ಕುಂದಾಪುರ, ಜೂ.13: ಕುಂದಾಪುರ ವಲಯದ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ವಾರ್ಷಿಕ ಮಹಾಹಬ್ಬವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ನೇತ್ರತ್ವದಲ್ಲಿ ದಿವ್ಯ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ಈ ಹಬ್ಬವು ‘ನೀವು ತಪ್ಪದೇ ಪ್ರಾಥಿಸಿರಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಯಿತು. ಪ್ರಾರ್ಥನೆ ಒಂದು ಬಹಳ ಶಕ್ತಿದಾಯಕ ಅಸ್ತ್ರವಾಗಿದೆ, ಅದು ಸ್ವರ್ಗದ ದ್ವಾರಗಳನ್ನು ತೆರೆಯುವ ಕೀಲಿ ಕೈ ಆಗಿದೆ. ಆದರಿಂದ ತಪ್ಪದೆ ಪ್ರಾರ್ಥಿಸಿರಿ. ಎದೆ ಗುಂದದೆ ಪ್ರಾರ್ಥಿಸಿರಿ. ಪ್ರಾರ್ಥನೆಯ ಮೂಲಕ ನಾವು ದೇವರ ಸಾಮಿಪ್ಯ ಪಡೆಯೋಣ, ಅವಾಗ ದೇವರು ನಮ್ಮ ಅಗತ್ಯಕ್ಕೆ ತಕ್ಕಂತೆ ಪ್ರತಿಫಲ ಕೊಡುತ್ತಾನೆ. ನಮ್ಮ ಕೊರೀಕೆಗಳನ್ನು ಆಲಿಸುತ್ತಾನೆ. ಯೇಸು ಸ್ವಾಮಿಯು ತಾನು ಮಾಡಿದ ಎಲ್ಲ ಅದ್ಬುತಗಳ ಮೊದಲು, ಪ್ರಾರ್ಥಿಸುತ್ತಿದ್ದನು. ಸತ್ತವರನ್ನು ಜೀವಂತ ಮಾಡುವಾಗಲೂ, ರೋಗಿಗಳನ್ನು ಗುಣ ಪಡಿಸುವಾಗಲೂ, ತನ್ನ ಧರ್ಮದೂತರನ್ನು ಆಯ್ಕೆ ಮಾಡುವಾಗಲೂ ಪ್ರಾರ್ಥಿಸಿದ್ದನು. ನಿಮ್ಮ ನೆಚ್ಚಿನ ಸಂತ ಅಂತೋನಿಯವರು ಕೂಡ ಗಂಟೆ ಗಟ್ಟಲೆ ಪವಿತ್ರ ಪ್ರಸಾದದ ಮುಂದೆ ಮಂಡಿಯೂರಿ ಪ್ರಾಥಿಸುತಿದ್ದರು, ಪ್ರಾರ್ಥನೇಯ ಮೂಲಕ ಅವರಿಗೆ ಸಿಕ್ಕ ಕ್ರಿಸ್ತಿ ಅನುಭವ ನಿಮ್ಮಲ್ಲಿ ಹಂಚಿಕೊಳ್ಳುತಿದ್ದರು” ಎನ್ನುತ್ತಾ “ನಮ್ಮ ಕುಟುಂಬಗಳು ಪ್ರಾರ್ಥನೇಯ ಕೇಂದ್ರಗಳಾಗಲಿ, ನಮ್ಮ ಮನೆಯೇ ಪ್ರಾರ್ಥನೇಯ ಶಾಲೆಗಳಾಗಲಿ, ಅಲ್ಲೆ ನಾವು ನಮ್ಮ ಪ್ರಾರ್ಥನೆಗಳನ್ನು ಕಲಿಯೋಣ, ನಮ್ಮ ಪೋಪ್ ಸ್ವಾಮಿ ಹೇಳುತ್ತಾರೆ, ನಮ್ಮ ಎಲ್ಲಾ ಮನೆ ಕುಟುಂಬಗಳಲ್ಲಿ ಒಂದು ದೇವಪೀಠ ಇರಲಿ (ಆಲ್ತಾರ್) ಅಲ್ಲಿ ನಾವು ಭಕ್ತಿಯಿಂದ ಪ್ರಾಥಿಸೋಣ, ನಾವು ಕ್ರೈಸ್ತರು ಪ್ರಾರ್ಥನೆ ಮತ್ತು ಕ್ರೈಸ್ತ ಜೀವನ ವಿಂಗಡಿಸಲಾಗದು ಪ್ರಾಥನೇಯ ಮೂಲಕ ನಾವು ಮುಕ್ತಿ ಪಡೆಯೋಣ ಎಂದು ಸಂದೇಶ ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ಅ|ವಂ| ವಿಕಾರ್ ಜನರಲ್ ಅ|ವಂ|ಮೊನ್ಸಿಂಜ಼ೊರ್ ಫರ್ಡಿನಂಡ್ ಗೊನ್ಸಾಲ್ವಿಸ್ ದೇವರ ವಾಕ್ಯ ಪಟಿಸಿಸಿದರು. ನೂತನವಾಗಿ ಆಯ್ಕೆಯಾದ ಕುಂದಾಪುರ ವಲಯದ ಪ್ರಧಾನರು, ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ, ಸಂತ ಅಂತೋನಿಯವರಿಗೆ ಸಮರ್ಪಿಸಲ್ಪಟ್ಟ ಇಗರ್ಜಿಗಳು ಸಾಕಷ್ಟಿವೆ, ಆದರೆ ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರಗಳಲ್ಲಿ ಸೇರಿದ ಜನ ನೋಡಿದರೆ, ಇದೊಂದು ಅದ್ಬುತವೇ ಎಂದು ಕಾಣುತ್ತೀದೆ” ಎಂದು ತಿಳಿಸಿ ಹಬ್ಬದ ಶುಭಾಷಯಗಳನ್ನು ಕೋರಿದರು. ಸಂದೇಶ ನೀಡಿದರು.
ದಾನಿಗಳಿಗೆ, ಬಲಿಪೂಜೆ ನಿವೇದನೆ ಮಾಡಿಕೊಂಡವರಿಗೆ ಮುಂಬತ್ತಿ ನೀಡಿ ಗೌರವಿಸಲಾಯಿತು. ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ವಾರ್ಷಿಕ ಮಹಾಹಬ್ಬದ ಬಲಿದಾನದಲ್ಲಿ ಕುಂದಾಪುರ ವಲಯದ, ಹೊರ ವಲಯದ ಹಲವಾರು ಧರ್ಮಗುರುಗಳು ಕಾರವಾರ ಧರ್ಮಪ್ರಾಂತ್ಯದ ಧರ್ಮಗುರುಗಳು ಅತಿಥಿ ಧರ್ಮಗುರುಗಳು ಮತ್ತು ಧರ್ಮ ಭಗಿನಿಯರು ಭಾಗಿಯಾಗಿದ್ದು ಭಕ್ತಾಧಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಪಡುಕೋಣೆ ಚರ್ಚಿನ ಗಾಯನ ಮಂಡಳಿ ಭಕ್ತಿ ಗಾಯನಗಳನ್ನು ಹಾಡಿತು.
ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ಮಾತನಾಡಿ “ಅನಾಥರಿಗೆ ನೆಚ್ಚಿನವರಾದ ್ ಸಂತ ಅಂತೋನಿಯವ ಹೆಸರಿನಲ್ಲಿ ಕಳೆದ ವಷ 60 ಜನ ಅನಾಥರಿಗೆ ಧರ್ಮಾರ್ಥ ಊಟ ಉಪಚಾರ, ನೆಲವು ನೀಡುವ ಅನಾಥಲಯವನ್ನು ಆರಂಭಿಸಲು, ಕಳೆದ ವರ್ಷ ಶಿಲಾನ್ಯಾಸ ಮಾಡಿದ್ದು, ಕೆಲಸ ಆರಂಭವಾಗಿದೆ, ಇದು 6 ಕೋಟಿ ಅಂದಾಜಿನ ಯೋಜನೆಯಾಗಿದ್ದು, ಈಗಲು ನಮಗೆ ಉದಾರ ದಾನಿಗಳ ಸಹಕರ ಅಗತ್ಯವಿದೆಯೆಂದು, ತಿಳಿಸಿ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು.