ಮಂಗಳೂರು: ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ಲಿ.) ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ: 17-09-2023 ರಂದು ಮಂಗಳೂರಿನ ಸೆಬಾಸ್ಟಿಯನ್ ಕಮ್ಯೂನಿಟಿ ಹಾಲ್, ಬೆಂದೂರ್ ಇಲ್ಲಿ ಜರುಗಿತು. ಕು. ಶೃತಿ, ಕು.ಸ್ವಾತಿ ಹಾಗೂ ಶ್ರೀಮತಿ ಸೌಮ್ಯ ಪ್ರಾರ್ಥಿಸಿದರು. ಸೊಸೈಟಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್.ಕೆ ಸದಸ್ಯರನ್ನು ಸ್ವಾಗತಿಸಿದರು. 2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಹಾಗೂ ಲೆಕ್ಕಪತ್ರ ಹಾಗೂ ಬಜೆಟನ್ನು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪದ್ಮನಾಭ.ಎಂ ಮಂಡಿಸಿದರು, ನೋಟಿಸನ್ನು ನಿರ್ದೇಶಕರಾದ ಶ್ರೀ ಅಶೋಕ್.ಜಿ, ಲಾಭ ವಿಂಗಡಣೆಯನ್ನು ಶ್ರೀ ಭಾಸ್ಕರ್.ಕೆ.ಅಡ್ವಕೇಟ್, ಹಿಂದಿನ ಮಹಾಸಭೆಯ ನಿರ್ಣಯವನ್ನು ಶ್ರೀ ದಿವಾಕರ ಶಂಭೂರು 2023-24 ರ ಕಾರ್ಯ ಚಟುವಟಿಕೆಯನ್ನು ಶ್ರೀ ಹರೀಶ್.ಪಿ.ಭಂಡಾರಿ ಸಭೆಗೆ ಮಂಡಿಸಿದ ಮೇರೆಗೆ ದಾಖಲಿಸಲ್ಪಟ್ಟವು. ಸೊಸೈಟಿಯ ಬೈಲಾಕ್ಕೆ ಸಂಬಂಧಪಟ್ಟಂತೆ ತಿದ್ದುಪಡಿಯ ವಿವರವನ್ನು ನಿರ್ದೇಶಕರಾರ ಶ್ರೀ ಕುಮಾರ್ ಭಂಡಾರಿ ಸಭೆಗೆ ಮಂಡಿಸಿದ ಮೇರೆಗೆ ಅಂಗೀಕರಿಸಲಾಯಿತು. ತಿದ್ದುಪಡಿಯ ಪ್ರಕಾರ ಹಾಲಿ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ದ.ಕ ಹಾಗೂ ಉಡುಪಿ ಜಿಲ್ಲೆಯ ಜೊತೆಗೆ ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ನಗರ ವ್ಯಾಪ್ತಿಗೆ ವಿಸ್ತರಿಸಿ ಅನುಮೋದನೆಗೆ ಸರ್ಕಾರವನ್ನು ಕೋರಲು ತೀರ್ಮಾನಿಸಲಾಯಿತು. ಸೊಸೈಟಿಯು ಪ್ರತಿ ವರ್ಷ ಲಾಭಗಳಿಕೆ, ಸರ್ಕಾರದ ಆಡಿಟ್ ವರ್ಗಿಕರಣದಲ್ಲಿ “ಎ” ವರ್ಗ ಸತತ ಪಡೆದ ಸಾಧನೆ ಮಾಡಿರುವುದರ ಜೊತೆಗೆ ಕಳೆದ 3 ವರ್ಷಗಳಿಂದ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ “ಸಾಧನ ಪ್ರಶಸ್ತಿ” ಪಡೆದಿರುವುದಲ್ಲದೆ ಮಂಗಳೂರು, ಉಡುಪಿ, ಸುರತ್ಕಲ್, ಬಂಟ್ವಾಳ ಇಲ್ಲಿನ ಎಲ್ಲಾ ಶಾಖೆಗಳು ಲಾಭ ಗಳಿಸಿರುವುದರೊಂದಿಗೆ ಎಲ್ಲಾ ಶಾಖೆಗಳು ಕಂಪ್ಯೂಟರೀಕೃತ ಲೆಕ್ಕಪತ್ರ ಅಳವಡಿಸಲಾಗಿರುತ್ತದೆ. ಸೊಸೈಟಿಯ ಅಭಿವೃದ್ಧಿ ಹಾಗೆಯೇ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ “ಸಾಧನ ಪ್ರಶಸ್ತಿ” ಪಡೆದಿರುದನ್ನು ಹಾಗೂ ಸೊಸೈಟಿಯ ಉತ್ತಮ ಅಭಿವೃದ್ಧಿಯ ಬಗ್ಗೆ ಮಹಾಸಭೆಯಲ್ಲಿ ಸದಸ್ಯರು ಪ್ರಶಂಸಿದರು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅಧಿಕ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪೆÇ್ರೀತ್ಸಾಹ ಧನ ನೀಡಿ ಗೌರವಿಸಲಾಯಿತು. ಲಾಭವನ್ನು ವಿಂಗಡಿಸಿ ಶೇ 20% ಡಿವಿಡೆಂಡ್ ಘೋಷಿಸಲಾಯಿತು. ಸಭೆಯಲ್ಲಿ ನಿರ್ದೇಶಕರಾದ ಶ್ರೀ ರಘುವೀರ ಭಂಡಾರಿ, ಶ್ರೀ ಭಾಸ್ಕರ ಭಂಡಾರಿ ಸುರತ್ಕಲ್, ಶ್ರೀ ಸುಂದರ ಭಂಡಾರಿ ರಾಯಿ, ಶ್ರೀ ರಾಜಾ ಬಂಟ್ವಾಳ, ಶ್ರೀ ರವೀಂದ್ರನಾಥ್ ಉಳ್ಳಾಲ, ಶ್ರೀ ಬಿ.ಎಸ್.ಭಂಡಾರಿ ಶ್ರೀ ಶೇಖರ್.ಎಚ್. ಉಪಸ್ಥಿತರಿದ್ದರು, ಶ್ರೀ ಶಶಿಧರ್ ಕಾರ್ಕಳ ನಿರ್ದೇಶಕರು ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷರಾದ ಶ್ರೀ ರಾಮ ಭಂಡಾರಿ.ಎಚ್ ವಂದಿಸಿದರು.