ಕೋಲಾರ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ – ಮಲ್ಲಿಕಾರ್ಜುನ್,ಮುನಿರಾಜು ಸೇರಿ 18 ಮಂದಿಗೆ ಸನ್ಮಾನ

ಕೋಲಾರ:- ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ,ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಸರ್ಕಾರಿ,ಅನುದಾನಿತ ಶಾಲೆಗಳ ಒಟ್ಟು 18 ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪ್ರತಿ ತಾಲ್ಲೂಕಿನಿಂದಲೂ ಕಿರಿಯಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲಾ ವಿಭಾಗಗಳು ಸೇರಿದಂತೆ ತಲಾ ಮೂವರು ಶಿಕ್ಷಕರನ್ನು ಆಯ್ಕೆ ಮಾಡಿದ್ದು, ಜಿಲ್ಲೆಯ ಎಲ್ಲಾ 6 ತಾಲ್ಲೂಕುಗಳ 18 ಶಿಕ್ಷಕರನ್ನು ಗೌರವಿಸಲಾಯಿತು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕಪ್ರಶಸ್ತಿಗೆ ಭಾಜನರಾದ ಶಿಕ್ಷಕರೆಂದರೆ ಪ್ರೌಢಶಾಲಾ ವಿಭಾಗದಿಂದ ಕೋಲಾರ ತಾಲ್ಲೂಕಿನ ಕ್ಯಾಲನೂರು ಕೆಪಿಎಸ್ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಓ.ಮಲ್ಲಿಕಾರ್ಜುನ್, ಬಂಗಾರಪೇಟೆ ತಾಲ್ಲೂಕಿನ ಬಲಮಂದೆ ಪ್ರೌಢಶಾಲೆಯ ಎ.ಗಿರಿಯಪ್ಪ, ಕೆಜಿಎಫ್ ತಾಲ್ಲೂಕು ಸೆಂಟ್‍ಜೋಸೆಫ್ ಅನುದಾನಿತ ಶಾಲೆಯ ಎಂ.ಹೆಚ್.ಯೋಗೇಂದ್ರಯ್ಯ, ಮಾಲೂರು ತಾಲ್ಲೂಕು ಕೆಎಲ್‍ಇ ಅನುದಾನಿತ ಶಾಲೆಯ ಜಯಪ್ರಕಾಶ್, ಮುಳಬಾಗಿಲು ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಟಿ.ಎಸ್.ನಾಗೇಶ್, ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಆರ್.ಶ್ರೀನಿವಾಸಲು ಭಾಜನರಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು


ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬಂಗಾರಪೇಟೆ ತಾಲ್ಲೂಕು ದೊಡ್ಡಚಿನ್ನಹಳ್ಳಿ ಶಾಲೆ ಶಿಕ್ಷಕಿ ಕೆ.ಸಿ.ಪದ್ಮಾವತಿ, ಕೆಜೆಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಶಾಲೆಯ ಸುನಂದಮ್ಮ, ಕೋಲಾರ ತಾಲ್ಲೂಕಿನ ಐತರಸನಹಳ್ಳಿ ಶಾಲೆಯ ಶಿಕ್ಷಕ ಸಿ.ಮುನಿರಾಜು, ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ಶಾಲೆಯ ಮುತ್ತಣ್ಣ, ಮುಳಬಾಗಿಲು ತಾಲ್ಲೂಕು ಜಿ.ಮಾರಾಂಡಹಳ್ಳಿ ಶಾಲೆಯ ಶಿಕ್ಷಕ ನಾಗರಾಜಯ್ಯ, ಶ್ರೀನಿವಾಸಪುರ ತಾಲ್ಲೂಕು ಹರಳಕುಂಟೆ ಶಾಲೆ ಮುಖ್ಯ ಶಿಕ್ಷಕ ಕೆ.ಎಚ್.ಮೋಹನ್‍ಕುಮಾರ್ ಗುಪ್ತ ಭಾಜನರಾಗಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗದ ಶಿಕ್ಷಕರು


ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬಂಗಾರಪೇಟೆ ತಾಲ್ಲೂಕು ಗುಟ್ಟಹಳ್ಳಿ ಶಾಲೆಯ ರಮೇಶ್, ಕೆಜಿಎಫ್ ತಾಲ್ಲೂಕಿನ ಬ್ಯಾಟರಾಯನಹಳ್ಳಿ ಶಾಲೆ ಶಿಕ್ಷಕಿ ಹೆಚ್.ವಿ.ಶ್ಯಾಮಲ, ಕೋಲಾರ ತಾಲ್ಲೂಕಿನ ಗಿರ್ನಹಳ್ಳಿ ಶಾಲೆಯ ರೂಪ, ಮಾಲೂರು ತಾಲ್ಲೂಕು ಚವರಮಂಗಲ ಶಾಲೆ ಶಿಕ್ಷಕ ತಿಮ್ಮರಾಯಪ್ಪ, ಮುಳಬಾಗಿಲು ತಾಲ್ಲೂಕಿನ ಆರ್.ಗಡ್ಡೂರು ಶಾಲೆಯ ಶಿಕ್ಷಕಿ ಆರ್.ಶಾರದಮ್ಮ, ಶ್ರೀನಿವಾಪುರ ತಾಲ್ಲೂಕು ಬಿಸನಹಳ್ಳಿ ಶಾಲೆ ಶಿಕ್ಷಕಿ ಎನ್.ಸರೋಜಮ್ಮ ಭಾಜನರಾಗಿದ್ದಾರೆ.