ಕೋಲಾರ,ಜೂ.14: ಸೆಹಗಲ್ ಪೌಂಡೇಶನ್ ವತಿಯಿಂದ ಕೋಲಾರ ಜಿಲ್ಲೆಯ 15 ರೈತ ಉತ್ಪಾದಕ ಸಂಸ್ಥೆಗಳ ಅತಿ ಬಡತನ ಕುಟುಂಬದ ಮಹಿಳೆಯರಿಗೆ ಜೀವನೋಪಯಕ್ಕಾಗಿ ಮತ್ತು ಆರ್ಥಿಕ ಸ್ಥಿತಿ ಸುದಾರಿಸಿಕೊಳ್ಳಲು ಕುರಿ ವಿತರಣೆ ಮತ್ತು ತರಬೇತಿ ಕಾರ್ಯಕ್ರಮವನ್ನು ಸೆಹಗಲ್ ಪೌಂಡೇಶನ್ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸೆಹಗಲ್ ಪೌಂಡೇಶನ್ ಪ್ರಾಜೆಕ್ಟ್ ಲೀಡ್ ಶಿವಶರಣಪ್ಪ ಮಾತನಾಡಿ, ಯೋಜನೆಯ ಉದ್ದೇಶ ಮತ್ತು ಕುರಿ ಸಾಕಾಣಿಕೆ ಮುಖಾಂತರ ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ತಿಳಿಸಿದರು.
ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಸುದರ್ಶನ್ ಕುರಿಸಾಕಾಣಿಕೆಯ ವಿವಿಧ ಅಂಶಗಳ ಕುರಿತು ತಿಳಿವಳಿಕೆ ಮೂಡಿಸಿದರು. ತರಬೇತಿಯು ಉತ್ತಮ ಗುಣಮಟ್ಟದ ಕುರಿತಳಿಗಳ ಆಯ್ಕೆ, ಪರಿಣಾಮಕಾರಿ ಆಹಾರ ಮತ್ತು ಪೆÇೀಷಣೆ ನಿರ್ವಹಣೆ, ರೋಗ ತಡೆಗಟ್ಟುವಿಕೆ ಮತ್ತುನಿಯಂತ್ರಣ, ಆಧುನಿಕ ತಳಿ ತಂತ್ರಗಳು, ಸರಿಯಾದ ವಸತಿ, ಪರಿಸರ ನಿರ್ವಹಣೆ ಮತ್ತು ಕುರಿಸಾಕಾಣಿಕೆಯ ಆರ್ಥಿಕ ಅಂಶಗಳು ಸೇರಿದಂತೆಪ್ರಮುಖ ವಿಷಯಗಳನ್ನು ಒಳಗೊಂಡಿದೆ. ದೀರ್ಘಾವಧಿಯ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಹ ಭಾಗವಹಿಸುವವರು ಸಮರ್ಥನೀಯ ಅಭ್ಯಾಸಗಳು ಮತ್ತು ಮಾರುಕಟ್ಟೆ ಸಂಪರ್ಕಗಳ ಬಗ್ಗೆ ತಿಳಿಸಿಕೊಟ್ಟರು.
ಎಸ್ಸ್ಮಾಟ್ಸ್ ಸಂಸ್ಥೆಯ ವರುಣ್ ಕುರಿಗಳ ಬೆಳವಣಿಗೆ ಮತ್ತು ಪೆÇೀಷಣೆಯಲ್ಲಿ ಹೈಡ್ರೋಪೆÇೀನಿಕ್ಸ್ನ ಪ್ರಾಮುಖ್ಯತೆಯ ಕುರಿತು ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು, ಈ ವಿಧಾನವು ಆಹಾರದ ಗುಣಮಟ್ಟವನ್ನು ಹೇಗೆ ಸುಧಾರಿಸುತ್ತದೆ, ಪೌಷ್ಟಿಕಾಂಶದ ಸೇವನೆಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯಕರ, ವೇಗವಾಗಿ ಬೆಳೆಯುತ್ತಿರುವ ಕುರಿಗಳನ್ನು ಉತ್ತೇಜಿಸುತ್ತದೆ ಎಂಬುವುದರ ಬಗ್ಗೆ ಮಾಹಿತಿ ನೀಡಿದರು.
ಕಾಯ9ಕ್ರಮದಲ್ಲಿ ಸೆಹೆಗಲ್ ಫೌಂಡೇಶನ್ ಸಂಸ್ಥೆಯ ಕಾರ್ಯಕ್ರಮ ಸಹವರ್ತಿಗಳಾದ ಪುಲಿ ವಿಜಯ, ಇಮ್ರಾನ್, ಲೆಕ್ಕಿಗ ವಿಜಯಕುಮಾರ ಮತ್ತು ಸಂಸ್ಥೆಯ ಸಿಬ್ಬಂದಿಗಳು ಹಾಗೂ ಕೋಲಾರ ಜಿಲ್ಲೆಯ 75 ರೈತರು ಹಾಜರಿದ್ದರು.