ಖತೀಬ್ ಅಬು ಮಹ್ಮದ್(84)ಕುಂದಾಪುರ : ಸ್ಥಳೀಯ ಜಾಮಿಯಾ ಮಸೀದಿಯ ಮಾಜಿ ಖತೀಬರು ಧೈವಾಧಿನರಾದರು

ವರದಿ : ಮಝರ್, ಕುಂದಾಪುರ

ಕುಂದಾಪುರ.  ಖತೀಬ್ ಅಬು ಮಹ್ಮದ್(84)ಕುಂದಾಪುರ : ಸ್ಥಳೀಯ ಜಾಮಿಯಾ ಮಸೀದಿಯ ಮಾಜಿ ಖತೀಬರು,ಹಿರಿಯ ಮುಸ್ಲಿಂ ಧುರೀಣರು, ವಿದ್ವಾಂಸರು ಆಗಿದ್ದ ಖತೀಬ್ ಅಬು ಮಹ್ಮದ್ (84) ಅವರು ಫೆರಿ ರಸ್ತೆಯ ಮಸೀದಿ ಮುಂಭಾಗದಲ್ಲಿರುವ ತಮ್ಮ ಸ್ವಗ್ರಹದಲ್ಲಿ ಅಲ್ಪಕಾಲದ  ಆಸೌಖ್ಯ ದಿಂದ ಇಂದು(20.01.2021) ಬುಧವಾರ ನಿಧನ ಹೊಂದಿದ್ದಾರೆ. 70ರ ದಶಕದಲ್ಲಿ ಕುಂದಾಪುರದ ಜಾಮಿಯಾ ಮಸೀದಿಯ ಖತೀಬರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ತನ್ನ ಅದ್ಭುತ ಕಂಠದ ನಮಾಜ್, ಪ್ರವಚನಗಳಿಂದ ಜನಜನಿತರಾಗಿದ್ದರು. ಕುಂದಾಪುರದಲ್ಲಿಸೇತುವೆ ನಿರ್ಮಾಣ ಗೊಳ್ಳುವ ಮುನ್ನ ಫೆರಿ ರಸ್ತೆಯ ಕಳವಿನ ಬಾಗಿಲಿನ ಮೂಲಕ ಗಂಗೊಳ್ಳಿಗೆ ಬೋಟಿ ನಲ್ಲಿ  ಪ್ರಯಾಣಿಕರನ್ನು ಸಾಗಿಸುತ್ತಿದ್ದ ಹಿರಿಮೆಯೂ ಇವರಿಗಿದೆ.ನಂತರ ವಿದೇಶ ಸೇರಿಕೊಂಡ ಇವರು ಯಶಸ್ವಿ ಉದ್ಯಮಿಯಾಗಿಯೂ ಗುರ್ತಿಸಿಕೊಂಡಿದ್ದರು. ಹತ್ತುಹಲವು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷ, ಪದಾಧಿಕಾರಿಯಾಗಿ ಗುರ್ತಿಸಿಕೊಂಡಿದ್ದ ಇವರು ಪತ್ನಿ,ಮೂವರು ಗಂಡು ಹಾಗೂ ಇರ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.