ಕೆದಿಂಜೆ ಶಾಲೆ : ಶಾಲಾ ಪ್ರಾರಂಭೋತ್ಸವ, ಉಚಿತ ಪಠ್ಯ ಪುಸ್ತಕ, ಬರೆಯುವ ಪುಸ್ತಕ, ಕೊಡೆ, ಲೇಖನಾ ಸಾಮಾಗ್ರಿ ವಿತರಣೆ
ಕೆದಿಂಜೆ ಶ್ರೀ ವಿದ್ಯಾ ಬೋದಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಅತ್ಯಂತ ವಿಜಂಭೃಣೆಯಿಂದ ಬುಧವಾರ ಜರಗಿತು. ಆ ಪ್ರಯುಕ್ತ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ ಸರಕಾರದಿಂದ ಉಚಿತ ಪಠ್ಯ ಪುಸ್ತಕ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ದಾನಿಗಳಾದ ಮುಂಬೈ ಸದಾಶಿವ ಪುತ್ರನ್ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಎನ್. ಸುಧಾಕರ್ ರಾವ್ ಅವರ ಪ್ರಯೋಜಕತ್ವದಲ್ಲಿ ಉಚಿತ ಬರೆಯುವ ಪುಸ್ತಕ, ಶಾಲಾ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಕೊಡೆಗಳ ಹಸ್ತಾಂತರ, ನಿವೃತ್ತ ಮುಖ್ಯ ಶಿಕ್ಷಕ ಕೆ. ಅನಿಲ್ ಕುಮಾರ್ ಅವರ ಪ್ರಯೋಜಕತ್ವದಲ್ಲಿ ಉಚಿತ ಲೇಖನಾ ಸಾಮಾಗ್ರಿಗಳ ಕೊಡುಗೆ ಹಸ್ತಾಂತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಯು. ಶೇಷಗಿರಿ ಕಾಮತ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಾನಿಗಳಾದ ಮುಂಬೈ ಸದಾಶಿವ ಪುತ್ರನ್, ಶಾಲಾ ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಎನ್. ತುಕಾರಾಮ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕರಾದ ಕೆ. ಅನಿಲ್ ಕುಮಾರ್, ಎನ್. ಸುಧಾಕರ್ ರಾವ್, ನಿವೃತ್ತ ಶಿಕ್ಷಕಿ ಸರೋಜಿನಿ ಶೆಟ್ಟಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು, ಕಾರ್ಯದರ್ಶಿ ಸಂದೀಪ್ ವಿ. ಪೂಜಾರಿ ಅಬ್ಬನಡ್ಕ, ನಂದಳಿಕೆ ಗ್ರಾಮ ಪಂಚಾಯತ್ ಸದಸ್ಯೆ ಪದ್ಮಶ್ರೀ ಪೂಜಾರಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಬೆಳ್ಮಣ್ಣು ಜೇಸಿಐ ಅಧ್ಯಕ್ಷ ಸತೀಶ್ ಪೂಜಾರಿ ಅಬ್ಬನಡ್ಕ, ಬೋಳ ಶ್ರೀ ಬ್ರಹ್ಮಬೈದರ್ಕಳ ಸೇವಾ ಸಂಘದ ಅಧ್ಯಕ್ಷ ಉದಯ ಅಂಚನ್ ಬೋಳ ಮೊದಲಾದವರಿದ್ದರು.
ದಾನಿಗಳಾದ ಮುಂಬೈ ಸದಾಶಿವ ಪುತ್ರನ್ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕರಾದ ಪ್ರಥ್ವೀರಾಜ್ ಬಲ್ಲಾಳ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಶಾಲಾ ಸಹಶಿಕ್ಷಕಿ ರೇಖಾ ಪೈ ವಂದಿಸಿದರು. ಈ ಸಂದರ್ಭದಲ್ಲಿ ಶಾಲಾ ಗೌರವಶಿಕ್ಷಕಿಯರಾದ ಮಮತಾ ಪೂಜಾರಿ, ಜಯಲಕ್ಷ್ಮೀ, ಭಾರತಿ ಆಚಾರ್ಯ ಮೊದಲಾದವರಿದ್ದರು.