ಕೋಲಾರ : ಯಜಮಾನನ್ನು ರಕ್ಷಿಸಲು ನಾಗರಹಾವಿನೊಡನೆ ಹೋರಾಡಿ, ಅದನ್ನು ಕೊಂದು  ತನ್ನ ಪ್ರಾಣವನ್ನು  ಸಮರ್ಪಿಸಿದ ಶ್ವಾನ !!

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ: ತನ್ನಯಜಮಾನನಿಗೆ ಪ್ರಾಣಕಂಟಕವಾಗಿಎದುರಾಗಿದ್ದ ನಾಗರಹಾವಿನೊಂದಿಗೆ ದಿಟ್ಟತನದಿಂದ ಹೋರಾಡಿದ ಶ್ವಾನವು ನಾಗರಹಾವನ್ನು ಕೊಂದು  ಕೊನೆಗೆ ತನ್ನ ಪ್ರಾಣವನ್ನೂ ಸಮರ್ಪಿಸಿದ ಹೃದಯ ವಿದ್ರಾವಕಘಟನೆಇದಾಗಿದೆ.
ಅದರ ಹೆಸರು ಕ್ಯಾಸಿ. ಅದುಅಮೇರಿಕನ್ ಬುಲ್ ತಳಿಯ ಹದಿಹರೆಯದ 3 ವರ್ಷದ ಹೆಣ್ಣು ಶ್ವಾನಇದಾಗಿದ್ದು ಮನೆಯ ಮಂದಿಯಅಕ್ಕರೆಯ ಮುದ್ದಿನ ಮಗುವಿನಂತಿತ್ತು.
ಅಂದು ಮಠಮಠ ಮಧ್ಯಾಹ್ನತೋಟದ ಮನೆಯಲ್ಲಿಇದ್ದ ಮಾಲೀಕ ವಿಲಾಸ್‍ಅವರು ಮೊಬೈಲ್ ನಲ್ಲಿ ಮಾತನಾಡುತ್ತಾ ಹೊರಗೆ ಬಂದು ಮನೆಯಂಗಳದಲ್ಲಿ ಬೆಳೆದಿದ್ದ ಹಸಿರು ಹುಲ್ಲಿನ ನಡುವೆ ನಡೆದಾಡುತ್ತಿದ್ದರು. ಕ್ಯಾಸಿಯೂ ಸಹ ತನ್ನಯಜಮಾನನ್ನು ಹಿಂಬಾಲಿಸುತ್ತಿತ್ತು, ಅಷ್ಟರಲ್ಲಿ ಹುಲ್ಲಿನ ಮರೆಯಲ್ಲಿ ಮಲಗಿದ್ದ ನಾಗರ ಹಾವೊಂದು ದಿಟ್ಟನೆಎಡೆಎತ್ತಿ. ಬುಸುಗುಟ್ಟಿ ನಿಂತು, ಇನ್ನೇನು ಕಚ್ಚಲು ಸಜ್ಜಾಗಿತ್ತು.
ಅಪಾಯದ ಸುಳಿವು ಅರಿತ ಕ್ಯಾಸಿ ತಕ್ಷಣವೇ ಮುನ್ನುಗ್ಗಿಯಜಮಾನನ ಕಾಲಿಗೆ ಅಡ್ಡ ಬಂದು ಹಾವನ್ನು ಹಿಡಿದುಎಸೆಯಿತು. ಜಾರಿ ಬಿದ್ದ ಹಾವು ಕೆರಳಿ ಬುಸುಗುಡುತ್ತಾ ಕಚ್ಚಲು ಮುಂದೆ ಬರತೊಡಗಿತು. ಆಗ ನಡೆಯಿತು ನೋಡಿಯಜಮಾನನರಕ್ಷಣೆಗೆ ಮುಂದಾದ ಶ್ವಾನ ಕ್ಯಾಸಿ ಹಾಗೂ ತನ್ನರಕ್ಷಣೆಗೆ ನಿಂತ ನಾಗರ ನಡುವಿನ ಕಾಳಗದ ಸೆಣಸಾಟ. ಕೊನೆಗೆ ಕ್ಯಾಸಿಯು ನಾಗರಹಾವಿನ ಕುತ್ತಿಗೆಗೆ ಬಾಯಿ ಹಾಕಿ ಕಚ್ಚಿದಾಗ ನರಳಿದ ನಾಗರ, ತನ್ನದೇಹವನ್ನು ಶ್ವಾನದ ಕೊರಳಿಗೆ ಸುತ್ತಿ ಬಿಗಿ ಹಿಡಿಯತೊಡಗಿತು. ಆಗ ನಡೆದಕೊಸರಾಟದಲ್ಲಿ ಹಿಡಿತದಿಂದ ತಪ್ಪಿಸಿಕೊಂಡ ನಾಗರ ಕ್ಯಾಸಿಯ ನಾಲಿಗೆ ಹಾಗೂ ಮೂತಿಗೆಕಚ್ಚತೊಡಗಿತು. ಇದರಿಂದ ಕೆರಳಿದ ಶ್ವಾನವು ನಾಗರನಕುತ್ತಿಗೆ ಸೀಳಿ ಕೊಂದು ಹಾಕಿತು.ಆದರೆ ವಿಧಿಯ ಲೀಲೆ ಬೇರೊಂದುಆಗಿತ್ತು. ನಾಗರನಕಡಿತದಿಂದ ವಿಷ ವರ್ತುಲಕ್ಕೆ ಸಿಕ್ಕಿದ ಕ್ಯಾಸಿ ಅಸ್ವಸ್ಥಗೊಂಡು ಬಿದ್ದುಒದ್ದಾಡತೊಡಗಿತು.ಅದರ ಕೊರಳಿಗೆ ಸುತ್ತಿಕೊಂಡಿದ್ದ ಹಾವಿನ ಮೃತದೇಹವನ್ನು ಬಿಡಿಸಿ ತಕ್ಷಣಆಸ್ಪತ್ರೆಗೆಕೊಂಡೊಯ್ಯುವಾಗ ಮಾರ್ಗ ಮಧ್ಯೆ ಕ್ಯಾಸಿ ಮೃತಪಟ್ಟಿದೆ.
ಕೋಲಾರ ಸಮೀಪದ ಬೀರಂಡಹಳ್ಳಿಯ ಬಿಎಂಟಿಸಿ ನೌಕರ ವೆಂಕಟೇಶ್‍ಅವರತೋಟದ ಮನೆಯಲ್ಲಿ ಈ ದುರ್ಗಟನೆಜರುಗಿದ್ದು ಮನೆ ಸದಸ್ಯರನ್ನೇ ಕಳೆದುಕೊಂಡ ದುಖಃದಲ್ಲಿಕುಟುಂಬವು ಕಣ್ಣೀರು ಹಾಕಿದೆ. ತನ್ನ ಮುದ್ದಿನ ಕ್ಯಾಸಿಯ ಮೃತದೇಹವನ್ನು ಮನೆಯಂಗಳದ ಬದಿಯಲ್ಲಿಅಂತ್ಯಕ್ರಿಯೆ ಮಾಡಿ ಪೂಜಿಸಲಾಯಿತು. ಅಂತೂ ಮನೆಯಂಗಳದಲ್ಲಿ ಅಡಗಿದ್ದ ನಾಗರ ಹಾವನ್ನುಕೊಲ್ಲುವ ಮೂಲಕ ಮನೆಯವರ ಪ್ರಾಣರಕ್ಷಣೆ ಮಾಡಿದ ಕ್ಯಾಸಿ ಪ್ರಾಣಾರ್ಪಣೆ ಮಾಡುವಂತಾಯಿತು.

ದು ಕೊನೆಗೆ ತನ್ನ ಪ್ರಾಣವನ್ನೂ ಸಮರ್ಪಿಸಿದ ಹೃದಯ ವಿದ್ರಾವಕಘಟನೆಇದಾಗಿದೆ.