ಕೋಲಾರ – ನ್ಯಾಯಲಯ ತೀರ್ಪು ಬಾರದೆ ಪೊಲೀಸ್ ಬಲದೊಂದಿಗೆ ಕ್ರೈಸ್ತ ದೇವಾಲಯ ಕ್ರಿಸ್ತನ ಪ್ರತಿಮೆ ಧ್ವಂಸ

JANANUDI.COM NETWORK


ಕೋಲಾರ ಜಿಲ್ಲೆಯ ಮುಳಬಾಗಿಲಿನ ತಹಸಿಲ್ದಾರ್ ಪೊಲೀಸ ಬಂದೋಬಸ್ತಿನೊಂದಿಗೆ ಮುಳಬಾಗಿಲು ತಾಲುಕಿನ ಗೋಕುಂಟೆ ಗ್ರಾಮದ ಸಣ್ಣ ಗುಡ್ಡವೊಂದರಲ್ಲಿ ಕ್ರಿಶ್ಚಿಯನ್ ಸಮುದಾಯವು ಪ್ರಾರ್ಥನಾಲಯಕ್ಕೆ ಸಂಬಂಧ ಪಟ್ಟ ಸುಮಾರು 20 ಅಡಿಯ ಕ್ರಿಸ್ತ ಪ್ರತಿಮೆ ಮತ್ತು ಕ್ರೈಸ್ತ ಪ್ರಾರ್ಥನಾ ಮಂದಿರವನ್ನು ಸೋಮವಾರದಂದು ಜೆಸಿಬಿ ಮೂಲಕ ಕೆಡವಲಾಗಿದೆ. ತಹಸಿಲ್ದಾರ್ ಅವರ ಕ್ರಮಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪರಿ ಪರಿಯಾಗಿ ಬೇಡಿಕೊಂಡರು ಕೇಳದೆ ಈ ಕ್ರತ್ಯವನ್ನು ಮಾಡಿದ್ದಾರೆ
ಈ ದೇವಾಲಯ ಇದ್ದ ಭೂಮಿಯ ಪ್ರಕರಣವು ಇನ್ನೂ ಹೈಕೊರ್ಟಿನಲ್ಲಿದ್ದು, ಇಂದು ವಿಚಾರಣೆ ಇತ್ತು, ಅದಕ್ಕೂ ಮೊದಲು ತಹಸಿಲ್ದಾರ್, ಏಕಾಏಕಿಯಾಗಿಬಂದು ಪೊಲೀಸ್ ಬಲದಿಂದ ಇಂತಹ ಲಜ್ಜೆಗೇಡಿತನದ ಕಾರ್ಯಚರಣೆ ನಡೆಸಿದ್ದಾರೆ.
“ನಾವುಪ್ರಾರ್ಥಿಸುವ ಏಸುವಿನ ಪ್ರತಿಮೆಯನ್ನು ಧ್ವಂಸ ಮಾಡದೇ ಹಾಗೆ ಇಳಿಸಿಕೊಡಿ ಎಂದು ಪರಿಪರಿಯಾಗಿ ವಿನಂತಿಸಿದರೂ, ಪ್ರತಿಮೆಯನ್ನು ಕೆಳಕ್ಕೆ ಬೀಳಿಸಿ ಚೂರು ಚೂರು ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಮುಳಬಾಗಿಲು ತಾಲುಕಿನ ಗೋಕುಂಟೆ ಗ್ರಾಮದ ಸಣ್ಣ ಗುಡ್ಡವೊಂದರಲ್ಲಿ ಕ್ರೈಸ್ತ ಸಮುದಾಯವು ಪ್ರಾರ್ಥನಾ ಮಂದಿರವೊಂದನ್ನು ಕಟ್ಟಿಕೊಂಡು ಸುಮಾರು 40 ವರ್ಷದಿಂದ ಪ್ರಾರ್ಥನೆ ನಡೆಸುತ್ತಾ ಬರುತ್ತಿದೆ. ಈ ಜಾಗದಲ್ಲಿ ದೊಡ್ಡದಾದ ಕ್ರಿಸ್ತಮೂರ್ತಿಯನ್ನು 2004 ರಲ್ಲಿಸ್ಥಾಪಿಸಲಾಗಿತ್ತು. ಈ ಪ್ರಾರ್ಥನಾಸ್ಥಳಕ್ಕೆ ಕ್ರೈಸ್ತರು ಅಲ್ಲದೆ ಎಲ್ಲಾ ಸಮುದಾಯದವರೂ ಬಂದು ಪ್ರಾರ್ಥಿಸಿ ಹೋಗುತ್ತಿದ್ದರು” ಈ ನಡುವೆ, ಕ್ರೈಸ್ತರು 300 ಎಕರೆ ಜಾಗವನ್ನು ಕಬಳಿಸುತ್ತಿದ್ದಾರೆ ಎಂದು ದುಷ್ಕರ್ಮಿಗಳು ಸುಳ್ಳು ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿಸಿದ್ದರು. ವಾಸ್ತವದಲ್ಲಿ ಪ್ರಾರ್ಥನಾ ಮಂದಿರ ಸರ್ವೇ ನಂಬರ್ 168 ಮತ್ತು 58 ನಲ್ಲಿ ಇದ್ದು, ಇದರಲ್ಲಿ ಕೇವಲ 3 ಎಕರೆ 26 ಗುಂಟೆ ಆಸ್ತಿ ಇದೆ ಎಂದು “ಈಜಮೀನಿಗೆ ಸಂಬಂಧ ಪಟ್ಟಂತೆ ನಮ್ಮಲ್ಲಿ ಹಕ್ಕು ಪತ್ರ ಇದೆ, ಪಂಚಾಯಿಂದ ಖಾತೆ ಮಾಡಿ ಕೊಟ್ಟಿದ್ದಾರೆ. ತಾಲೂಕು ಪಂಚಾಯತ್ ಅವರ ಸೊತ್ತು ಮಾಡಿ ಕೊಟ್ಟಿದ್ದಾರೆ. ಈ ಎಲ್ಲಾ ದಾಖಲೆಯನ್ನು ಮಾಡಿ ಕೊಟ್ಟು ದಾಖಲೆ ಸರಿಯಿಲ್ಲ ಎಂದು ಕೇಸು ಹಾಕಲಾಗಿದೆ. ಈ ಹಿನ್ನಲೆಯಲ್ಲಿ ದೇವಾಲಯದ ಪರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಾಲಾಗಿದ್ದು, ವಿಚಾರಣೆ ಮುಗಿದು ಫಲಿತಾಂಶ ಬರುವ ಮುನ್ನ ಈ ಧ್ವಂಸ ಕಾರ್ಯಚರಣೆ ನಡೆದಿದೆ ಎಂದು ತಿಳಿದು ಬಂದಿದೆ..
“ತಹಸಿಲ್ದಾರ್ ನ್ಯಾಯಾಲಯದ ಆದೇಶ ಇದೆ ಎಂದ ಯಾವುದೋ ಚಿತ್ರವನ್ನು ಮೊಬೈಲ್‍ನಲ್ಲಿ ತೋರಿಸಿ, ಸರ್ಕಾರಿ ಅಧಿಕಾರಿ ನ್ಯಾಯಾಲಯದ ಆದೇಶವನ್ನು ಪತ್ರದ ಮೂಲಖ ತೋರಿಸಲಿಲ್ಲ. ಅವರು ಮೊಬೈಲ್‍ನಲ್ಲಿ ತೋರಿಸಿದ ಪತ್ರದಲಿ ್ಲನ್ಯಾಯಾಲಯದ ಮೊಹರು ಇರಲಿಲ್ಲ, ನ್ಯಾಯಧೀಶರ ಸಹಿ ಕೂಡ ಇರಲಿಲ್ಲ ಎಂದು ತಿಳಿದು ಬಂದಿದೆ.
ಈ ದೇವಾಲಯ ಮತ್ತು ಏಸು ಕ್ರಿಸ್ತರ ಪ್ರತಿಮೆ ಧ್ವಂಸ ಮಾಡು ವೀಡಿಯಿ ವೈರಲ್ ಆಗಿದೆ. ಆದರೆ ಮುಖ್ಯ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸಲಿಲ್ಲಾ ಎಂಬುದು ಪತ್ರಿಕಾ ಧರ್ಮದ ವೈಪಲ್ಯವಾಗಿದೆ.