JANANUDI.COM NETWORK
ಕೋಲ್ಕತ್ತಾ: ಭಾರರದಲ್ಲಿ ಹಿಂದು ಮುಸ್ಲಿಂ ಮಧ್ಯೆ ವೈಷ್ಯಮ್ಯ ಹೆಚ್ಚಿಸುವುದರಲ್ಲೆ ಕೆಲವರು ಮಗ್ನರಾಗಿರುವಾಗ ಒರ್ವ ಮುಸ್ಲಿಂ ವ್ಯಕ್ತಿ ತನ್ನ ಹಿಂದೂ ಸ್ನೇಹಿತನ ಮೇಲಿನ ಪ್ರೀತಿಯ್ಂದಾಗಿ ಆತನನ್ನು ಉಳಿಸಿ ಅವನ ಸಂಸಾರ ರಕ್ಷಣೆ ಮಾಡಲಿಕ್ಕಾಗಿ ಕಿಡ್ನಿ ದಾನ ಮಾಡಲು ಮುಂದಾಗಿರುವ ಅಪರೂಪದ ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದಲ್ಲಿ ನಡೆದಿದೆ.
ಹಸ್ಲು ಮೊಹಮ್ಮದ್ ಎಂಬವರು ತನ್ನ ಅಂಗಾಂಗ ದಾನಕ್ಕೆ ಅನುಮೋದನೆ ಕೋರಿ ಇತ್ತೀಚೆಗೆ ರಾಜ್ಯ ಆರೋಗ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿದಾರನು ತನ್ನ ಮೂತ್ರಪಿಂಡವನ್ನು ದಾನ ಮಾಡುವ ಬಗ್ಗೆ ಆರೋಗ್ಯ ಇಲಾಖೆ ತನಿಖೆ ನಡೆಸಿದೆ. ತನಿಖೆ ವೇಳೆ ಇದು ಹಣಕ್ಕೆ ನಡೆಯುವ ವಿನಿಮಯವೇ ಎಂಬ ಬಗ್ಗೆ ಪರಿಶೀಲಿಸಲಾಗಿದೆ. ಆದರೆ ಯಾವುದೇ ಹಣಕ್ಕೆ ಅಲ್ಲ ಬದಲಾಗಿ ಸ್ನೇಹ ಸಹೋದರತ್ವಕ್ಕಾಗಿ ದಾನ ಮಾಡುವುದು ತಿಳಿದು ಬಂದಿದೆ.ಹಸ್ಲು ಮೊಹಮ್ಮದ್ ಮತ್ತು ಅನಾರೋಗ್ಯ ಪೀಡಿತ ಅಚಿಂತ್ಯ ಬಿಸ್ವಾಸ್ ಆರು ವರ್ಷಗಳ ಹಿಂದೆ ಸ್ನೇಹಿತರಾಗಿದ್ದರು. ಕಂಪನಿಯಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ಎರಡು ವರ್ಷಗಳ ಹಿಂದೆ ಹಸ್ಲು ಆ ಕೆಲಸ ಬಿಟ್ಟು ಸ್ವಂತ ಉದ್ಯಮ ಆರಂಭಿಸಿದರು.
ಈ ಘಟನೆಕುರಿತು ಮಾತನಾಡಿದ ಹಸ್ಲು, ಅಚಿಂತ್ಯ ಅವರಿಗೆ ತುರ್ತು ಕಸಿ ಅಗತ್ಯವಿದೆ ಎಂದು ಕೇಳಿದಾಗ, ನನ್ನ ಒಂದು ಮೂತ್ರಪಿಂಡವನ್ನು ಅವರಿಗೆ ದಾನ ಮಾಡಲು ನಿರ್ಧರಿಸಿದೆ. ಇದನ್ನು ಮಾಡುವುದರಿಂದ ನಾನು ಸಾಯುವುದಿಲ್ಲ ಆದರೆ ಅಚಿಂತ್ಯನಿಗೆ ಖಂಡಿತವಾಗಿಯೂ ಹೊಸ ಜೀವನ ಸಿಗುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಅಚಿಂತ್ಯ ಮಾತನಾಡಿ, ಇಷ್ಟು ದೊಡ್ಡ ತ್ಯಾಗ ಮಾಡಲು ಹಸ್ಲು ನಿರ್ಧರಿಸಿದ್ದು. ನಾನು ಮತ್ತು ನನ್ನ ಕುಟುಂಬ ಯಾವಾಗಲೂ ಅವರಿಗೆ ಕೃತಜ್ಞರಾಗಿರುತ್ತೇವೆ. ಅವನು ಮುಂದೆ ಬರದೇ ಇದ್ದಿದ್ದರೆ ನನ್ನ ಸಾವಿನ ನಂತರ ನನ್ನ ಸಂಸಾರವೇ ನಾಶವಾಗುತ್ತಿತ್ತು ಎಂದು ಅಚಿಂತ್ಯ ಹೇಳಿದ್ದಾರೆ.
ದ್ವೇಷ ಬಿತ್ತುವ ಜನರು ಇಂತಹ ಮಾನವೀಯತೆಯಿಂದ ಪಾಠ ಕಲಿಯಬೇಕು