ಕೋಲಾರ, ಮಾ,9: ಮಹಿಳಾ ದಿನಾಚರಣೆಯಂದು ಮಹಿಳೆಯರಿಗೆ ಗೌರವ ಕೊಡಬೇಕಾದ ಜವಬ್ದಾರಿ ಸ್ಥಾನದಲ್ಲಿರುವ ಸಂಸದರು ಕುಂಕುಮ ವಿಚಾರದಲ್ಲಿ ಸಾರ್ವಜನಿಕವಾಗಿ ಗಂಡ ಬದುಕಿದ್ದಾನಾ? ಕಾಮನ್‍ಸೆನ್ಸ್ ಇಲ್ಲ ಹಣಕ್ಕಾಗಿ ಮತಾಂತರ ಮಾಡಿಕೊಳ್ಳುತ್ತೀರಾ ಎಂದು ಸಾರ್ವಜನಿಕರವಾಗಿ ಅವಮಾನ ಮಾಡಿರುವುದನ್ನು ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಸಂಸದರ ಹೇಳಿಕೆಯನ್ನು ಪತ್ರಿಕಾ ಹೇಳಿಕೆ ಮುಖಾಂತರ ಸಂಸದರ ನಡೆ ಮಹಿಳಾ ವಿರೋದಿ ನಡೆಯಾಗಿದೆ ಎಂದು ಖಂಡಿಸಿದ್ದಾರೆ.
ದೇಶಾದ್ಯಾಂತ ಪ್ರತಿದಿನ ಎರಡು ವರ್ಷದ ಮಗುವಿನಿಂದ ನೂರು ವರ್ಷದ ಮುದುಕಿಯವರೆಗೆ ಅತ್ಯಾಚಾರ ದೌರ್ಜನ್ಯ ಕೊಲೆ ಒಂದಲ್ಲ ಒಂದು ದೌರ್ಜನ್ಯ ನಡೆಯುತ್ತಿದ್ದರೂ ಅದನ್ನು ಸರಿಪಡಿಸದ ಸರ್ಕಾರಗಳ ವಿರುದ್ದ ದ್ವನಿ ಎತ್ತಿ ನೊಂದ ಮಹಿಳೆಯರ ಪರ ನಿಲ್ಲಬೇಕಾದ ಸಂಸದರು ರಂಗಮಂದಿರದಲ್ಲಿ ಮಹಿಳಾ ದಿನಾಚರಣೆಯ ದಿನದಂದೇ ಹಣೆಗೆ ಕುಂಕಮ ಇಡದ ಮಹಿಳೆಗೆ ಗಂಡ ಬದುಕಿದ್ದಾನಾ? ಹಾಗಾದರೆ ಹಣೆಗೆ ಕುಂಕುಮ ಯಾಕೆ ಇಟ್ಟಿಲ್ಲ ಹಣಕ್ಕಾಗಿ ಮತಾಂತರ ಆಗಿದ್ದೀಯಾ ಎಂದು ಪ್ರಶ್ನೆ ಮಾಡುವ ಮೂಲಕ ಮಹಿಳೆಯ ಮೇಲೆ ತಮ್ಮ ಪ್ರತಾಪ ತೋರಿಸುವ ಸಂಸದರು ನಿಮ್ಮ ಕಣ್ಣಿಗೆ ಆ ಹೆಣ್ಣುಮಗುವಿನ ಕುಂಕುಮ ಕಾಣಿಸಿಲ್ಲ ಎಂದರೆ ಮಹಿಳೆಯರಿಗೆ ಹೇಳಿ ಇಂದು ಮಹಿಳಾ ದಿನಾಚರಣೆ ಮಹಿಳೆಯರಿಗೆ ಹಿಂದೂ ಸಂಪ್ರದಾಯದ ಪ್ರಕಾರ ಹಣೆಗೆ ಕುಂಕುಮ ಲಕ್ಷಣ ಅದನ್ನು ಸರಿಪಡಿಸಿಕೊಳ್ಳುವಂತೆ ಹೇಳಬಹುದಾಗಿತ್ತು, ಸಾರ್ವಜನಿಕವಾಗಿ ಮಹಿಳೆಗೆ ಈ ರೀತಿಯಾಗಿ ಕುಂಕುಮ ಇಟ್ಟಿಲ್ಲ, ಗಂಡ ಬದುಕಿದ್ದಾನಾ ? ಕಾಮನ್ ಸೆನ್ಸ್ ಇಲ್ವಾ ಎಂದು ಸಾರ್ವಜನಿಕವಾಗಿ ಮಾತನಾಡಿರುವುದನ್ನು ಖಂಡಿಸುವ ಜೊತೆಗೆ ಆ ಮಹಿಳೆಯನ್ನು ಸಂಸದರು ಬಹಿರಂಗವಾಗಿ ಕ್ಷಮಾಪಣೆ ಕೋರಬೇಕು ಇಲ್ಲವಾದರೆ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪತ್ರಿಕಾ ಹೇಳಿಕೆಯ ಮುಖಾಂತರ ಜವಬ್ದಾರಿ ಸ್ಥಾನದಲ್ಲಿರುವ ಸಂಸದರಾದ ಮುನಿಸ್ವಾಮಿರವರನ್ನು ಅಗ್ರಹಿಸಿದರು.