ಕೋಲಾರ ಆ,27, ನಗರಾದ್ಯಂತ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಮಕ್ಕಳು ಹಾಗೂ ಹಿರಿಯರ ಜೀವವನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ನಗರಸಭೆ ಆಯುಕ್ತರಾದ ಶಿವಾನಂದ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಕೋಲಾರ ನಗರದಲ್ಲಿ ಕತ್ತಲಾದರೆ ನಾಯಿಗಳೇ ಹುಲಿಗಳಂತೆ ಮಕ್ಕಳು ಹಾಗೂ ವೃದ್ದರ ಮೇಲೆ ದಾಳಿ ಮಾಡುವ ಭಯದ ವಾತಾವರಣ ನಿರ್ಮಾಣವಾಗಿದ್ದರೂ ನಾಯಿಗಳ ಆಕ್ರಮಗಣಕ್ಕೆ ಕಡಿವಾಣ ಹಾಕದ ನಗರಸಭೆ ಅಧಿಕಾರಿಗಳ ವಿರುದ್ದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಷ ವ್ಯಕ್ತಪಡಿಸಿದರು.
ಜಿಲ್ಲಾ ಕೇಂದ್ರದಲ್ಲಿ ಕಳೆದ ಹಲವು ವರ್ಷಗಳಿಂದ ಬೀದಿನಾಯಿಗಳ ದಾಳಿ ಪ್ರಕರಣಗಳಿಗೆ ಲೆಕ್ಕವೇ ಇಲ್ಲ ಪ್ರತಿ ವಾರ್ಡ್ನಲ್ಲೂ ವರ್ಷದಿಂದ ವರ್ಷಕ್ಕೆ ನಿರೀಕ್ಷೆಗೂ ಮೀರಿ ಬೀದಿ ನಾಯಿಗಳು ತಮ್ಮ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡು ಅಟ್ಟಹಾಸ ಮರೆಯುತ್ತಿದ್ದರು, ಕಡಿವಾಣ ಹಾಕಬೇಕಾದ ನಗರಸಭೆ ಅಧಿಕಾರಿಗಳು ನಾಪತ್ತೆಯಾಗಿದ್ದರೆಂದು ಕಿಡಿಕಾಡಿದರು.
ಪುಟ್ಟ ಮಕ್ಕಳು ಕೈಯಲ್ಲಿ ಬಿಸ್ಕೆಟ್, ಬ್ರೆಂಡ್, ಹಿಡಿಯಂಗಿಲ್ಲ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಮನೆಗೆ ಬರುವಾಗ ಒಬ್ಬಂಟಿಯಾಗಿ ಹೋಗುವಂತಿಲ್ಲ, ಮಹಿಳೆಯರು, ವೃದ್ದರ ಕೈಯಲ್ಲಿ ಕೈ ಚೀಲವಿದ್ದರೆ ಸದಾ ಎಚ್ಚರವಾಗಿರಬೇಕು. ಸ್ವಲ್ಪ ಯಾಮಾರಿದರೆ ಬೀದಿ ನಾಯಿಗಳ ಅಟ್ಯಾಕ್ ಮಾಡುವುದು ಗ್ಯಾರೆಂಟಿ ಇದು ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳು ಗ್ಯಾರೆಂಟಿ ಭಾಗ್ಯವಾಗಿದೆ ಎಂದು ವ್ಯಂಗ್ಯವಾಡಿದರು.
ನಗರಾಧ್ಯಂತ ಜನ ಸಂದಣಿ ಇರುವ ಪ್ರಮುಖ ಬೀದಿಗಳಲ್ಲಿ ಅದರಲ್ಲೂ ಪ್ರಮುಖವಾಗಿ ಎ.ಪಿ.ಎಂ.ಸಿ. ಜಿಲ್ಲಾ ಆಸ್ಪತ್ರೆ, ಬಸ್ನಿಲ್ದಾಣ, ಹೋಟೆಲ್, ಮತ್ತಿತರ ಕಡೆಗಳಲ್ಲಿ ಕಸದ ರಾಶಿ ಇರುವ ಬಳಿ ನಾಯಿಗಳ ಹಿಂಡು ಆಹಾರಕ್ಕಾಗಿ ಬಂದು ಅಲ್ಲಿಗೆ ಬರುವ ಮಕ್ಕಳ ಮೇಲೆ ದಾಳಿ ಮಾಡುತ್ತಿದ್ದರೂ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳ ನಿರ್ಲಕ್ಷ ಏಕೆ ಎಂದು ಪ್ರಶ್ನೆ ಮಾಡಿದರು.
ಮಂಗಸಂದ್ರ ತಿಮ್ಮಣ್ಣ ಮಾತನಾಡಿ ಬೀತಿಯಲ್ಲಿ ಜನ ಬೀದಿನಾಯಿಗಳ ಹೆಚ್ಚಿನ ಹಾವಳಿಗೆ ಇತ್ತೀಚೆಗೆ ಬೆಳಿಗ್ಗೆ ಸಮಯದಲ್ಲಿ ಹೂ ಹಣ್ಣು, ತರಕಾರಿ, ಖರೀದಿಸಲು ಮಾರುಕಟ್ಟೆಗೆ ಹೋಗಲು ಜನ ಹಿಂದೇಟು ಹಾಕುತ್ತಾರೆ. ಜೊತೆಗೆ ಮನೆ ಮನೆಗೆ ಹಾಲು, ದಿನ ಪತ್ರಿಕೆ, ಹಾಕುವ ಹುಡುಗರ ಮೇಲೆಯೂ ಬೀದಿ ನಾಯಿಗಳ ಅಟ್ಯಾಕ್ ಮಾಡುತ್ತಿವೆ. ಭಿಕ್ಷಕರು, ಹೊಸಬರು, ಅಥವಾ ತಮ್ಮ ವ್ಯಾಪ್ತಿಯೊಳಗೆ ಬೇರೆ ಪ್ರದೇಶದ ನಾಯಿಗಳು ಬಂದರೆ ಅವುಗಳನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವ ನಾಯಿಗಳು ಎಲ್ಲಿ ಮಕ್ಕಳ ಮೇಲೆ, ವೃದ್ದರ ಮೇಲೆ ಎರಗುತ್ತವೋ ಎಂಬ ಭೀತಿ ಕಾಡುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ರಾತ್ರಿವೇಳೆ ಚಿಕ್ಕಾಪಟ್ಟೆ ಕಿರಿ ಕಿರಿ ಇನ್ನು ರಾತ್ರಿವೇಳೆ ಹಿಂಡುಹಿಂಡಾಗಿ ಸೇರುವ ನಾಯಿಗಳ ಕೂಗಾಟ ಬೌ ಬೌ ಸದ್ದಿಗೆ ಗಾಡ ನಿದ್ರೆಯಲ್ಲಿರುವ ಎಚ್ಚರಗೊಂಡು ಮನೆಯಲ್ಲಿರುವ ಚಿಕ್ಕ ಮಕ್ಕಳು ಜೋರಾಗಿ ಕಿರಿಚಾಟ ಪ್ರಾರಂಭ ಮಾಡುವ ಮಟ್ಟಕ್ಕೆ ನಾಯಿಗಳು ಭಯ ಹುಟ್ಟಿಸುತ್ತಿವೆ ಎಂದರು.
ಕಬಾಬ್ ಹಾಗೂ ಮಾಂಸದ ಅಂಗಡಿಗಳ ಹತ್ತಿರ ಶ್ವಾನಗಳ ಹಾವಳಿ, ನಗರಾದ್ಯಂತ ಕೋಳಿ, ಕುರಿ ಮಾಂಸದ ಜೊತೆಗೆ ಮೀನು ಮಾರಾಟ ಮಾಡುವ ರಸ್ತೆಗಳಲ್ಲಿಯೇ ಹೆಚ್ಚಾಗಿ ನಾಯಿಗಳು ಕಂಡು ಬರುವ ಜೊತೆಗೆ ನಾಗರೀಕರ ಸಂಚಾರಕ್ಕೆ ಸಂಚಾಕರವಾಗಿ ಮಾರ್ಪಟ್ಟಿದೆ. ಜೊತೆಗೆ ಒಂದು ಸಾರಿ ಮಾಂಸದ ರುಚಿ ನೋಡಿದ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುವ ಅಪಾಯದ ಜೊತೆಗೆ ರಸ್ತೆ ಬದಿ ಕಬಾಬ್, ಚಿಕ್ಕನ್ ಅಂಗಡಿ, ಮಾಂಸಹಾರಿ ಹೋಟೆಲ್ಗಳ ಬಳಿ ಉಳಿದ ಮೂಳೆ ಚೂರುಗಳನ್ನು ರಸ್ತೆಯಲ್ಲೇ ಹಾಕುವುದರಿಂದ ನಾಯಿ ಹಾವಳಿಗಳ ಹೆಚ್ಚಾಗಿದೆ. ಇದಕ್ಕೆ ಕಾರಣವಾಗಿರುವ ಅಂಗಡಿಗಳ ಮಾಲಿಕರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮನವಿ ನೀಡಿ ಮಾತನಾಡಿದ ಶಿವಾನಂದ ಮಾತನಾಡಿ ಬೀದಿ ನಾಯಿಗಳ ಕಡಿವಾಣಕ್ಕೆ ಈಗಾಗಲೆ ಕಡಿವಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದಷ್ಟೂ ಶೀಘ್ರವಾಗಿ ಕಡಿವಾಣ ಹಾಕಲಾಗುವುದು.
ಮನವಿ ನೀಡುವಾಗ ಮಹಿಳಾ ಜಿಲ್ಲಾದ್ಯಕ್ಷೆ ನಳಿನಿಗೌಡ.ಎ, ಶಿವಾರೆಡ್ಡಿ, ಮಂಗಸಂದ್ರ ನರಸಿಂಹಯ್ಯ, ನಳಿನಿ.ವಿ, ಮೂರಾಂಡಹಳ್ಳಿ ಶಿವಾರೆಡ್ಡಿ ಮುಂತಾದವರಿದ್ದರು.