ಕೋಲಾರ:- ರಾಜ್ಯ ಸರಕಾರ 2018-19 ನೇ ಸಾಲಿನಲ್ಲಿ ಘೋಷಿಸಿದ್ದ 1 ಲಕ್ಷ ರೂ ಅಲ್ಪಾವಧಿ ಬೆಳೆ ಸಾಲ ಮನ್ನಾ ಯೋಜನೆಯಡಿ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಚಿಂತಾಮಣಿ ಶಾಖೆಯಲ್ಲಿ 11 ಕೋಟಿ ರೂ ಸಾಲ ಮನ್ನಾದ ಮೊತ್ತವು ನೇರವಾಗಿ ರೈತರ ಖಾತೆಗಳಿಗೆ ಜಮಾ ಆಗಿದೆ ಎಂದು ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎನ್.ಶೀಲಾ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ತಳಗವಾರ ಟಿ.ಎಸ್.ಪ್ರತಾಪ್ ಎಂಬುವರು ಜೂನ್.26, 2024 ರಲ್ಲಿ ಡಿಸಿಸಿ ಬ್ಯಾಂಕಿನ ಚಿಂತಾಮಣಿ ಶಾಖೆಯಲ್ಲಿ 11 ಕೋಟಿ ಅವ್ಯವಹಾರ ಆಗಿದೆ ಎಂದು ಆರೋಪಿಸಿ ಶಾಖಾ ವ್ಯವಸ್ಥಾಪಕ ಜಿ.ಚಂದ್ರಶೇಖರ್ ಮತ್ತು ಇತರರ ಮೇಲೆ ದೂರು ನೀಡಿ ಎಫ್ಐಆರ್ ಮಾಡಿಸಿದ್ದರು.
ದೂರಿನ ಅನ್ವಯ ಜಿ.ಚಂದ್ರಶೇಖರ್ ಇತರರು ರೈತರ ಸಾಲ ಮನ್ನಾದ 11 ಕೋಟಿ ರೂಪಾಯಿಗಳನ್ನು ರೈತರ ನಕಲಿ ಖಾತೆಗಳ ಸೃಷ್ಠಿಸಿ ಬ್ಯಾಂಕಿಗೆ ಮತ್ತು ಸರಕಾರಕ್ಕೆ ವಂಚನೆ ಮಾಡಿದ್ದರೂ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸದೆ ಬ್ಯಾಂಕಿಗೆ ನಷ್ಟ ಉಂಟು ಮಾಡಿರುವ ವ್ಯಕ್ತಿಗಳೊಂದಿಗೆ ಶಾಮೀಲಾಗಿದ್ದಾದರೆಂದು ಆರೋಪಿಸಿದ್ದರು.
ಅವ್ಯವಹಾರದ ಆರೋಪ ಕೇಳಿ ಬಂದು ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಸರಕಾರವು ಡಿಸಿಸಿ ಬ್ಯಾಂಕ್ಗೆ ವಿವರಣೆ ನೀಡುವಂತೆ ಕೋರಿತ್ತುö. ಈ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ಹಾಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎನ್.ಶೀಲಾ ಅವರು, ಈ ಪ್ರಕರಣ ಸಂಬAಧ 2018-19 ರಿಂದ ಇಲ್ಲಿಯವರೆವಿಗೂ ಬ್ಯಾಂಕಿನ ಆಂತರಿಕ ಪರಿವೀಕ್ಷಣಾಧಿಕಾರಿಗಳು ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳು ಕೈಗೊಂಡ ಕ್ರಮಗಳ ಕ್ರೂಢೀಕೃöತ ವರದಿಯನ್ನು ಜುಲೈö.15, 2024 ರಂದು ಸರಕಾರಕ್ಕೆ ನೀಡಿದ್ದಾರೆ.
ಈ ವರದಿಯಲ್ಲಿ ಡಿಸಿಸಿ ಬ್ಯಾಂಕ್ ಸಾಲ ಮನ್ನಾ ಹಣವು ರೈತರ ಖಾತೆಗಳಿಗೆ ಜಮಾ ಆಗಿದೆ, ಶಾಖಾ ವ್ಯವಸ್ಥಾಪಕ ಜಿ.ಚಂದ್ರಶೇಖರ್ರ ನಿರ್ಲಕ್ಷ÷್ಯ ಹಾಗೂ ಅಧಿಕಾರ ದುರುಪಯೋಗದಿಂದ ಬ್ಯಾಂಕಿನ ಸಂಪನ್ಮೂಲಗಳಿಗೆ ತಾತ್ಕಾಲಿಕ ಅವಧಿಗೆ ಧಕ್ಕೆ ಉಂಟಾಗಿದ್ದರಿAದ ಬ್ಯಾಂಕಿನ ಆಡಳಿತ ಮಂಡಳಿ ಸಭಾ ನಡವಳಿ ರೀತ್ಯಾ ಇವರಿಗೆ ಕಠಿಣ ದಂಡನೆಯ ಶಿಕ್ಷೆ ವಿಧಿಸಿ, ಹಿರಿಯ ಸಹಾಯಕರ ಹುದ್ದೆಯಿಂದ ಕಿರಿಯ ಸಹಾಯಕರ ಹುದ್ದೆಗೆ ಹಿಂಬಡ್ತಿ ನೀಡಿ 11.01.2001 ರಲ್ಲಿಯೇ ಆದೇಶ ಹೊರಡಿಸಲಾಗಿದೆಯೆಂದು ಸ್ಪಷ್ಟವಡಿಸಿದ್ದಾರೆ.
ಡಿಸಿಸಿ ಬ್ಯಾಂಕಿನ ಆರ್ಥಿಕ ಸಂಪನ್ಮೂಲ ತಾತ್ಕಾಲಿಕ ಅವಗೆ ದುರಬಳಕೆಯಾಗಿದ್ದನ್ನು ಪತ್ತೆ ಹಚ್ಚಿ ಬಡ್ಡಿ ಸಮೇತ ಬ್ಯಾಂಕಿಗೆ ಮುಂದಿನ ದಿನಾಂಕಗಳಲ್ಲಿ ಮರು ಪಾವತಿಯಾಗಿದೆ ಎಂದು ಪರಿವೀಕ್ಷಣಾ ವರದಿ ದೃಢಪಡಿಸಿದೆ.
ವರದಿಯ ಪ್ರಕಾರ, ದಿನಾಂಕ 08.12.2018ರಿಂದ 24.06.2020 ರ ಅವಧಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘಗಳಾದ ಕುರುಬೂರು, ಯಮಮಲಪಾಡಿ, ಯಗವಕೋಟೆ, ನಂದಿಗಾನಹಳ್ಳಿö, ಟಿ.ಗೊಲ್ಲಹಳ್ಳಿö, ಬೊಮ್ಮೇನಹಳ್ಳಿ ಹಾಗೂ ಪಾಲಗುಮ್ಮನಹಳ್ಳಿ ಸಂಘಗಳಿAದ ರಿಸೀವಲ್ ಖಾತೆಗೆ ಕೃತಕ ಖರ್ಚು ಸಂಘದ ಚಾಲ್ತಿ ಖಾತೆಗೆ ಜಮಾ ಮಾಡಿದ 993.62 ಲಕ್ಷ ರೂ ಮತ್ತು ಇದರ ಶೇ.6 ರಂತೆ ಬಡ್ಡಿ 32.95 ಲಕ್ಷ ರೂಪಾಯಿಗಳನ್ನು ವಸೂಲು ಮಾಡಲಾಗಿದೆಯೆಂದು ಪರಿವೀಕ್ಷಣಾ ವರದಿ ಸ್ಪಷ್ಟಪಡಿಸಿದೆ.
ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಈ ಕುರಿತು 26.06.2021 ರಲ್ಲಿ ದೂರು ನೀಡಿದ್ದರ ಅನ್ವಯ, ಬೆಂಗಳೂರು ಮೂರನೇ ವಲಯ ಸಹಕಾರ ಸಂಘಗಳ ಉಪ ನಿಬಂಧಕ ಡಾ.ಉಮೇಶ್ ಐ ನೇತೃತ್ವದ ಪರಿವೀಕ್ಷಣಾ ತಂಡವು ಸಂಘಗಳಿಗೆ ಭೇಟಿ ನೀಡಿ ಸಂಬAಧಿತ ದಾಖಲೆಗಳನ್ನು ಮತ್ತು ಹೇಳಿಕೆಗಳನ್ನು ಪಡೆದು 19.09.2021 ರಲ್ಲಿ ಪರಿವೀಕ್ಷಣಾ ವರದಿಯನ್ನು ನೀಡಿದ್ದರು.
ಇದರಿಂದ ರಾಜ್ಯ ಸರಕಾರದ 1 ಲಕ್ಷ ರೂ ಕೃಷಿ ಅಲ್ಪಾವಧಿ ಬೆಳೆ ಸಾಲ ಮನ್ನಾ ಯೋಜನೆಯಡಿ ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಿರುವುದಿಲ್ಲö, ಎಲ್ಲಾ ಅರ್ಹ ರೈತರಿಗೂ ರಾಜ್ಯ ಸರಕಾರದ ಕೃಷಿ ಸಾಲ ಅಲ್ಪಾವ ಬೆಳೆ ಸಾಲ ಮನ್ನಾ ಯೋಜನೆಯ ಸೌಲಭ್ಯ ದೊರೆತಿದೆಯೆಂದು ವರದಿ ಸ್ಪಷ್ಟಪಡಿಸಿದೆ. ಎಫ್ಐಆರ್ ಆರೋಪವನ್ನು ಡಿಸಿಸಿ ಬ್ಯಾಂಕ್ ಸಂಪೂರ್ಣವಾಗಿ ತಳ್ಳಿಹಾಕಿದಂತಾಗಿದೆ.