ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಜಿಲ್ಲೆಯ ದಮನಿತ ಮಹಿಳೆಯರ ಕ್ಷೇಮಾಭಿವೃದ್ಧಿಗೆ ಸ್ಥಾಪಿತಗೊಂಡು ಸೇವೆ ಸಲ್ಲಿಸುತ್ತಿರುವ ಕೋಲಾರ ಜಿಲ್ಲಾ ಸೌಖ್ಯ ಸಮೃದ್ಧಿ ಸಂಸ್ಥೆಯು ಆ.7 ರಿಂದ ಆ.20 ರವರೆವಿಗೂ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದೆ.
ಜಿಲ್ಲೆಯ ದಮನಿತ ಮಹಿಳೆಯರು ವಾರ್ಷಿಕ ಹಾಗೂ ಅಜೀವ ಸದಸ್ಯತ್ವಕ್ಕಾಗಿ ವಿಳಾಸದ ಪುರಾವೆ, ಎರಡು ಭಾವಚಿತ್ರಗಳನ್ನು ನೀಡಿ ವಾರ್ಷಿಕ ಹಾಗೂ ಅಜೀವ ಸದಸ್ಯತ್ವ ಶುಲ್ಕ ಪಾವತಿಸಿ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ವೈ.ಎಸ್.ವೀಣಾ, ಕಾರ್ಯದರ್ಶಿ ಸುಮಿತ್ರ ಕೋರಿದ್ದಾರೆ