ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ನಂದಳಿಕೆ: ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ವತಿಯಂದ 22ನೇ ವರ್ಷಾಚರಣೆ ಅಂಗವಾಗಿ ನಂದಳಿಕೆಯ ಕುಡುಂದೂರಿನ ಬೆರಣಗುಡ್ಡೆಯಲ್ಲಿ ಕೆಸರ್‍ಡೊಂಜಿ ದಿನ ಕಾರ್ಯಕ್ರಮ ಜೂನ್ 26ರಂದು ಆದಿತ್ಯವಾರ ಬೆಳಿಗ್ಗೆ 09-00ಗಂಟೆಗೆ ನಡೆಯಲಿದೆ. ಕಂಬಳ ಶೈಲಿಯಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಕಾರ್ಕಳ ರಶ್ಮಿ ಚಾರಿಟೇಬಲ್ಟ್ರ ಸ್ಟ್‍ನ ಅಧ್ಯಕ್ಷರಾದ ಡಿ.ಆರ್. ರಾಜು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಶಂಕರಪುರ ನವೀನ್ ಅಮೀನ್, ಉದ್ಯಮಿ ಅಲನ್ ರೋಹನ್ ವಾಚ್ ಕಲ್ಯಾಣಪುರ, ಕಾರ್ಕಳ ಛತ್ರಪತಿ ಫೌಂಡೇಶನ್ ಅಧ್ಯಕ್ಷ ಗಿರೀಶ್ ರಾವ್, ಉದ್ಯಮಿ ಉದಯ ಕುಮಾರ್ ಹೆಗ್ಡೆ ಎರ್ಲಪಾಡಿ, ಸಂಜೀವಿ ಶೆಟ್ಟಿ ಬೆರಣಗುಡ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೆಸರ್‍ಡೊಂಜಿ ದಿನ ಕಾರ್ಯಕ್ರಮದಲ್ಲಿ ನಡೆಯಲಿರುವ ಸ್ಪರ್ಧೆಗಳು ಪುರುಷರ ಹಾಗೂ ಮಹಿಳೆಯ ವಿಭಾಗದ ಹಗ್ಗಾಜಗಾಟ ಸ್ಪರ್ಧೆಗೆ 20 ತಂಡಗಳು ಹೆಸರು ನೊಂದಾಯಿಸಿವೆ. ಪುರುಷರ ವಿಭಾಗದಲ್ಲಿ ಹಗ್ಗಾಜಗಾಟ ಸ್ಪರ್ಧೆ, ಮಡಿಕೆ ಹೊಡೆಯುವ ಸ್ಪರ್ಧೆ, 100ಮೀ ಓಟ, ಮಹಿಳೆಯ ವಿಭಾಗದಲ್ಲಿ ಹಗ್ಗಾಜಗಾಟ ಸ್ಪರ್ಧೆ, ಮಡಿಕೆ ಹೊಡೆಯುವ
ಸ್ಪರ್ಧೆ,ಮೂರು ಕಾಲಿನ ಓಟ, ಬಾಲಕರ ವಿಭಾಗದಲ್ಲಿ ಮಡಿಕೆ ಹೊಡೆಯುವ ಸ್ಫರ್ಧೆ, 100ಮೀ ಓಟ, ಉಪ್ಪು ಮುಡಿ ಓಟ, ಬಾಲಕಿಯರ ವಿಭಾಗದಲ್ಲಿ ಮಡಿಕೆ ಹೊಡೆಯುವ ಸ್ಫರ್ಧೆ, 100ಮೀ ಓಟ, ಪಾಲೆದ ಗೊಬ್ಬು ನಡೆಯಲಿದೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಪ್ರಕಟನೆಯಲ್ಲಿ ತಿಳಿಸಿದೆ.