ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ರಾಸು ವಿಮಾ ಪರಿಹಾರ ಚೆಕ್

ಶ್ರೀನಿವಾಸಪುರ : ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ , ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ರಾಸು ವಿಮಾ ಪರಿಹಾರ ಚೆಕ್ , ಕೋಮುಲ್ ವಿಮೆ , ಅಗ್ನಿ ಅವಘಡದಲ್ಲಿ ಮೃತಪಟ್ಟ ರಾಸುವಿನ ಪರಿಹಾರ ಚೆಕ್ ಮತ್ತು ರಸಮೇವು ಘಟಕ ನಿರ್ಮಾಣದ ಅನುದಾನ ಚೆಕ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ ಎನ್. ಹನುಮೇಶ್ ರವರು ಮಾತನಾಡಿ , ಎಲ್ಲಾ ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸುಗಳ ವಿಮೆ ಮಾಡಿಸಬೇಕು , ರಾಸು ವಿಮಾ ಪರಿಹಾರ ಚೆಕ್ ಪಡೆದಿರುವ ಫಲಾನುಭವಿಗಳು ಕಡ್ಡಾಯವಾಗಿ ರಾಸುಗಳನ್ನು ಖರೀದಿಸಿ , ತಮ್ಮ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸಬೇಕೆಂದು ಮತ್ತು ಒಕ್ಕೂಟದಿಂದ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಮೃತಪಟ್ಟ ರಾಸುಗಳ ವಿಮಾ ಪರಿಹಾರ 36 ಚೆಕ್‌ಗಳು ಮೊತ್ತ 21,30,000 / – ರೂಗಳು , ಕೋಮುಲ್ ವಿಮೆ ಚೆಕ್‌ಗಳು ಮೊತ್ತ 1,50,000 / – ರೂ.ಗಳು , ಅಗ್ನಿ ಅವಘಡದಲ್ಲಿ ಮೃತಪಟ್ಟ ರಾಸುವಿನ ಪರಿಹಾರ ಚೆಕ್ 1 ಮೊತ್ತ 25,000 / – ರೂಗಳು ಮತ್ತು ರಸಮೇವು ಘಟಕ ನಿರ್ಮಾಣದ ಅನುದಾನದ 2 ಚೆಕ್‌ಗಳ ಮೊತ್ತ 45,000 / ರೂಗಳು ಸೇರಿ ಒಟ್ಟು ಮೊತ್ತ 23,50,000 / – ರೂಗಳ ಚೆಕ್‌ಗಳನ್ನು ವಿತರಿಸಿದರು .

ಪ್ರಭಾರೆ ಉಪ ವ್ಯವಸ್ಥಾಪಕರಾದ ಶ್ರೀ ಕೆ.ಎಂ.ಮುನಿರಾಜು ರವರು ಮಾತನಾಡಿ , ಪ್ರಸ್ತುತ ಒಕ್ಕೂಟದ ವತಿಯಿಂದ ಹಾಲಿನ ಧರವನ್ನು ಏರಿಕೆ ಮಾಡಲಾಗಿದ್ದು , ಸಂಘಗಳಲ್ಲಿ ವೈಜ್ಞಾನಿಕವಾಗಿ ಹಾಲಿನ ಗುಣಮಟ್ಟವನ್ನು ಪರೀಕ್ಷೆ ಮಾಡಿ ಪ್ಯಾಟ್ ಮತ್ತು ಎಸ್.ಎನ್.ಎಫ್ . ಆಧಾರದ ಮೇಲೆ ಎಲ್ಲಾ ಯಂತ್ರಗಳನ್ನು ಬಳಸಿಕೊಂಡು ರೈತರಿಗೆ ಹೆಚ್ಚಿನ ಧರ ನೀಡಿದ್ದಲ್ಲಿ ರೈತರಿಗೆ ಸಂಘಗಳ ಮೇಲೆ ನಂಬಿಕೆ ಹೆಚ್ಚಾಗಿ ಉತ್ತಮ ಗುಣಮಟ್ಟ ಹಾಗೂ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ , ಸಹಕಾರ ಸಂಘಗಳು ಅಭಿವೃದ್ಧಿಯಾಗುತ್ತವೆ ಹಾಗೂ ಖಾಸಗಿ ಡೇರಿಗಳ ಹಾವಳಿ ಸಹ ಕಡಿಮೆ ಆಗುವುದೆಂದು ತಿಳಿಸಿದರು .

ಈ ಸಂದರ್ಭದಲ್ಲಿ ಶ್ರೀನಿವಾಸಪುರ ಉಪ ಕಛೇರಿಯ ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್ , ಪಿ.ಕೆ.ನರಸಿಂಹರಾಜು , ಎಸ್.ವಿನಾಯಕ , ಕೆ.ಪಿ. ಶ್ವೇತ , ಜಿ.ಎನ್. ಗೋಪಾಲಕೃಷ್ಣಾರೆಡ್ಡಿ ಹಾಗೂ ಶಿಬಿರದ ಸಿಬ್ಬಂದಿಯವರು ಮತ್ತು ಸಂಘದ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರು , ಫಲಾನುಭವಿಗಳು ಹಾಜರಿದ್ದರು .