JANANUDI.COM NETWORK
ಹೊಸಂಗಡಿ, ಕುಂದಾಪುರ: ಇಲ್ಲಿಗೆ ಸಮೀಪದ ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರದಲ್ಲಿ ಅವಶೇಷದ ಹಬ್ಬವನ್ನು 2022ರ ಫೆಬ್ರವರಿ 15 ಮಂಗಳವಾರದಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋ, ಇವರ ಪ್ರಧಾನ ಯಾಜಕತ್ವದಲ್ಲಿ ದಿವ್ಯ ಬಲಿದಾನವನ್ನು ಅರ್ಪಿಸಲಾಯಿತು.
ಕುಂದಾಪುರ ವಲಯದ ಮಾಜಿ ಪ್ರಧಾನರಾದ ಈಗ ಪೆರೆಂಪಳ್ಳಿ ಚರ್ಚಿನ ಧರ್ಮಗುರುಗಳಾಗಿರುವ ವಂ|ಅನಿಲ್ ಡಿಸೋಜಾ ಹಬ್ಬದ ಸಂದೇಶ ನೀಡಿದರು. “ಕುಟುಂಬದಲ್ಲಿ ದೇವರ ನಿμÉ್ಠ ಬೆಳೆಯ ಬೇಕು, ಕುಟುಂಬದಲ್ಲಿ ದೇವರ ನಿμÉ್ಠಯೆ ನಮ್ಮ ನಂಬಿಕೆಗೆ ಅಡಿಪಾಯವಾಗಿದೆ. ಕುಟುಂಬದಲ್ಲಿ ತನ್ನ ಜನರನ್ನು ಸಂರಕ್ಷಿಸುವಲ್ಲಿ ದೇವರು ನಂಬಿಗಸ್ತನಾಗಿದ್ದಾನೆ. ಕುಟುಂಬವನ್ನು ಬೆಳೆಸುವುದು ಕಷ್ಟದ ಕೆಲಸಗಳಲ್ಲಿ ಒಂದಾಗಿರಬಹುದು ಆದರೆ ನೀವು ಎಂದಿಗೂ ಮಾಡುವ ಅತ್ಯಂತ ಪುಣ್ಯದ ಕೆಲಸಗಳಲ್ಲಿ ಒಂದಾಗಿದೆ. ಇಂದು ಜಗತ್ತಿನಲ್ಲಿ ಅನೇಕ ನಕಾರಾತ್ಮಕ ಪ್ರಭಾವಗಳಿರುವಾಗ, ಕುಟುಂಬದ ಮೇಲೆ ಕೇಂದ್ರೀಕರಿಸುವುದು ಪ್ರಾಮುಖ್ಯತೆಯನ್ನು ಹೊಂದಿಲದಿರುವುದು ನಾವು ಗಮನದಲ್ಲಿ ಇಟ್ಟುಕೊಂಡು ಇದನ್ನು ಸರಿಪಡಿಸಿಕೊಳ್ಳಬೇಕು. ಸಂತ ಅಂತೋನಿ ಬಡವರು ಮತ್ತು ದೀನದಲಿತರನ್ನು ಪ್ರೀತಿಸುತ್ತಿದ್ದರು. ನಾವೂ ಕೂಡ ಅದನ್ನು ಪಾಲಿಸಬೇಕು” ಎಂದು ಅವರು ಹೇಳಿದರು.
ಸಂತ ಅಂತೋನಿಯವರ ನೊವೆನಾ ಪ್ರಾರ್ಥನೆಯನ್ನು ನಡೆಸಿಕೊಟ್ಟ ನಂತರ ಬಿಷಪ್ ಅತಿ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ತಮ್ಮ ಹಬ್ಬದ ಸಂದೇಶವನ್ನು ನೀಡಿದರು.
ಬಲಿದಾನದಲ್ಲಿ ಕುಂದಾಪುರ ವಲಯ ಪ್ರಧಾನ ಆ|ವಂ|ಸ್ಟ್ಯಾನಿ ತಾವ್ರೊ ಮತ್ತು ಅನೇಕ ಅತಿಥಿ ಧರ್ಮಗುರುಗಳು, ಅನೆಕ ಧರ್ಮಭಗಿನಿಯರು, ಭಾರಿ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗಿಯಾಗಿದ್ದರು. ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಧರ್ಮಗುರು ಸುನಿಲ್ ವೇಗಸ್ ಧನ್ಯವಾದಗಳನ್ನು ಅರ್ಪಿಸಿದರು.