

ಕೋಲಾರ,ಏ.15: ನಗರದ ಬ್ರೂಸ್ಲಿ ಕರಾಟೆ ಶಾಲೆಯ ವಿದ್ಯಾರ್ಥಿ ಸಿಯಾನ್ ಜಾನ್ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುತ್ತಾಳೆ.
ನಗರದ ಸೆಂಟ್ ಆನ್ಸ್ ಶಾಲೆಯಲ್ಲಿ 3ನೇ ತರಗತಿಯಲ್ಲಿ ಅಭ್ಯಸಿಸುತ್ತಿರುವ ಸಿಯಾನ್ ಜಾನ್ ತಂದೆ ಆದರ್ಶ ರೇವಂತ್, ತಾಯಿ ಲೆನೆಟ್ ಅವರ ಸುಪುತ್ರಿಯಾಗಿದ್ದಾರೆ.
ಇವರು ಈಗಾಗಲೇ ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಪದಕಗಳನ್ನು ಗಳಿಸಿರುತ್ತಾರೆ. ನಗರದ ಪ್ರತಿಷ್ಟಿತ ಭ್ರೂಸ್ಲಿ ಕರಾಟೆ ಶಾಲೆಯ ಸಂಸ್ಥಾಪಕ ಹಾಗೂ ಚಲನಚಿತ್ರ ನಟ ತರಬೇತುದಾರರಾದ ಕರಾಟೆ ಶ್ರೀನಿವಾಸರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಮುಂದಿನ ತಿಂಗಳು ಮಲೇಷ್ಯಾದಲ್ಲಿ ನಡಯಲಿರುವ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ.


