ಕೋಲಾರ,ಡಿ.15: ನಕಲಿ ಬಿತ್ತನೆ ಬೀಜ ಕೀಟನಾಶಕ ರಸಗೊಬ್ಬರ ನಿಯಂತ್ರಣಕ್ಕೆ ಪ್ರಬಲ ಕಾನೂನು ಜಾರಿ ಮಾಡಿ ನಕಲಿ ಕಂಪನಿಗಳ ಮಾರಾಟಗಾರರ ಜೊತೆ ಶಾಮೀಲಾಗಿರುವ ಗುಣಮಟ್ಟದ ಪರೀಶೀಲನಾ ಅಧಿಕಾರಿ ದನಂಜಯ್ರವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಕೆಲಸದಿಂದ ವಜಾ ಮಾಡಬೇಕೆಂದು ಡಿ.27 ರ ಬುದವಾರ ಆದಿಮಾ ಕ್ಕೆ ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳಿಗೆ ಶಾಂತಿಯುತವಾಗಿ ದಾಖಲೆಗಳ ಸಮೇತ ಮನವಿ ನೀಡಲು ಕುವೆಂಪು ಉದ್ಯಾನವನದಲ್ಲಿ ಕರೆದಿದ್ದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಆಂದ್ರ ತಮಿಳುನಾಡಿನಲ್ಲಿ ಜಾರಿಯಾಗಿರುವ ಬೀಜ ಕಾಯ್ದೆಯಿಂದ ನಿಷೇದಿತವಾಗಿರುವ ಕಂಪನಿಗಳು ಕರ್ನಾಟಕದಲ್ಲಿ ರೈತರ ಜೀವ ಹಿಂಡುತ್ತಿದ್ದರೂ ಕ್ರಮ ಕೈಗೊಂಡು ರೈತರ ರಕ್ಷಣೆ ಮಾಡಬೇಕಾಧ ಕೃಷಿ ಇಲಾಖೆ ಅಧಿಕಾರಿಗಳು ನಕಲಿ ಬಿತ್ತನೆ ಬೀಜ ಕೀಟನಾಶಕ ರಸಗೊಬ್ಬರ ದಂದೆಕೋರರ ಜೊತೆ ಶಾಮೀಲಾಗಿರುವುದು ದುರಾದೃಷ್ಟಕರ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ವಿಷಾದ ವ್ಯಕ್ತಪಡಿಸಿದರು.
ಸರ್ಕಾರ ವಕೀಲರ ಮೇಲೆ ವೈದ್ಯರ ಮೇಲೆ ಸರ್ಕಾರಿ ಅಧಿಕಾರಿಗಳ ಮೇಲೆ ಚಿಕ್ಕ ಸಮಸ್ಯೆ ಆದರೂ ಅವರ ರಕ್ಷಣೆಗೆ ತುರ್ತಾಗಿ ಕಾನೂನು ಜಾರಿ ಮಾಡುವ ಮಾನ್ಯ ಮುಖ್ಯಮಂತ್ರಿಗಳೇ ದೇಶದ 135 ಕೊಟಿ ಜನಸಂಖ್ಯೆಗೆ ಅನ್ನ ಹಾಕುವ ಅನ್ನದಾತನನ್ನು ವಂಚನೆ ಮಾಡುತ್ತಿರುವ ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣಕ್ಕೆ ಕಾನೂನು ಜಾರಿ ಮಾಡಲು ಹಿಂದೇಟು ಏಕೆ? ಬಹುರಾಷ್ಟ್ರೀಯ ಕಂಪನಿಗಳ ಜೊತೆ ಸರ್ಕಾರ ಶಾಮೀಲಾಗಿದ್ದಾರೆಯೇ ಎಂದು ಸಭೆಯಲ್ಲಿ ಪ್ರಶ್ನೆ ಮಾಡಿದರು.
ಕೃಷಿ ಇಲಾಖೆಯಿಂದ ಪರವಾನಗಿ ಪಡೆದು ಔಷದಿ ವ್ಯಾಪಾರ ಮಾಡುವ ಹಾಗೂ ಹೊರ ರಾಜ್ಯದ ಕಂಪನಿಗಳಿಂದ ವಿತರಣೆ ಆಗುವ ಔಷಧಿಗಳ ಸಂಪೂರ್ಣ ಮಾಹಿತಿಯನ್ನು ಹಾಗೂ ದಾಸ್ತಾನು ಮಾಡುವ ಮಳಿಗೆಗಳ ವಿವರವನ್ನು ಕೃಷಿ ಇಲಾಖೆಗೆ ಕೊಡಬೇಕಾದ ಪರವಾನಗಿದಾರರು ಯಾವುದೇ ಮಾಹಿತಿ ನೀಡದೆ ಕೃಷಿ ಇಲಾಖೆಯ ಅಧಿಕಾರಿಗಳ ಕಾಲಕಸದಂತೆ ಕಂಡು ತಮಗೆ ಇಷ್ಟ ಬಂದ ರೀತಿ ಔಷದಿಗಳನ್ನು ರಾತ್ರಿವೇಳೆ ಕಳ್ಳತನವಾಗಿ ಮಾರಾಟ ಮಾಡುವುದೇಕೆ? ಗುಣಮಟ್ಟವಿದ್ದರೆ ಸಾರ್ವಜನಿಕವಾಗಿ ಅಂಗಡಿಯನ್ನು ತೆರೆದು ರೈತರಿಗೆ ವಿತರಣೆ ಮಾಡಬಹುದಿತ್ತಲ್ಲವೇ ಎಂದರು.
ಜಿಲ್ಲಾ ಕಾರ್ಯಾದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ 5 ವರ್ಷಗಳಿಂದ ಟೊಮೊಟೊ ಸೇರಿದಂತೆ ಮತ್ತಿತರ ಬೆಳೆಗಳಿಗೆ ಬಾದಿಸುತ್ತಿರುವ ಬೀಕರ ರೋಗಗಳ ನಿಯಂತ್ರಣಕ್ಕೆ ಲಕ್ಷಾಂತರ ರೂಪಾಯಿ ಹಣ ನೀಡಿ ಖರೀದಿ ಮಾಡಿದ ಔಷದಿಗಳನ್ನು ಸಿಂಫರಣೆ ಮಾಡಿದರು ಗಿಡದ ಮೇಲಿರುವ ಸೊಳ್ಳೆ ಸಹ ಸಾಯುತ್ತಿಲ್ಲ ಅಷ್ಟರ ಮಟ್ಟಿಗೆ ನಕಲಿ ಔಷಧಿಗಳ ದರ್ಬಾರು ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳಬೇಕಾದ ಕೃಷಿ ಅಧಿಕಾರಿಗಳು ನಾಪತ್ತೆ ಆಗಿ ದೂರು ನೀಡಿದರೆ ಕಂಪನಿಗಳ ಪರ ನಿಂತು ರೈತರನ್ನು ತಪ್ಪಿತಸ್ಥರೆಂಧು ವರದಿ ನೀಡುತ್ತಿದ್ದಾರೆಂದು ಆರೋಪ ಮಾಡಿದರು.
ಜಿಲ್ಲಾದ್ಯಂತ 3800 ನಕಲಿ ಕಂಪನಿಗಳು 2100 ವ್ಯಾಪಾರಾಸ್ಥರು 480 ಔಷದಿ ವಿತರಕರು ಇದ್ದು, ಗುಣಮಟ್ಟದ ಔಷಧಿ ಮಾತ್ರ ರೈತರಿಗೆ ಮರಿಚೀಕೆ ಆಗಿದೆ ಸಾವಿರಾರು ಕೋಟಿ ವ್ಯವಹಾರ ನಡೆಯುವ ಔಷದಿ ಕಂಪನಿಗಳ ನಿಯಂತ್ರಣ ಅಧಿಕಾರಿಗಳ ಹಿಡಿತದಲ್ಲಿಲ್ಲದೆ ಪ್ರತಿ ತಿಂಗಳು ಗುಣಮಟ್ಟ ಪರೀಶೀಲನೆ ಮಾಡಬೇಕಾದ ಜಾಗೃತಿ ಕೋಶದ ದನಂಜಯ್ರವರು ನಕಲಿ ಕಂಪನಿಗಳ ಜೊತೆ ಶಾಮೀಲಾಗಿ ಗುಣಮಟ್ಟ ಔಷಧಿ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ದಿಕ್ಕುತಪ್ಪಿಸಿ ಕಳಪೆ ಔಷಧಿಗಳನ್ನು ಮಾರಾಟ ಮಾಡಿ ನಿಮ್ಮ ರಕ್ಷಣೆಗೆ ನಾನಿದ್ದೇನೆ ಎಂದು ಲಕ್ಷ ಲಕ್ಷ ಲೂಟಿ ಮಾಡುವ ಅಧಿಕಾರಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದರೆ ಇಲಾಖೆಯ ಗೌರವ ರೈತರ ಶ್ರಮ ಉಳಿಯುತ್ತದೆ ಎಂದು ದೂರು ನೀಡಿದರು.
ಡಿ.27 ರ ಬುದವಾರ ಆದಿಮಾಕ್ಕೆ ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳನ್ನು ಶಾಂತಿಯುತವಾಗಿ ಜಿಲ್ಲೆಯ ರೈತರ ರಕ್ತ ಹೀರುತ್ತಿರುವ ನಕಲಿ ಬಿತ್ತನೆ ಬೀಜ ಕೀಟ ನಾಶಕ ಕಂಪನಿಗಳ ವಿರುದ್ದ ದಾಖಲೆಗಳ ಸಮೇತ ದೂರು ನೀಡಿ ಸರ್ಕಾರದ ಸಂಬಳ ಪಡೆದು ನಕಲಿ ಕಂಪನಿಗಳ ಜೊತೆ ಶಾಮೀಲಾಗಿರುವ ಜಾಗೃತ ಕೋಶದ ಅಧಿಕಾರಿ ದನಂಜಯ್ರವರ ವಿರುದ್ದ ಕ್ರಮಕ್ಕಾಗಿ ಮನವಿ ನೀಡುವ ನಿರ್ದಾರವನ್ನು ಸಭೆಯಲ್ಲಿ ತಿರ್ಮಾನಿಸಲಾಯಿತು.
ಸಭೆಯಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಮೂರಾಂಡಹಳ್ಳಿ ಶಿವಾರೆಡ್ಡಿ, ಕದರಿನತ್ತ ಅಪ್ಪೋಜಿರಾವ್, ತಿಮ್ಮಣ್ಣ, ನರಸಿಂಹಯ್ಯ, ಶೈಲಜ, ರಾಧಮ್ಮ, ನಾಗರತ್ನ, ಶೋಭ , ಚೌಡಮ್ಮ ಮುಂತಾದವರಿದ್ದರು.