

ಕಿನ್ನಿಕಂಬಳ: ರೋಸಾ ಮಿಸ್ಟಿಕಾ ಪಿಯು ಕಾಲೇಜು ಕಿನ್ನಿಕಂಬಳದಲ್ಲಿ ಸಾಂಪ್ರದಾಯಿಕ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ದರಿಸಿ ಬಂದಿದ್ದರು.. ಅವರು ಸಾಮೂಹಿಕವಾಗಿ ಪ್ರದರ್ಶಿಸಿದ ಮತ್ತು ಭಾರತದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಬಣ್ಣ ಬಣ್ಣದ ವಿವಿಧ ಶೈಲಿಯ ಅವರ ಉಡುಪು ಸರಳವಾಗಿ ಅದ್ಭುತವಾಗಿದ್ದವು. ಸಮಾರಂಭವು ಪ್ರಾರ್ಥನೆ ಗೀತೆಯ ಮೂಲಕ ದೇವರ ಆಶೀರ್ವಾದವನ್ನು ಬೇಡಿಕೊಳ್ಳುವುದರೊಂದಿಗೆ ಪ್ರಾರಂಭವಾಯಿತು. 12 ನೇ ತರಗತಿಯ ವಿದ್ಯಾರ್ಥಿಗಳು ಸ್ವಾಗತ ನೃತ್ಯವನ್ನು ಪ್ರಸ್ತುತಪಡಿಸಿದರು.
ಶ್ರೀ ಜೇಸನ್ ಮೊಂತೇರೊ ಕಾರ್ಯಕ್ರಮದ ಗೌರವ ಅತಿಥಿಯಾಗಿದ್ದರು. ಮುಖ್ಯ ಅತಿಥಿ ಮತ್ತು ಪ್ರಾಂಶುಪಾಲರಾದ ಸಿಸ್ಟರ್ ಸಾಧನಾ ಅವರು ಅಧ್ಯಾಪಕರೊಂದಿಗೆ ವಿಶೇಷ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿ ಶ್ರೀ ಜೇಸನ್ ಮೊಂತೆರೊ ಅವರು ವಿದ್ಯಾರ್ಥಿಗಳಿಗೆ ತಮ್ಮ ಭಾಷಣದಲ್ಲಿ ಸಾಮಾಜಿಕ ಮಾಧ್ಯಮವನ್ನು ಸರಿಯಾಗಿ ಬಳಸಿಕೊಳ್ಳಬೇಕು ಏಕೆಂದರೆ ಆ ವೇದಿಕೆಗಳು ಯುವ ಮನಸ್ಸುಗಳನ್ನು ಹಿಡಿದಿಟ್ಟುಕಳ್ಳಲು ಸಹಾಯ ಮಾಡುತ್ತದೆ. ಜೀವನಕ್ಕೆ ಸರಿಯಾದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಸರಿಯಾದ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬೇಕು” ಎಂದು ಸಂದೇಶ ನೀಡಿ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕಾಲೇಜನ ವಿದ್ಯಾರ್ಥಿಗಳನ್ನು ಮುಖ್ಯ ಅತಿಥಿಗಳು ಸನ್ಮಾನಿಸಿದರು.
ಪ್ರಾಂಶುಪಾಲರಾದ ಸಿಸ್ಟರ್ ಸಾಧನಾ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ನಮ್ಮ ಕಾಲೇಜಿಗೆ ಕೀರ್ತಿ ತಂದಿರುವುದಕ್ಕೆ ನಮಗೆ ಹೆಮ್ಮೆ ಎಂದು ಭಾಗವಹಿಸಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿ, ಹಾಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿ ನಮ್ಮ ಸಂಪ್ರದಾಯಗಳನ್ನು ರಕ್ಷಿಸಲು ಕರೆ ನೀಡಿದರು.
ಕಾರ್ಯಕ್ರಮದ ಎರಡನೇ ಭಾಗವಾಗಿ ಸಾಂಪ್ರದಾಯಿಕ ರ್ಯಾಂಪ್ ವಾಕ್ ಮಾಡಿ. Mr. Mystican ಮತ್ತು Ms Mystican ಪ್ರಶಸ್ತಿಯನ್ನು ಗೆಲ್ಲಲು ವಿದ್ಯಾರ್ಥಿಗಳು ಹುಮ್ಮಸಿನಲ್ಲಿದ್ದರು, ವಿದ್ಯಾರ್ಥಿಗಳು ಇದರಲ್ಲಿ ಉತ್ಸಾಹದಲ್ಲಿ ಭಾಗವಹಿಸಿದ್ದು. ಅಂತಿಮವಾಗಿ ಈ ಸ್ಪರ್ಧೆಯಲ್ಲಿ “ರಿಯಾ ಕುಟಿನ್ಹಾ” ಮಿಸ್ ಮಿಸ್ಟಿಕನ್ ಆಗಿ ಮತ್ತು “ಶ್ರೀ ರೊನಾಲ್ಡ್ ಡಿಸೋಜಾ” ಮಿಸ್ಟರ್ ಮಿಸ್ಟಿಕನ್ ಪ್ರಶಸ್ತಿ ಪಡೆದುಕೊಂಡರು. ಶ್ರೀಮತಿ ಕಾರ್ಮೆಲಾ ತಾವ್ರೊ ಸ್ವಾಗತ ಕೋರಿದರು ಕಾರ್ಯಕ್ರಮವನ್ನು ಶ್ರೀ ಫೆರ್ನಾಂಡಿಸ್ ಸಂಯೋಜಿಸಿದ್ದರು.ಮಿಸ್ ಇಶಾ ಡಿಸೋಜಾ ಧನ್ಯವಾದ ಸಮರ್ಪಿಸಿದರು.











