ಕೆದಿಂಜೆ ಶಾಲೆ : ಹಳೆ ವಿದ್ಯಾರ್ಥಿಗಳ ಸಮಾವೇಶ, ಗುರುವಂದನೆ ಕಾರ್ಯಕ್ರಮ

ಕಾರ್ಕಳ ತಾಲೂಕು ಮಟ್ಟದ ಅತ್ಯುತ್ತಮ ಶಾಲೆ ಪ್ರಶಸ್ತಿ ಪುರಸ್ಕøತ ಸಂಸ್ಥೆ ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಶಾಲಾ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಸಂಘ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆದಿತ್ಯವಾರ ಶಾಲಾ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶ, ಗುರುವಂದನೆ ಕಾರ್ಯಕ್ರಮ, ವಿದ್ಯಾರ್ಥಿ ವೇತನ ವಿತರಣೆ, ಚೈತ್ಯನ್ಯ ಅವಲೋಕನ ಬಿಡುಗಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಯು. ಶೇಷಗಿರಿ ಕಾಮತ್ ವಹಿಸಿದ್ದರು. ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಜಯಂತ್ ರಾವ್ ಪಿ. ಚೈತ್ಯನ್ಯ ಅವಲೋಕನ ಬಿಡುಗಡೆ ಮಾಡಿದರು. ಭಾರತೀಯ ಜೇಸಿಐನ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಕೆ. ಅಭಿನಂದನಾ ಭಾಷಣ ಮಾಡಿದರು. ಬೆಳ್ಮಣ್ಣು ವಾಸ್ತು ತಜ್ಞರು, ಜ್ಯೋತಿಷ್ಯರಾದ ಡಾ. ಆಚಾರ್ಯ ವಾದಿರಾಜ ಅವರು ಗುರುವಂದನಾ ಕಾರ್ಯಕ್ರಮದ ಪ್ರಯೋಜಕತ್ವ ನೀಡಿ ನಿವೃತ್ತ ಹಾಗೂ ಪ್ರಸಕ್ತ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರು ಆರ್ಥಿಕವಾಗಿ ಹಿಂದುಳಿದ ಕಲಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ವೇದಿಕೆಯಲ್ಲಿ ಶಾಲಾ ಯಕ್ಷಗಾನ ಗುರುಗಳಾದ ಮಹಾವೀರ ಪಾಂಡಿ ಕಾಂತಾವರ, ಶಾಲಾ ಚಿತ್ರಕಲಾ ಶಿಕ್ಷಕರಾದ ಶಿರ್ವ ಗಣೇಶ್ ಆಚಾರ್ಯ, ಶಾಲಾ ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸೂರ್ಯಕಾಂತ್ ಶೆಟ್ಟಿ ಮೊದಲಾದವರಿದ್ದರು.
ಗುರುವಂದನೆ : ಶಾಲಾ ನಿವೃತ್ತ ಶಿಕ್ಷಕರಾದ ಪ್ರಭಾಕರ್ ಶೆಟ್ಟಿ, ತುಕಾರಾಮ ಶೆಟ್ಟಿ, ಸರೋಜಿನಿ ಶೆಟ್ಟಿ, ಅನಿಲ್ ಕುಮಾರ್, ಲಕ್ಷ್ಮೀನಾರಾಯಣ ಭಟ್, ಸುಧಾಕರ್ ರಾವ್ ಹಾಗೂ ಪ್ರಸಕ್ತ ಸಾಲಿನಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಾದ ಪ್ರಥ್ವೀರಾಜ್ ಬಲ್ಲಾಳ್, ರೇಖಾ ಪೈ, ಗೌರವ ಶಿಕ್ಷಕರಾದ ಮಮತಾ, ಜಯಲಕ್ಷ್ಮೀ, ಚೇತನಾ, ಭಾರತಿ ಅವರನ್ನು ಸನ್ಮಾನಿಸಲಾಯಿತು.
ಶಾಲಾ ವಿದ್ಯಾರ್ಥಿಗಳು ಪ್ತಾರ್ಥನೆಗೈದರು, ಶಾಲಾ ಮುಖ್ಯ ಶಿಕ್ಷಕರಾದ ಪ್ರಥ್ವೀರಾಜ್ ಬಲ್ಲಾಳ್ ಅವರು ಸ್ವಾಗತಿಸಿದರು, ಶಾಲಾ ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ತುಕಾರಾಮ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು, ಶಾಲಾ ಸಹಶಿಕ್ಷಕಿ ರೇಖಾ ಪೈ ವಿದ್ಯಾರ್ಥಿ ವೇತನದ ವಿವರ ನೀಡಿದರು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸದಸ್ಯರಿಂದ ಸಂಗೀತ ಕಾರ್ಯಕ್ರಮ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ‘ಪಂಚವಟಿ’ ಯಕ್ಷಗಾನ ಜರಗಿತು.