಹಾ ಭೂಪರಿವರ್ತನೆ ಸಂಬಂಧ ದೂರುದಾರ ರೊಬ್ಬರಿಂದ ತಮ್ಮ ಕಚೇರಿಯಲ್ಲೇ 2.90 ಲಕ್ಷ ರೂ ಲಂಚ ಸ್ವೀಕರಿ ಸುತ್ತಿದ್ದರೆನ್ನಲಾಗಿದ್ದು, ಬೆಂಗಳೂರಿನ ಎಸಿಬಿ ಅಧಿಕಾರಿಗಳು ದಿಢೀರ್ ಧಾಳಿ ನಡೆಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಡಾ.ಸ್ನೇ ಹಾ ಸಿ.ವಿ. ಅವರನ್ನು ಅಪರ ಡಿಸಿ ಕಚೇರಿಯಲ್ಲೇ ಎಸಿಬಿ ಅಧಿಕಾರಿ ಗಳು ವಿಚಾರಣೆ ನಡೆಸುತ್ತಿದ್ದು, ಈ ಸಂಬಂಧ ಕಚೇರಿಯ ಶಿರಸ್ತೇದಾರ್ ಪ್ರಭಾಕರ್ ಹಾಗೂ ಇತರ ಸಿಬ್ಬಂ ದಿಯನ್ನು ವಿಚಾರಣೆ ನಡೆಸುತ್ತಿದಾ ್ದರೆನ್ನಲಾಗಿದ್ದು, ಹೆಚ್ಚಿನ ವಿವರಗಳು ತಿಳಿದಿಲ್ಲ.
ದೂರುದಾರರೊಬ್ಬರ ಭೂಪ ರಿವರ್ತನೆ ಕಡತ ವಿಲೇವಾರಿಗೆ ಆತ ಹಲವಾರು ಬಾರಿ ಅಲೆದಾಡಿದ್ದ ರೂ, ಕಡತ ವಿಲೇವಾರಿಯಾಗದೇ ತೊಂದರೆ ಅನುಭವಿಸಿದ್ದಾರೆ, ಈ ಸಂಬಂಧ ನೇರವಾಗಿ ಎಡಿಸಿಯವರನ್ನೇ ಭೇಟಿಯಾಗಿದ್ದು, ಎಡಿಸಿಯ ವರು ಶಾಖಾ ಮುಖ್ಯಸ್ಥರಾದ ಪ್ರಭಾಕರ್ ಅವರ ಬಳಿ ಹೋಗಲು ಸೂಚಿಸಿದ್ದರೆಂದು ದೂರಲಾಗಿದೆ.
ದೂರು ದಾರ ಸೆಕ್ಷನ್ ಹೆಡ್ ಪ್ರಭಾಕರ್ ಅವರ ಬಳಿ ಹೋದಾಗ ಅವರು, ಕಚೇರಿಯ ಇತರೆ ಇಬ್ಬರು ಸಿಬ್ಬಂದಿಗಳಿಗೆ ತಿಳಿಸಿದ್ದೇನೆ ಅಲ್ಲಿ ಹೋಗಿ ಮಾತನಾಡಿ ಎಂದು ಸೂಚನೆ ನೀಡಿದ್ದಾರೆನ್ನಲಾಗಿದ್ದು, ಒಟ್ಟಾರೆ ಭೂಪರಿವರ್ತನೆಗೆ 3 ಲಕ್ಷ ರೂ ನೀಡಲು ಸೂಚಿಸಿದ್ದರೆನ್ನ ಲಾಗಿದೆ.
ಕೋಲಾರ ಹೊರ ವಲಯದ ಟಮಕ ಬಳಿ ಇರುವ ಜಿಲ್ಲಾಡಳಿತ ಭವನದಲ್ಲಿರುವ ಅಪರ ಡಿಸಿ ಕಚೇರಿಗೆ ತಮ್ಮ ಕಡತ ವಿಲೇವಾ ರಿಗಾಗಿ 2.90 ಲಕ್ಷಕ್ಕೆ ವ್ಯವಹಾರ ಕುದುರಿಸಿದ ಸಿಬ್ಬಂದಿ ಧೋರಣೆ ವಿರುದ್ದ ಆಕ್ರೋಶಗೊಂಡ ದೂರು ದಾರ ಎಸಿಬಿ ಅಧಿಕಾರಿಗಳಿಗೆ ದೂ ರು ನೀಡಿದ್ದರ ಹಿನ್ನಲೆಯಲ್ಲಿ ಈ ಧಾಳಿ ನಡೆದಿದೆ ಎನ್ನಲಾಗಿದೆ. ಅಪರ ಡಿಸಿಯವರ ಕಚೇರಿಯ ಒಳಗೇ ಶಿರಸ್ತೆದಾರ್‍ಗಳಾದ ಪ್ರಭಾ ಕರ್ ಹಾಗೂ ನಂಜೇಗೌಡ, ಎಸ್ ಡಿಎ ಮಧು ವಿಚಾರಣೆ ನಡೆಯು ತ್ತಿದ್ದು, ಎಸಿಬಿ ಅಧಿಕಾರಿಗಳು ಧಾಳಿ ಕುರಿತಂತೆ ಹೆಚ್ಚಿನ ವಿವರಗಳನ್ನು ಬಿಟ್ಟುಕೊಡಲಿಲ್ಲ.