

ಮಂಗಳೂರು; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಅಕಾಡೆಮಿ ಸಭಾಂಗಣದಲ್ಲಿ ಎಪ್ರಿಲ್ 05, 2025ರಂದು ʼಕಾವ್ಯಾಂ ವ್ಹಾಳೊʼ ಶೀರ್ಷಿಕೆಯಡಿ ಮಾಸಿಕ ಕವಿಗೋಷ್ಟಿಯನ್ನು ಹಮ್ಮಿಕೊಂಡಿತ್ತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ, ನೆರೆದಿರುವ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲೇ ಪ್ರಪ್ರಥಮ ಬಾರಿ ಕೊಂಕಣಿ ಭಾಷೆಯಲ್ಲಿ ಪ್ರಬಂಧವನ್ನು ಮಂಡಿಸಿ, ಪಿಎಚ್. ಡಿ. ಮಾಡಿದ ಡೊ.ಪ್ರೇಮ್ ಮೊರಾಸ್ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಗಾಯಕಿ ರಿಶಲ್ ಮೆಲ್ಬಾ ಕ್ರಾಸ್ತಾರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೊಡಿಯಾಲ್ ಖಬರ್ ಡೊಟ್ ಕೊಮ್ನ ಸಂಪಾದಕರಾದ ಶ್ರೀ ವೆಂಕಟೇಶ್ ಬಾಳಿಗರವರು ಭಾಗವಹಿಸಿದ್ದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆದ, ಡೊ. ಆಲ್ವಿನ್ ಡೆಸಾರವರು ಕವಿತೆಗಳ ಬಗ್ಗೆ ಉಪನ್ಯಾಸವನ್ನು ನಡೆಸಿದರು.
ಖ್ಯಾತ ಕವಿ ಶ್ರೀ ಜೊಸ್ಸಿ ಪಿಂಟೊ, ಕಿನ್ನಿಗೋಳಿಯವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಎಲ್ಸನ್ ಡಿಸೋಜ, ಹಿರ್ಗಾನ್ರವರು ವಾಚಿಸಿದ ಕವಿತೆಗಳ ಮೇಲೆ ವಿಮರ್ಷೆಯನ್ನು ನೀಡಿದರು. ಅನಿಲ್ ಜೆ.ಕುವೆಲ್ಲೊ, ರಮಾನಾಥ ಮೇಸ್ತ ಶಿರೂರು, ವಿನೋದ್ ಪಿಂಟೊ ತಾಕೊಡೆ, ಶ್ರೀಮತಿ ಸತ್ಯವತಿ ಕಾಮತ್ ಮಂಗಳೂರು, ಶ್ರೀಮತಿ ಮೇರಿ ಸಲೋಮಿ ಡಿಸೋಜ ಮೊಗರ್ನಾಡ್, ವೆಂಕಟೇಶ್ ನಾಯಕ್ ಮಂಗಳೂರು, ನವೀನ್ ಪಿರೇರಾ ಸುರತ್ಕಲ್, ರಿಚ್ಚಿ ಪಿರೇರಾ ದೆರೆಬಯ್ಲ್, ಶ್ರೀಮತಿ ಮರ್ಲಿನ್ ಮಸ್ಕರೇನ್ಹಸ್, ಶ್ರೀಮತಿ ಪ್ರೀತಾ ಮಿರಾಂದಾ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು.
ಅಕಾಡೆಮಿ ಸದಸ್ಯರಾದ ಶ್ರೀ ರೊನಾಲ್ಡ್ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆ ನೀಡಿದರು. ಅಕಾಡೆಮಿ ಸದಸ್ಯರಾದ ಶ್ರೀ ನವೀನ್ ಲೋಬೊ, ಶ್ರೀ ಸಮರ್ಥ್ ಭಟ್, ಶ್ರೀಮತಿ ಅಕ್ಷತಾ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.








