ಶ್ರೀನಿವಾಸಪುರ : ಕೇತುಗಾನಹಳ್ಳಿ ಗ್ರಾಮಸ್ಥರು ಗ್ರಾಮಕ್ಕೆ ಸಂಬಂದಿಸಿದ ಸ್ಮಶಾನ ಜಾಗವನ್ನು ಖಾಸಗಿ ಒತ್ತುವರಿ ಮಾಡಿಕೊಂಡಿದ್ದು ಸ್ಮಶಾನದ ಜಾಗವನ್ನು ತೆರವುಗೊಳಿಸುವ ಬಗ್ಗೆ ತಹಶೀಲ್ದಾರ್ ರವರಿಗೆ ಅರ್ಜಿಯನ್ನು ನೀಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿಯ ನೀಡಲಾಗಿದೆ ಎಂದು ಗ್ರೇಡ್ 2 ತಹಶೀಲ್ದಾರ್ ಕೆ.ಎಲ್.ಜಯರಾಮ್ ಮಾಹಿತಿ ನೀಡಿದರು.
ತಾಲ್ಲೂಕಿನ ಕಸಬಾ ಹೋಬಳಿ ಕೇತಗಾನಹಳ್ಳಿ ಗ್ರಾಮದ ಸರ್ವೇ ನಂ.79 ರಲ್ಲಿ 1 ಎಕರೆ 32 ಗುಂಟೆ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕೆ ಮೀಸಲಿಡಲಾಗಿರುವ ಜಾಗವನ್ನು ಶನಿವಾರ ಕಂದಾಯ ಇಲಾಖೆ ಹಾಗು ಸರ್ವೆ ಇಲಾಖೆ, ಪೊಲೀಸ್ ಇಲಾಖೆ ಜಂಟಿಯಾಗಿ ಸರ್ವೆ ಹಮ್ಮಿಕೊಳ್ಳಲಾಯಿತು . ಸರ್ವೇ ಕಾರ್ಯಕ್ಕೆ ಗ್ರಾಮಪಂಚಾಯಿತಿ ಸದಸ್ಯ ಎಚ್.ಎಂ.ಆನಂದಕುಮಾರ್ ಸಾಥ್ ನೀಡಿದರು.
ಈ ಹಿಂದೆ ತಹಶೀಲ್ದಾರ್ ಮುಖೇನ ಜಿಲ್ಲಾಧಿಕಾರಿಗಳಿಗೆ ಸ್ಮಶಾನಕ್ಕೆ ಜಾಗವನ್ನು ಗುರ್ತಿಸಿಕೊಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ 2016-17ರ ಇಸ್ವಿಯಲ್ಲಿ ಜಿಲ್ಲಾಧಿಕಾರಿಗಳು ಸ್ಮಶಾನ ಸ್ಥಳವನ್ನು ಗುರ್ತಿಸಿದ್ದು, ಆ ಜಾಗದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಗ್ರಾಮಸ್ಥರು ಗೊಂದಲದಿದ್ದರು. ಇದೇ ಸಮಯದಲ್ಲಿ ಶನಿವಾರ ಗ್ರಾಮದ ಸ್ಮಶಾನ ಸ್ಥಳವನ್ನು ಗುರ್ತಿಸಿ ಕಂದಾಯ ಇಲಾಖೆ ಹಾಗು ಸರ್ವೆ ಇಲಾಖೆ ಜಂಟಿಯಾಗಿ ಸರ್ವೆ ಮಾಡಿಸಿ ಗ್ರಾಮಪಂಚಾಯಿತಿ ಅದೀನಕ್ಕೆ ಸ್ಮಶಾನವನ್ನು ಅಭಿವೃದ್ಧಿ ಪಡಿಸಲು ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಗ್ರಾ.ಪಂ ಸದಸ್ಯ ಎಚ್.ಎಂ.ಆನಂದಕುಮಾರ್ ಮಾತನಾಡಿ ಗ್ರಾಮಕ್ಕೊಂದು ಸ್ಮಶಾನವಿಲ್ಲವೆಂದು ಗ್ರಾಮಸ್ಥರು ಅನೇಕ ಬಾರಿ ಕಂದಾಯ ಇಲಾಖೆಗೆ ಮನವಿ ಮಾಡಿದ್ದರು. ಗ್ರಾಮಸ್ಥರು ಸೇರಿ ಇದೇ ತಿಂಗಳು 6 ನೇ ತಾರೀಖು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಗಿತ್ತು ಇದರ ಹಿನ್ನೆಲೆಯಲ್ಲಿ ನಾನು ಸಹ ತಹಶೀಲ್ದಾರ್ ಗಮನಕ್ಕೆ ತಂದು ಜಾಗಕ್ಕೆ ಸಂಬಂದಿಸಿದಂತೆ ಕಾನೂನು ರೀತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಶನಿವಾರ ಕಂದಾಯ ಇಲಾಖೆ, ಸರ್ವೆ ಇಲಾಖೆ, ಪೊಲೀಸ್ ಇಲಾಖೆ ಬಂದೋಬಸ್ತ್ ನೊಂದಿಗೆ ಸರ್ವೇ ಮಾಡಲಾಯಿತು. ಸ್ಮಶಾನ ಜಾಗಕ್ಕೆ ಟ್ರಂಚ್ ಹೊಡೆದು ಸ್ಮಶಾನ ಜಾಗವನ್ನು ಅಭಿವೃದ್ಧಿ ಪಡಿಸಲು ಗ್ರಾಮಪಂಚಾಯಿತಿಗೆ ಹಸ್ತಾಂತರಿಸಲಾಗಿದೆ ಎಂದರು.
ಇದೇ ಸಮಯದಲ್ಲಿ ಆರ್ಐ ಮುನಿರೆಡ್ಡಿ, ಪಿಎಸ್ಐ ಎಚ್.ಜಯರಾಮ್, ತಹಶೀಲ್ದಾರ್ ಕಚೇರಿ ಸಿಬ್ಬಂದಿ ವಿಶ್ವನಾಥ್ನಾಯಕ್, ದಳಸನೂರು ಪಿಡಿಒ ಜಗದೀಶ್, ಕಾರ್ಯದರ್ಶಿ ಶಂಕರಪ್ಪ, ಎಫ್ಡಿಎ ವೆಂಕಟರಮಣಪ್ಪ ಹಾಗು ಗ್ರಾಮಸ್ಥರು ಇದ್ದರು.