ಕೋಲಾರ: ಸಮಾಜದ ಎಲ್ಲಾ ವರ್ಗಗಳಿಗೂ ಶುದ್ಧ ಕುಡಿಯುವ ನೀರು ಕೊಡುವ ಉದ್ದೇಶದಿಂದ ಹೊಂಡಾ ಕಂಪನಿಯು ಮುಂದೆ ಬಂದಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ತಿಳಿಸಿದರು
ವಕ್ಕಲೇರಿಯ ಸಿ.ಬ್ಲಾಕ್ ನಲ್ಲಿ ನರಸಾಪುರ ಹೊಂಡಾ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ 10 ಲಕ್ಷ ವೆಚ್ಚದ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಾದ್ಯಂತ ಕುಡಿಯುವ ನೀರು ಫ್ಲೋರೈಡ್ ನಿಂದ ಕೂಡಿದ್ದು ಮನುಷ್ಯನ ಆರೋಗ್ಯ ದೃಷ್ಟಿಯಿಂದ ಸರ್ಕಾರದೊಂದಿಗೆ ಖಾಸಗಿ ಕಂಪನಿಗಳು ಮುಂದೆ ಬಂದಿದ್ದಾರೆ ಇದರ ನಿರ್ವಹಣೆ ಸಹ ಕಂಪನಿಯೇ ನೋಡಿಕೊಳ್ಳುತ್ತಾ ಇರುವುದು ಹೆಮ್ಮೆಯ ವಿಷಯವಾಗಿದೆ ಎಂದರು
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು ಮಾತನಾಡಿ ಹೋಬಳಿ ಕೇಂದ್ರವಾಗಿರುವ ಈ ಗ್ರಾಮದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮತ್ತೊಂದು ಶುದ್ದೀಕರಣ ಘಟಕ ಮಾಡಲು ಸ್ಥಳೀಯ ಸಂಘಸಂಸ್ಥೆಗಳ ಗಮನಕ್ಕೆ ತರಲಾಗುತ್ತದೆ ಇರುವ ಘಟಕಗಳಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಕ್ಕಲೇರಿ ಗ್ರಾಪಂ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ.ಎನ್ ಹೋಂಡಾ ಕಂಪನಿಯ ವಿನೋದ್, ಮಲ್ಲಿಕಾರ್ಜುನ್, ಮಾಜಿ ಅಧ್ಯಕ್ಷ ವಕ್ಕಲೇರಿ ರಾಜಪ್ಪ ಮಾಜಿ ತಾಲೂಕ್ ಪಚಾಯತ್ ಅಧ್ಯಕ್ಷ ರಮಾದೇವಿ ಚಲಪತಿ, ಉಪಾಧ್ಯಕ್ಷೆ ಚಿನ್ನಮ್ಮ, ಸದಸ್ಯರಾದ ಎಂ ಆನಂದ್, ಶ್ರೀನಿವಾಸ್, ಶ್ರೀಪತಿ, , ಜಯಲಕ್ಷ್ಮಿ, ಜ್ಯೋತಿ,ಕವಿತಾ, ಬೊಟ್ಟು ರಾಜಪ್ಪ, ಲೋಕೇಶ್, ಶೋಭಾ ಮಂಜುನಾಥ್ , ಜಯಲಕ್ಷ್ಮಿ ವೆಂಕಟೇಶ್, ಚಿನ್ನಮ್ಮ ಚಿಕ್ಕಮರಿಯಪ್ಪ, ಪಿಡಿಒ ಮಂಜುನಾಥ್ ಹಾಗೂ ಗ್ರಾಮ ಪಂಚಾಯಿತಿ ಸಿಬಂದಿ ವರ್ಗದವರು ಹಾಗೂ ಇನಾಯತ್ ರವರು ಗ್ರಾಮದ ಮುಕಂಡರು ಮುಂತಾದವರು ಇದ್ದರು.