ಕುಂದಾಪುರ, ಜೂ.13: ಕುಂದಾಪುರ ವಲಯದ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ವಾರ್ಷಿಕ ಮಹಾಹಬ್ಬವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ದಿವ್ಯ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ಜೊತೆಗೆ ಸಂತ ಅಂತೋನಿಯವರಿಗೆ ಅನಾಥರು, ಬಡವರು ನಿರಾಶ್ರಿತರೆಂದರೆ ಬಹಳ ಪ್ರೀತಿ ಹಾಗಾಗಿ ಇಲ್ಲಿ ಅವರ ಹೆಸರಿನಲ್ಲಿ ಅನಾಥಲಯ ನಿರ್ಮಿಸಲು ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರ ಯೋಜನೆ ಹಮ್ಮಿಕೊಂಡಿದ್ದು ಇದರ ಶಿಲಾನ್ಯಾಸವನ್ನು ಬಿಶಪರು ಪ್ರಾರ್ಥನೆ ಮತ್ತು ಆಶಿರ್ವವಚನೇಯ ಮೂಲಕ ನೇರವೆರಿಸಿದರು.
ಉಡುಪಿ ಧರ್ಮಪ್ರಾಂತ್ಯದ ನೂತನ ವಿಕಾರ್ ಜನರಲ್ ಅ|ವಂ|ಮೊನ್ಸಿಂಜೆರ್ ಫರ್ಡಿನಂಡ್ ಗೊನ್ಸಾಲ್ವಿಸ್ ದೇವರ ವಾಕ್ಯ ಪಟಿಸಿ ತಮ್ಮ ಪ್ರವಚನದಲ್ಲಿ “ಸಂತ ಅಂತೋನಿ ಇಡೀ ಪ್ರಪಂಚದಲ್ಲಿ ಅವರು ಪವಾಡಗಳನ್ನು ಮಾಡುತ್ತಾ ಇದ್ದಾರೆ. ಅವರಿಂದ ಭಕ್ತಾಧಿಗಳು ಅನೇಕ ವರಗಳನ್ನು ಪಡೆದುಕೊಂಡಿದ್ದಾರೆ. ಈ ಪ್ರದೇಶವು ಬಹಳ ವರ್ಷಗಳ ಹಿಂದೆ ಧುರ್ಗಮ ಪ್ರದೇಶವಾಗಿದ್ದು, ಜನರು ಇಲ್ಲಿ ಸಂಚಾರ ಮಾಡುವುದಕ್ಕೆ ಭಯ ಪಡುತಿದ್ದರು, ಇಲ್ಲಿ ಸಂತ ಅಂತೋನಿಯವರ ದೇವಾಲಯ ನಿರ್ಮಾಣವಾದ ಮೇಲೆ ಇಲ್ಲಿ ಜನಸಂಚಾರ ಭಯವಿಲ್ಲದೆ ಸಾಗಿತು. ಈ ಪುಣ್ಯ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಭಕ್ತಾಧಿಗಳ ಸಂಖ್ಯೆ ಹೆಚ್ಚುತ್ತಾ ಇದೆ. ಇಲ್ಲಿನ ಸಂತ ಅಂತೋನಿಯವರ ಮೂಲಕ ಹಲವಾರು ಭಕ್ತಾಧಿಗಳು, ಉಪಕಾರವನ್ನು ಪಡೆದುಕೊಂಡಿದ್ದಾರೆ, ಇಲ್ಲಿ ಅನೇಕ ಪವಾಡಗಳು ನಡೆದಿವೆ” ಎಂದು ತಿಳಿಸುತ್ತಾ ಅದರಲ್ಲಿ ಕೆಲವು ಪವಾಡಗಳನ್ನು ವಿವರಿಸಿ “ಇದೀಗ ಇಲ್ಲಿ ಅನಾಥ ದೀನದಲಿತರಿಗಾಗಿ, ಅನಾಥಶ್ರಮವನ್ನು ನಿರ್ಮಿಸಲಾಗುವುದು. ಸಂತ ಅಂತೋನಿಯವರು ದೀನ ದಲಿತರಬಗ್ಗೆ ಅನಾಥರ ಬಗ್ಗೆ ಕಾಳಜಿ ಇದ್ದು ಅವರು ದಾನಿಗಳಾಗಿದ್ದರು, ಅವರಂತೆ ನಾವು ದಾನಿಗಳಾಗಿ ಈ ಮಹಾನ ಯೋಜನೆ ಪೂರ್ಣವಾಗಲು ಸಹಕರಿಸೋಣ. ದೀನ ದಲಿತರಿಗೆ, ಬಡವರಿಗೆ, ಸಹಾಯ ನೀಡುವರೊ, ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡುತ್ತಾರೊ, ಹಸಿದವರಿಗೆ ಆಹಾರ ಕೊಡುತ್ತಾರೊ, ಬಾಯಾರಿದವರಿಗೆ ನೀರು ಕೊಡುತ್ತಾರೊ, ಅದು ನನಗೆ ಮಾಡಿದಂತೆ ಅದಕ್ಕೆ ನಿಮಗೆ ಸ್ವರ್ಗರಾಜ್ಯ ದೊರಕುವುದು ಎಂದು ಯೇಸು ತಿಳಿಸಿದ್ದಾರೆ, ಅದರಂತೆ ನಾವು ನೆಡೆದು ಸ್ವರ್ಗರಾಜ್ಯವನ್ನು ಪಡೆಯೋಣ” ಎಂದು ಸಂದೇಶ ನೀಡಿದರು.
ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ “ಸಂತ ಅಂತೋನಿಯವರು ಪವಾಡ ಪುರುಷರಾಗಿದ್ದು, ಅವರು ಬಡವರನ್ನು ಅನಾಥರನ್ನು, ರೋಗಿಗಳನ್ನು ಬಹಳವಾಗಿ ಪ್ರೀತಿಸುತಿದ್ದರು. ಅವರ ಹೆಸರಿನಲ್ಲಿ ಅವರ ನಡೆಯಂತೆ ಅನಾಥಶ್ರಾಲಯವನ್ನು ನಿರ್ಮಿಸಲು ಹೊರಟಿದ್ದೇವೆ. ನಿಮ್ಮ ಸಹಕಾರ ಮತ್ತು ಸಂತ ಅಂತೋನಿಯವರ ಆಶಿರ್ವಾದದಿಂದ ಬರುವ ವರ್ಷ ಇದೇ ದಿನದಂದು ಲೋಕಾರ್ಪಣೆಗೊಳ್ಳಲಿ” ಎಂದು ಹರಸಿದರು. ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರು ಶುಭಾಶಯಗಳನ್ನು ಅರ್ಪಿಸಿದರು. ದಾನಿಗಳಿಗೆ, ಬಲಿಪೂಜೆ ನಿವೇದನೆ ಮಾಡಿಕೊಂಡವರಿಗೆ ಮುಂಬತ್ತಿ ನೀಡಿ ಗೌರವಿಸಲಾಯಿತು. ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ವಾರ್ಷಿಕ ಮಹಾಹಬ್ಬದ ಬಲಿದಾನದಲ್ಲಿ ಕುಂದಾಪುರ ವಲಯದ, ಹೊರ ವಲಯದ ಹಲವಾರು ಧರ್ಮಗುರುಗಳು ಮತ್ತು ಅತಿಥಿ ಧರ್ಮಗುರುಗಳು ಭಾಗಿಯಾಗಿದ್ದು ಭಕ್ತಾಧಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಪಿಯುಸ್ ನಗರ ಚರ್ಚಿನ ಗಾಯನ ಮಂಡಳಿ ಗಾಯನಗಳನ್ನು ಹಾಡಿತು. ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ವಂದನೆಗಳನ್ನು ಸಲ್ಲಿಸಿದರು.