![](https://jananudi.com/wp-content/uploads/2025/02/Screenshot-946-3.png)
![](https://jananudi.com/wp-content/uploads/2025/02/sarswathinaryan-international-school-.jpg)
ಕೋಲಾರ,ಫೆ.10: ಮಕ್ಕಳನ್ನು ಸಮಾಧಾನಪಡಿಸಲು ಹಾಗೂ ಲಾಲನೆ-ಪಾಲನೆ ಮಾಡುವ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡಿಕೊಳ್ಳುವುದು ಅಪಾಯಕಾರಿ ಎಂದು ಹೃದಯತಜ್ಞ ಡಾ.ಯಶ್ವಂತ್ ಪೋಷಕರನ್ನು ಎಚ್ಚರಿಸಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಸರಸ್ಪತಿನಾರಾಯನ್ ಇಂಟರ್ ನ್ಯಾಷನಲ್ ಸ್ಕೂಲ್ (ಸ್ಮಾರ್ಟ್ ಕಿಡ್ಸ್ ಪ್ರಿ-ಸ್ಕೂಲ್)ನ ನಾಲ್ಕನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಮೊಬೈಲ್ ಅವಲಂಭನೆ ಬೆಳೆಸಿದರೆ ಅದು ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯು ಕುಗ್ಗಲು ಕಾರಣವಾಗುತ್ತದೆ. ಅದರ ಬದಲು ಆಟೋಟಗಳ ಮೂಲಕ ಮಕ್ಕಳನ್ನು ಸಮಾಧಾನಪಡಿಸುವುದು ಎಲ್ಲಾ ರೀತಿಯಿಂದಲ್ಲೂ ಪ್ರಯೋಜನಕಾರಿಯಾದುದು ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ಪೂರ್ವ ವಲಯ ಡಿ.ಸಿ.ಪಿ ಡಿ.ದೇವರಾಜ್ ಅವರು ಮಾತನಾಡಿ, ಮಕ್ಕಳಲ್ಲಿ ಚಿಕ್ಕವಯಸ್ಸಿನಿಂದಲೇ ಉತ್ತಮ ಸಂಸ್ಕಾರಗಳನ್ನು ರೂಢಿಸಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ನುಡಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಮಾತನಾಡಿ, ಮಕ್ಕಳಲ್ಲಿ ಭಾರತೀಯ ಸಂಸ್ಕøತಿ, ಪರಂಪರೆಯ ಅರಿವನ್ನು ಚಿಕ್ಕವಯಸ್ಸಿನಿಂದಲೇ ಮೂಡಿಸಿದರೆ ಸಮಾಜದ ಆಸ್ತಿಯಾಗಿ ಮಕ್ಕಳು ರೂಪುಗೊಳ್ಳುತ್ತಾರೆ ಎಂದು ನುಡಿದರು.
ಡಾ.ವಿ.ಜಿ.ಹೇಮಾವತಿ ಮಾತನಾಡಿ, ಮಕ್ಕಳ ಮನಸ್ಸನ್ನು ಅರಳಿಸುವ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಲು ಸಲಹೆ ಮಾಡಿದರು.
ಸ್ಮಾರ್ಟ್ ಕಿಡ್ಸ್ ಪ್ರಿ-ಸ್ಕೂಲ್ನ ಕಾರ್ಯದರ್ಶಿ ರಾಜೇಂದ್ರಪ್ರಸಾದ್, ನಿರ್ದೇಶಕಿ ಶಶಿಕಲಾ ಉಪಸ್ಥಿತರಿದ್ದರು.