ತೋಟಗಾರಿಕೆ ಮಹಾವಿದ್ಯಾಲಯ,ಕೋಲಾರಆವರಣದಲ್ಲಿ ದಿನಾಂಕ 25.05.2024 ರಿಂದ04.06.2024 ರವರೆಗೆ 15ದಿನಗಳ ಇಂಟರಶಿಪ್ ಕಾರ್ಯಾಕ್ರಮವನ್ನು ಮಹಿಳಾ ಸರ್ಕಾರಿ ಕಾಲೇಜ್ ಕೋಲಾರದಅಂತಿಮ ವರ್ಷದ 20 ವಿದ್ಯಾರ್ಥಿನಿಯರಿಗೆ ಕೈಗೊಳ್ಳಲಾಯಿತು. ದಿನಾಂಕ 20.05.2024ರಂದುತೋಟಗಾರಿಕೆ ಮಹಾವಿದ್ಯಾಲಯದ ಡೀನ್ರವರಾದ ಡಾ.ವೆಂಕಟೇಶಲುರವರು ಇಂಟರಶಿಪ್ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿದರು. ಈ ಕಾರ್ಯಕ್ರಮಕ್ಕೆ ಶ್ರೀಮತಿ. ಪದ್ಮಾ, ಮುಖ್ಯಸ್ಥರು ಸಸ್ಯಶಾಸ್ರ್ತ ವಿಭಾಗ, ಶ್ರೀಮತಿ.ಶೋಭಾ ಹಾಗೂ ಶ್ರೀಮತಿ.ಲಾವಣ್ಯ ಪ್ರಾಧ್ಯಾಪಕರು, ಮಹಿಳಾ ಸರ್ಕಾರಿಕಾಲೇಜ್,ಕೋಲಾರರವರು ಅತಿಥಿಗಳಾಗಿ ಭಾಗವಹಿಸಿದ್ದರು.
ಇಂಟರ್ಶಿಪ್ ತರಬೇತಿಯಲ್ಲಿ ತೋ.ಮ.ವಿ,ಕೋಲಾರದ ವಿವಿಧ ಪ್ರಾಧ್ಯಾಪಕರುತೋಟಗಾರಿಕೆ ವಿಜ್ಞಾನಕ್ಕೆಸಂಬಂಧಿಸಿದ ವಿಷಯಗಳ ಕುರಿತು ಭೋದನೆಹಾಗೂ ಪ್ರಾಯೋಗಿಕ ತರಬೇತಿಗಳನ್ನು ಕೈಗೊಂಡರು. ಮುಖ್ಯವಾಗಿ ವಿವಿಧತೋಟಗಾರಿಕೆ ಬೆಳೆಗಳ ಬೀಜಗಳ ರೂಪ, ವಿಂಗಡನೆ ಹಾಗೂ ಶೇಖರಣೆ, ವಿವಿಧ ಬೀಜಗಳ ಮೊಳಕ ಪರೀಕ್ಷೆ ಮಾಡುವುದು, ಪ್ರಮುಖತರಕಾರಿ ಬೆಳೆಗಳ ರಚನೆ ಮತ್ತು ಅವುಗಳ ಉತ್ಪಾದನೆ ತಾಂತ್ರಿಕತೆಗಳು, ಹೂವಿನ ಬೆಳೆಗಳ ವಂಶಾಭಿವೃಧ್ಧಿ ಹಾಗೂ ಮೌಲ್ಯ ವರ್ದನೆ, ಬಹು ವಾರ್ಷಿಕ ಹಣ್ಣಿನ ಬೆಳೆಗಳ ಆಕಾರ ನಿರ್ವಹಣೆ,ತೋಟಗಾರಿಕೆಬೆಳೆಗಳಲ್ಲಿ ಹೊದಿಕೆಯ ಮಹತ್ವ, ಸುಗಂಧ ಬೆಳೆಗಳಲ್ಲಿ ಎಣ್ಣೆಯನ್ನುತೆಗೆಯುವ ವಿಧಾನ ಹಾಗೂ ಅದರಉದ್ಯಮ, ಹವಾಮಾನ ಮೂನ್ಸೂಚನೆ ಹಾಗೂ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿಅದರ ಪ್ರಾಮುಖ್ಯತೆ, ಎರೆಹುಳು ಗೊಬ್ಬರತಯಾರಿಕೆ, ಟೊಮೆಟೊ ಮತ್ತು ಬದನೆಯಲ್ಲಿ ಕಸಿಕಟ್ಟುವ ವಿಧಾನಹಾಗೂ ಅದರಪ್ರಾಮುಖ್ಯತೆ, ಮಣ್ಣಿನ ಪರೀಕ್ಷೆ ಹಾಗೂ ಮಣ್ಣು ಪರಿಕ್ಷೆಆಧಾರಿತ ಪೋಷಕಾಂಶಗಳ ನಿರ್ವಹಣೆಕುರಿತು ವಿವರವಾದಅಧ್ಯಯನದಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ದಿನಾಂಕ: 05.06.2024 ರಂದುಬೀಳ್ಕೊಡುಗೆ ಸಮಾರಂಭದಲ್ಲಿತೋಟಗಾರಿಕೆ ಮಹಾವಿದ್ಯಾಲಯದಡೀನ್ರವರು ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನುಮಹಿಳಾ ಸರ್ಕಾರಿಕಾಲೇಜ್,ಕೋಲಾರದ ಸಹಯೋಗದಲ್ಲಿಹಮ್ಮಿಕೊಂಡು ವಿವಿಧ ಉದ್ಯಮಗಳನ್ನು ಸ್ಥಾಪಿಸಲು ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಲಾಗುತ್ತದೆಎಂದು ತಿಳಿಸಿದರು. ಶ್ರೀಮತಿ.ಶೋಭಾ, ಪ್ರಾಧ್ಯಾಪಕರು, ಮಹಿಳಾ ಸರ್ಕಾರಿಕಾಲೇಜ್,ಕೋಲಾರರವರು ಮಾತನಾಡಿವಿದ್ಯಾರ್ಥಿಗಳ ಚಟುವಟಿಕೆಗಳ ಕುರಿತು ಸಂತೋಷ ವ್ಯಕ್ತಪಡಿಸಿದರು ಹಾಗೂ ತೋಟಗಾರಿಕೆ ಮಹಾವಿದ್ಯಾಲಯದಡೀನ್ರವರಾದಡಾ.ವೆಂಕಟೇಶಲುರವರಿಗೆ ಹಾಗೂಪ್ರಾಧ್ಯಾಪಕರುಗಳಿಗೆ ಅಭಿನಂದನೆಗಳನ್ನು ತಿಳಿಸಿದರು.ಮಹಾವಿದ್ಯಾಲಯದಹಾಗೂ ಮಹಿಳಾ ಸರ್ಕಾರಿಕಾಲೇಜ್,ಕೋಲಾರದಇತರ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.
ಈ ಇಂಟರ್ಶಿಪ್ ಕಾರ್ಯಕ್ರಮ ಸಂಚಾಲಕರು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಜ್ಯೋತಿಕಟ್ಟೆಗೌಡರ, ಡಾ. ಬಾಬು ಎ, ಜಿ. ಹಾಗೂ ಡಾ.ರಾಜೇಶ್ ಎ, ಎಂ. ರವರಾಗಿದ್ದರು.