ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಮಕ್ಕಳನ್ನು ನಿತ್ಯವೂ ಮಣ್ಣಿನಲ್ಲಿ ಆಟ ಆಡಲು ಬಿಡುವ ಮೂಲಕ ಮಕ್ಕಳು ಮತ್ತು ಮಣ್ಣಿನ ಸಂಬಂಧವನ್ನು ಬೆಸೆಯಬೇಕೆಂದು ಕ್ರೀಡಾ ತರಬೇತುದಾರ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷಪುರುಷೋತ್ತಮ್ ಹೇಳಿದರು.
ನಗರದ ಟೇಕಲ್ ರಸ್ತೆಯ ಮಕ್ಕಳ ಉದ್ಯಾನದಲ್ಲಿ ಕಳೆದ 38 ದಿನಗಳಿಂದಲೂ ದಿವಂಗತ ಸುಧಾಕರ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿಅವರು ಮಾತನಾಡುತ್ತಿದ್ದರು.
ಬೇಸಿಗೆ ಶಿಬಿರದ ನಂತರವೂ ಮಕ್ಕಳು ನಿರಂತರವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ದೈಹಿಕ ಸದೃಢತೆಯನ್ನು ಹೊಂದಬೇಕೆಂದು ದಿವಂಗತ ದೈಹಿಕ ಶಿಕ್ಷಕ ಸುಧಾಕರ್ ಮಕ್ಕಳ ದೈಹಿಕ ಸಾಮಥ್ರ್ಯಕ್ಕೆ ಅನುಗುಣವಾಗಿ ಕ್ರೀಡಾ ತರಬೇತಿ ನೀಡುವ ಮೂಲಕ ಕೋಲಾರದ ಅನೇಕ ಮಂದಿಯನ್ನು ಕ್ರೀಡಾ ಕ್ಷೇತ್ರದ ಸಾಧಕರನ್ನಾಗಿಸಿದ್ದಾರೆ, ಅವರ ನೆನಪಿನಲ್ಲಿ ನಡೆಸುತ್ತಿರುವ ಬೇಸಿಗೆ ಶಿಬಿರದ ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಮಿಂಚಬೇಕೆಂದರು.
ಕೋಲಾರ ಕ್ರೀಡಾ ಸಂಘವನ್ನು 1956 ರಲ್ಲೇ ಆರಂಭಿಸಿ ಅಥ್ಲೆಟಿಕ್ಸ್ ಕುರಿತು ತರಬೇತಿ ನೀಡಲಾಗುತ್ತಿತ್ತು. ಆನಂತರ ಕಾರಣಾಂತರಗಳಿಂದ ಕ್ರೀಡಾ ಸಂಘವು 1972 ರಲ್ಲಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತ್ತು. ಆನಂತರ ದೈಹಿಕ ಶಿಕ್ಷಕ ಸುಧಾಕರ್ 1988 ರಿಂದ ನಿರಂತರವಾಗಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಸಂಘವನ್ನು ಪುನಶ್ಚೇತನಗೊಳಿಸಿದ್ದು.ಈಗ ಅವರ ಅಗಲಿಕೆ ನಡುವೆಯೂ ಗೆಳೆಯರು ಅವರದೇ ಸ್ಮರಣಾರ್ಥ ಮಕ್ಕಳ ಬೇಸಿಗೆ ಶಿಬಿರವನ್ನು ಉಚಿತವಾಗಿ ಆಯೋಜಿಸುತ್ತಿದ್ದೇವೆ. ಕೋಲಾರ ಕ್ರೀಡಾ ಸಂಘದ ಬೇಸಿಗೆ ಶಿಬಿರ ರಾಜ್ಯದಲ್ಲಿಯೇ ಮಾದರಿಯಾಗಿದ್ದು, ಕೋಲಾರ ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತಿತರೆಡೆಗಳಿಂದಲೂ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದರೆಂದು ವಿವರಿಸಿದರು.
ಕೋಲಾರ ಕ್ರೀಡಾ ಸಂಘದ ಅಧ್ಯಕ್ಷ ಸಾಮಾ ಅನಿಲ್ಬಾಬುಮಾತನಾಡಿ, ಈ ಬಾರಿಯ ಶಿಬಿರವನ್ನು ಯಶಸ್ವಿಗೊಳಿಸಲು ಸಾಕಷ್ಟು ಮಂದಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಕ್ರೀಡಾ ತರಬೇತುದಾರ ಮಾಜಿ ಯೋಧರಾದ ಸುರೇಶ್ಬಾಬು ಮತ್ತು ಕೃಷ್ಣಮೂರ್ತಿ ಮಾತನಾಡಿ, ಪೆÇೀಷಕರು ಮಕ್ಕಳನ್ನು ಕೇವಲ ಓದಿಗೆ ಸೀಮಿತಗೊಳಿಸದೆ ಆಟವಾಡಲು ಬಿಡಬೇಕು, ಶಿಬಿರದಲ್ಲಿ ಕಲಿತಿರುವ ಕೌಶಲ್ಯವನ್ನು ನಿತ್ಯವೂ ಅಭ್ಯಾಸ ಮಾಡಬೇಕೆಂದರು.
ಪೆÇೀಷಕರ ಪರವಾಗಿ ಮಾತನಾಡಿದವರು, ಮಕ್ಕಳು ಬೆಳಿಗ್ಗೆ ಬೇಗ ಏಳಲು ಸೋಮಾರಿತನ ಮಾಡುತ್ತಿದ್ದರು. ಆದರೆ, ಬೇಸಿಗೆ ಶಿಬಿರ ಆರಂಭವಾದ ನಂತರ ತಾವೇ ತಾವಾಗಿ ಬೆಳಿಗ್ಗೆ ಬೇಗ ಎದ್ದು ಮೈದಾನಕ್ಕೆ ಬರುತ್ತಿದ್ದರು. ಇದೇ ಅಭ್ಯಾಸವನ್ನುಮುಂದುವರೆಸಿದರೆ ಉತ್ತಮ ವ್ಯಾಸಾಂಗವೂ ಸಾಧ್ಯವಾಗುತ್ತದೆ, ಶಿಬಿರವು ಅನೇಕ ರೀತಿಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿಯಾಡಿದೆಯೆಂದರು.
ಇದೇ ಸಂದರ್ಭದಲ್ಲಿ ನಗರಸಭಾ ನಿರ್ಗಮಿತ ಉಪಾಧ್ಯಕ್ಷ ಪ್ರವೀಣ್ಗೌಡ, ಕುಡಾ ನಿರ್ದೇಶಕ ಅಪ್ಪಿ ನಾರಾಯಣಸ್ವಾಮಿ, ಕೆ.ಎಸ್.ಗಣೇಶ್, ಚಂದ್ರು, ವಿಠಲರಾವ್, ಹರೀಶ್, ವಿಜಯ್ ಮತ್ತಿತರರು ಹಾಜರಿದ್ದರು.
ಶಿಬಿರದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪದಕ ಮತ್ತು ಪ್ರಮಾಣ ಪತ್ರಗಳನ್ನು ಹಾಗೂ ಶಿಬಿರದ ಎಲ್ಲಾ ಮಕ್ಕಳಿಗೂ ಟಿ ಶರ್ಟ್ಗಳನ್ನು ವಿತರಿಸಲಾಯಿತು. ಗಗನಶ್ರೀ, ಮೈಲಾರಿ, ಸಿಂಚನ ಸೇರಿದಂತೆ ಹಲವಾರು ಮಂದಿ ಶಿಬಿರದ ಅನುಭವಗಳನ್ನು ಹಂಚಿಕೊಂಡರು.
ಶಿಬಿರದ ಸಮಾರೋಪದ ಭಾಗವಾಗಿ ಮಕ್ಕಳನ್ನು ನಂದಿಗಿರಿಧಾಮಕ್ಕೆ ಪ್ರವಾಸ ಕರೆದೊಯ್ಯಲಾಯಿತು. ಇದಕ್ಕಾಗಿ ಪ್ರವೀಣ್ಗೌಡ ಮತ್ತು ಓಂಶಕ್ತಿ ಚಲಪತಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದ್ದರು.