ಕೋಟ ತಟ್ಟು ಮೆಹಂದಿ ಕಾರ್ಯಕ್ರಮದಲ್ಲಿ ಖಾಕಿ ದೌರ್ಜನ್ಯ ; ಆರು ಪೊಲೀಸರು ಠಾಣೆಯಿಂದ ಸ್ಥಳಾಂತರ

JANANUDI.COM NETWORK


ಕುಂದಾಪುರ, ತಾರೀಕು 27 ರಂದು ಕೋಟದಲ್ಲಿ ಕೊರಗ ಜನಾಂಗದ ಮೆಹಂದಿ ಕಾರ್ಯಕ್ರಮದಲ್ಲಿ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರು ಅಂದು ಹೇಳಲಾಗುತ್ತಿರುವ ಪೊಲೀಸರ ವಿಚಾರಣೆ ಮುಗಿಯುವ ತನಕ ಕೋಟ ಪೊಲೀಸ್ ಠಾಣೆಯಿಂದ ಸ್ಥಳಾಂತರ ಮಾಡಬೇಕು” ಎಂದು ಉಡುಪಿ ಎಸ್ಪಿ ವಿಷ್ಣುವರ್ದನ ಆದೇಶ ನೀಡಿದ್ದಾರೆ.
ಕೊರಗ ಜನಾಂಗದ ಮೆಹಂದಿ ಕಾರ್ಯಕ್ರಮದಲ್ಲಿ ಲಾಠಿಚಾರ್ಜ ನಡೆಸಿದ ಆರೋಪ ಎದುರಿಸುತ್ತಿರುವ ಪಿಎಸ್ ಐ ಸಂತೋಷ್ ಮತ್ತು ಐವರು ಸಿಬ್ಬಂದಿಗಳನ್ನು ಠಾಣೆಯಿಂದ ಸ್ಥಳಾಂತರ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಪಿಎಸ್ ಐ ಮತ್ತು 5 ಮಂದಿ ಸಿಬ್ಬಂದಿಗಳು ಕೋಟ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತಿಲ್ಲ ಎಂದು ಉಡುಪಿ ಎಸ್ ಪಿ ವಿಷ್ಣುವರ್ಧನ್ ಆದೇಶ ಹೊರಡಿಸಿದ್ದಾರೆ.
ಪ್ರಕರಣ ಸಂಬಂಧ ಉಡುಪಿ ಡಿಎಸ್ ಪಿ ನೇತೃತ್ವದಲ್ಲಿ ತನಿಖೆಗೆ ನಡೆಯಲಿದ್ದು, ಇಂದು ಸಂಜೆಯ ಒಳಗೆ ತನಿಖೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗೋಷ್ಢಿ ನಡೆಸಿ , ಘಟನೆ ನಿಜವಾಗಿದ್ದಲ್ಲಿ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಇಲಾಖೆ ಬಗ್ಗೆ ನಂಬಿಕೆ ಇರಲಿ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.


ಘಟನೆಯ ಹಿನ್ನೆಲೆ


ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಾಗಿರುವ ಕೋಟತಟ್ಟು ಗ್ರಾಮದ ಬಾರಿಕೆರೆ ನಿವಾಸಿ ರಾಜೇಶ್ ಎಂಬವರ ಮದುವೆ ಕಾರ್ಯಕ್ರಮವು ಡಿ. 29 ರಂದು ಕುಮಟಾದಲ್ಲಿ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಡಿ. 27 ರಂದು ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 9.40 ರ ಸುಮಾರಿಗೆ ಹೆದ್ದಾರಿ ಗಸ್ತು ಪೊಲೀಸರು ಮನೆಗೆ ಬಂದಿದ್ದು, ಡಿಜೆ ಬಂದ್ ಮಾಡುವಂತೆ ಸೂಚಿಸಿದ್ದಾರೆ.


ಈ ವೇಳೆ ನೈಟ್ ಕಫ್ರ್ಯೂ ನಾಳೆ ರಾತ್ರಿಯಿಂದ ಜಾರಿ ಆಗುತ್ತದೆ. ನಮ್ಮ ಡಿಜೆಯಿಂದ ಯಾರಿಗೂ ತೊಂದರೆ ಆಗುತ್ತಿಲ್ಲ. ಮನೆಯವರೇ ಹೆಚ್ಚಿನ ಮಂದಿ ಇದ್ದು, ಸ್ವಲ್ಪ ಹೊತ್ತು ಕುಣಿದು ಆ ಬಳಿಕ ಬಂದ್ ಮಾಡುವುದಾಗಿ ತಿಳಿಸಿದ್ದರೆಂದು. ಆ ಬಳಿಕ ಪೊಲೀಸರು ಅಲ್ಲಿಂದ ಹಿಂದೆ ಹೋಗಿದ್ದರು. ಇದಾದ ಕೆಲ ಹೊತ್ತಿನ ಬಳಿಕ ಸ್ಥಳಕ್ಕೆ ಕೋಟ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಯಾವ ಕಾರಣವೂ ಕೇಳದೇ ಡಿಜೆ, ಲೈಟ್ ಆಫ್ ಮಾಡಿ ಮೆಹಂದಿ ಮನೆಯಲ್ಲಿದ್ದ ಹೆಣ್ಣು ಮಕ್ಕಳು, ಮಹಿಳೆಯರು, ಮಧುಮಗನಿಗೆ ಮತ್ತು ಹಿರಿಯರು ಯಾರನ್ನು ನೋಡದೇ ಏಕಾಏಕಿಯಾಗಿ ಲಾಠಿ ಚಾರ್ಜ್ ಮಾಡಿದ್ದಾರೆ. ಅಲ್ಲದೆ, ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿದ್ದಾರೆ ಎಂದು ಮನೆಯವರು ಆರೋಪ ಮಾಡಿದ್ದರು.
ಕೋಟಾ ಠಾಣೆಯ ಪೊಲೀಸರು ವರನನ್ನು ಸಮೇತ ಹಲವರನ್ನು ಬಂದಿಸಿ ಠಾಣೆಯಲ್ಲಿ ಕೂಡಿ ಹಾಕಿದ್ದರು. ಇದು ಹತ್ತಾರು ಸಂಘಟನೆಗಳು, ಪಕ್ಷಗಳು, ಜನರಾದಿಯಾಗಿ ಪ್ರತಿಭಟಿಸಿದ್ದರು. ಕೊರಗ ಜನಾಂಗದವರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕೆಲವು ನಾಯಕರ ಮಧ್ಯ ಪ್ರವೇಶದಿಂದ ಅವರನ್ನು ಬಿಟ್ಟಿದ್ದರು.
ಇದೀಗ ಪೊಲೀಸರ ವಿಚಾರಣೆ ಮುಗಿಯುವ ತನಕ ಕೋಟ ಪೊಲೀಸ್ ಠಾಣೆಯಿಂದ ಸ್ಥಳಾಂತರ ಮಾಡಬೇಕು” ಎಂದು ಉಡುಪಿ ಎಸ್ಪಿ ವಿಷ್ಣುವರ್ದನ ಆದೇಶ ನೀಡಿದ್ದಾರೆ.


ಇದು ಯಾರೋ ಕೊರಗ ಜನಾಂಗದವ ಎಳಿಗೆ, ಹೊಟ್ಟೆ ಕಿಚ್ಚು ಪಟ್ಟು, ಅಸನಹನೆಯಿಂದ ಪೊಲೀಸರಿಗೆ ಕಿವಿ ಚುಚ್ಚಿದರ ಪರಿಣಾಮವಾಗಿದೆಯೆಂದು’ ಜನನುಡಿ ಡಾಟ್.ಕಾಮ್ ಸಂಪಾದಕರ ಅಭಿಪ್ರಾಯವಾಗಿದೆ