ಕೊಡ್ಲಾಡಿ ಹಿ.ಪ್ರಾಥಮಿಕ ಶಾಲೆ, ಮಾರ್ಡಿಯಲ್ಲಿ “ಅಮೃತ ಸಮುದಾಯ ಅಭಿವೃದ್ಧಿ ಯೋಜನೆ” ಯ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರ

JANANUDI.COM NETWORK

ಕೊಡ್ಲಾಡಿ : ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾರ್ಡಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಹಾಗೂ ಕುಂದಾಪುರದ ಭಂಡಾರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು “ಅಮೃತ ಸಮುದಾಯ ಅಭಿವೃದ್ಧಿ ಯೋಜನೆ” ಯ ಅಂಗವಾಗಿ ಏರ್ಪಡಿಸಿದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರ – 2020 ರ ಉದ್ಘಾಟನಾ ಸಮಾರಂಭ ಕೋವಿಡ್ ನಿಯಮಾನುಸಾರ ಜರುಗಿತು.
ಶ್ರೀ ಎಮ್ ಆನಂದ ಶೆಟ್ಟಿ, “ಸ್ವರ್ಣ” ಕೊಡ್ಲಾಡಿ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕುಂದಾಪುರದ ಭಂಡಾರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಪಿ. ನಾರಾಯಣ ಶೆಟ್ಟಿ.ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಂಡಾರ್ ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಹಾಗೂ ರಾಜ್ಯಶಾಸ್ತೃ ವಿಭಾಗದ ಮುಖ್ಯಸ್ಥರು ಆಗಿರುವ ಡಾ.ಶುಭಕರ ಆಚಾರಿಯವರು ಮಾತನಾಡಿ “ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿ-ಯುವಜನತೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಆ ಮೂಲಕ ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಅಶೋಕ್ ಕುಲಾಲ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಆಜ್ರಿ. ಶ್ರೀ ಅಣ್ಣಯ್ಯ ನಾಯ್ಕ್, ಮರ್ಜಿ, ಗುರಿಕಾರರು. ಶ್ರೀ ಗೌರಿ ಬಾಯ್, ಮುಖ್ಯೋಪಾಧ್ಯಾಯರು, ಮಾರ್ಡಿಶಾಲೆ. ಪ್ರವೀಣ ಕುಮಾರ್ ಶೆಟ್ಟಿ ಸದಸ್ಯರು, ಗ್ರಾಮ ಪಂಚಾಯತ್, ಆಜ್ರಿ. ಶ್ರೀ ರತ್ನಾಕರ ನಾಯ್ಕ್ ಸದಸ್ಯರು, ಗ್ರಾಮ ಪಂಚಾಯತ್, ಆಜ್ರಿ. ಶ್ರೀ ಮತಿ ಗಾಯತ್ರಿ ಸದಸ್ಯರು, ಗ್ರಾಮ ಪಂಚಾಯತ್, ಆಜ್ರಿ. ಶ್ರೀ ಕೊಡ್ಲಾಡಿ ಶುಭಾಶ್ಚಂದ್ರ ಶೆಟ್ಟಿ ಮಾಜಿ ಅಧ್ಯಕ್ಷರು,ಗ್ರಾಮ ಪಂಚಾಯತ್ ಆಜ್ರಿ. ಶ್ರೀ ರಾಮ ಮೊಗವೀರ ಹೊಲದಮನೆ,ಶ್ರೀ ಚಂದ್ರಶೇಖರ ಶೆಟ್ಟಿ, ಉದ್ಯಮಿ, ಹೈದರಾಬಾದ್, ಶ್ರೀ ಶಶಿಕಾಂತ್ ಹತ್ವಾರ್ ಸಂಚಾಲಕರು ಐಕ್ಯೂಎಸಿ, ಶ್ರೀ ಗಜೇಂದ್ರ ನಾಯ್ಕ್, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ ಹಾಗೂ ಮೇಲುಸ್ತುವಾರಿ ಸಮಿತಿ,ಮಾರ್ಡಿಶಾಲೆ. ಶ್ರೀ ಶಂಕರ ಬಿ.ಕೆ ಅಧ್ಯಕ್ಷರು, ಹಳೆವಿದ್ಯಾರ್ಥಿ ಸಂಘ, ಮಾರ್ಡಿ. ಶ್ರೀ ಪ್ರವೀಣ್ ನಾಯ್ಕ್ ಅಧ್ಯಕ್ಷರು, ಅಜೇಯ ಯುವಕ ಮಂಡಲ ಮಾರ್ಡಿ , ಮಾರ್ಡಿಇವರು ಉಪಸ್ಥಿತರಿದ್ದು, ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಶ್ರೀ ಅರುಣ್ ಎ. ಎಸ್ ಹಾಗೂ ರಾಮಚಂದ್ರ ಆಚಾರ್ ಹಾಗೂ ಶಿಬಿರಾದಿಕಾರಿಗಳಾದ ಶಶಿಕಾಂತ್ ಹತ್ವಾರ್, ಶ್ರೀ ಅಣ್ಣಪ್ಪ ಪೂಜಾರಿ, ಅಶ್ವಿನಿ ಇವರು ಜೊತೆಗಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿ ವೈಷ್ಣವಿ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು. ರಾಮಚಂದ್ರ ಆಚಾರ್ ಸ್ವಾಗತಿಸಿ, ಪ್ರಿಯಾ ವಂದಿಸಿದರು.