ಬೆಂಗಳೂರು: ಆಕಾಶವಾಣಿ (ಎಐಆರ್) ಯ ನಿವೃತ್ತ ನಿರ್ದೇಶಕ ಮುನಿಕೃಷ್ಣಪ್ಪ ಅವರ ಮನೆಯಲ್ಲಿ ನರ್ಸಿಂಗ್ ಕೇರ್ನಲ್ಲಿ ಮೇಡ್ ಆಗಿ ಕೆಲಸಕ್ಕೆ ಸೇರಿ ಸಂಚು ರೂಪಿಸಿ 28 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಕಳ್ಳತನ ಮಾಡಿದ ಮಹಿಳೆ ಸೇರಿ ಇನ್ನೊರ್ವಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಖತರ್ನಾಕ್ ಮಹಿಳೆಯರನ್ನು ಜೆಪಿನಗರ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಮೂಲದ ಮಂಜುಳ ಉಜರತ್(30) ಹಾಗೂ ಕನಕಪುರದ ಮನೆಗೆಲಸದ ಮಹಿಳೆ ಮಹದೇವಮ್ಮ (50) ಬಂಧಿತ ಆರೋಪಿಗಳಾಗಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.