ಕರ್ನಾಟಕ ಸರ್ಕಾರ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಹಿರಿಯ ಸಹಾಯಕ ನಿರ್ದೇಶಕರ ಕಛೇರಿ, ಜಿಲ್ಲಾ ನ್ಯಾಯಾಲಯ ಸಂಕೀರ್ಣ ಆವರಣ, ಕೋಲಾರ-563101.
ದೂರವಾಣಿ: 08152-222077
E-Mail ID – vaarthailakhekolar@gmail.com
ದಿನಾಂಕ: 04-04-2024
ಪತ್ರಿಕಾ ಪ್ರಕಟಣೆ
ಲೋಕಸಭಾ ಸಾರ್ವತ್ರಿಕ ಚುನಾವಣೆ-2024 : 25 ನಾಮಪತ್ರಗಳ ಸಲ್ಲಿಕೆ
ಕೋಲಾರ, ಏಪ್ರಿಲ್ 04 (ಕರ್ನಾಟಕ ವಾರ್ತೆ): ನಂ.14-14
ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ (04-04-2024) ಇಲ್ಲಿಯವರೆಗೆ 25 ಅಭ್ಯರ್ಥಿಗಳಿಂದ 33 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದ್ದಾರೆ.
28-ಕೋಲಾರ (ಪ.ಜಾ) ಲೋಕಸಭಾ ಕ್ಷೇತ್ರದಿಂದ 2024ರ ಸಾರ್ವತ್ರಿಕ ಚುನಾವಣೆಗೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೌತಮ್ ಕೆ.ವಿ. ಅವರು ಮೂರು ನಾಮಪತ್ರಗಳು ಹಾಗೂ ಜನತಾದಳ (ಜಾತ್ಯತೀತ) ಅಭ್ಯರ್ಥಿಯಾಗಿ ಎಂ. ಮಲ್ಲೇಶ ಬಾಬು ಅವರು ಮೂರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಆರ್. ರಂಜಿತ್ ಕುಮಾರ್, ಎಂ. ವೆಂಕಟಸ್ವಾಮಿ, ಸುಮನ್ ಹೆಚ್.ಎನ್, ಬಿ.ಇ. ವಿಶ್ವನಾಥ್, ಕೆ.ಎಚ್. ಮಧುಸೂದನ್, ಎಂ. ಮುನಿಗಂಗಪ್ಪ, ಆರ್. ರಾಜೇಂದ್ರ, ಶ್ರೀನಿವಾಸ ಪಿ., ಎ.ಟಿ. ಕ್ರಿಷ್ಣನ್, ಎಸ್.ಎನ್ ನಾರಾಯಣಸ್ವಾಮಿ. ವಿ., ಕ್ರಿಷ್ಣಯ್ಯ ಎನ್., ಚಂದ್ರಶೇಖರ ಎಂ., ಜಿ. ಲಲಿತಾ ನಾಮಪತ್ರ ಸಲ್ಲಿಸಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ- ಮಹೇಶ್. ಎ.ವಿ, ಉತ್ತಮ ಪ್ರಜಾಕೀಯ ಪಾರ್ಟಿ- ದೇವರಾಜ. ಎ., ಸೊಷ್ಯಲಿಸ್ಟ್ ಪಾರ್ಟಿ (ಇಂಡಿಯಾ)- ಡಿ. ಗೋಪಾಲಕೃಷ್ಣ, ಬಹುಜನ ಸಮಾಜ ಪಾರ್ಟಿ-ಸುರೇಶ್. ಎಸ್.ಬಿ, ಎನ್.ಎಂ.ಕೆ ಪಕ್ಷದ ಅಭ್ಯರ್ಥಿ ಎಲ್. ಬಾಬು, ಆರ್.ಪಿ.ಐ ಪಕ್ಷ- ಎನ್.ಜೆ. ನರಸಿಂಹಮೂರ್ತಿ, ಲೋಕಶಕ್ತಿ ಪಕ್ಷ- ಎಂ.ಎಸ್. ಬದರಿನಾರಯಣ, ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾ- (ಕರ್ನಾಟಕ) ಪಕ್ಷದ ತಿಮ್ಮರಾಯಪ್ಪ, ದಿಲ್ಲಿ ಜನತಾ ಪಾರ್ಟಿ- ಕೆ.ಆರ್. ದೇವರಾಜ, ವಿ.ಸಿ.ಕೆ (ವಿಡುದಲೈ ಚಿರತೆಗಳ್ ಕಚ್ಚಿ)- ಎಂ. ವೇಣುಗೋಪಾಲ ವಿವಿಧ ಪಕ್ಷಗಳಿಂದ ನಾಮಪತ್ರ ಸಲ್ಲಿಕೆಯಾಗಿವೆ.
ಒಟ್ಟಾರೆ ಇದುವರೆಗೆ 25 ಅಭ್ಯರ್ಥಿಗಳಿಂದ 33 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್ ಪ್ರತಿಯನ್ನು ಭಾರತ ಚುನಾವಣಾ ಆಯೋಗದ ವೆಬ್‍ಸೈಟ್ https://affidavit.eci.gov.in ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ ಮತ್ತು ಚುನಾವಣಾಧಿಕಾರಿಗಳ ಕಾರ್ಯಾಲಯದ ಸೂಚನಾ ಫಲಕದಲ್ಲಿ ನಾಮಪತ್ರದ ನಕಲು ಪ್ರತಿ ಮತ್ತು ಅಫಿಡವಿಟ್‍ನ್ನು ಪ್ರಚುರ ಪಡಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದ್ದಾರೆ. ನಾಮಪತ್ರ ಸ್ವೀಕರಿಸುವ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಶಂಕರ ವಣಿಕ್ಯಾಳ ಅವರು ಉಪಸ್ಥಿತರಿದ್ದರು.