

ಕುಂದಾಪುರ: ತಲ್ಲೂರು ಕೋಟೆಬಾಗಿಲು ಶಾಲಾ ವಠಾರದಲ್ಲಿ ನಡೆದ 30ಗಜಗಳ ಕ್ರಿಕೆಟ್ ಪಂದ್ಯಾಟದ ಕೆ ಕೆ ವೈ ಸ್ಟಾರ್ ಟ್ರೋಫಿ 2024 ಇದರ ಉದ್ಘಾಟನಾ ಸಮಾರಂಭದಲ್ಲಿ ಸಮಾಜ ಸೇವೆ ಕ್ರೀಡೆ ಶೈಕ್ಷಣಿಕ ಮತ್ತು ಚಿತ್ರಕಲೆಯಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭೆಗಳಿಗೆ ಸನ್ಮಾನ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಟಿ ಬಿ ಶೆಟ್ಟಿ,ವಸಂತ ಆರ್ ಹೆಗ್ಡೆ ತಲ್ಲೂರು ಪಂಚಾಯತ್ ಅಧ್ಯಕ್ಷರಾದ ಗಿರೀಶ್ ಎಸ್ ನಾಯ್ಕ್ ,ಉದ್ಯಮಿಗಳಾದ ಸುಂದರ್ ಶೆಟ್ಟಿ ರಮೇಶ್ ಆಚಾರ್ಯ , ರ್ವೋತ್ತಮ ಶೆಟ್ಟಿ ಸುರೇಶ್ ಪೂಜಾರಿ ಪ್ರದೀಪ್ ಕೋಟೇಶ್ವರ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.