ಶ್ರೀನಿವಾಸಪುರ 2 : ಕಸಬಾ ರೇಷ್ಮೆ ಸಹಕಾರ ಸಂಘವು ಅದ್ಬುತವಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಇಂದು ನೂತನ ಗೋದಾಮು, ಮಳಿಗೆಗಳು ನಿರ್ಮಿಸಿಕೊಳ್ಳಲು ಸಾಧ್ಯವಾಯಿತು ಎಂದು ಶಾಸಕ ಕೆ.ಆರ್.ರಮೇಶ್ಕುಮಾರ್ ಹೇಳಿದರು.
ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರರ ಹಾಗು ರೈತ ಸೇವ ಸಹಕಾರ ಸಂಘದ ನೂತನ ಗೋದಾಮು ಮತ್ತು ಮಳಿಗೆಗಳನ್ನು ಬುಧವಾರ ಉದ್ಗಾಟಿಸಿ ಮಾತನಾಡಿದರು.
70ಲಕ್ಷ ಮೊತ್ತದಲ್ಲಿ ಎಂಎಸ್ಸಿ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಗೋದಾಮು, ಮಳಿಗಗೆಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿ, ಈ ಮಳಿಗೆಗಳು ಸಾರ್ವಜನಿಕವಾಗಿ ಉಪಯೋವಾಗುವಂತೆ ಬಳಸಿಕೊಂಡು ಆರ್ಥಿಕವಾಗಿ ಸಭಲರಾಗುವಂತೆ ಕಿವಿಮಾತು ಹೇಳಿದರು.
ಕಸಬಾ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಅಯ್ಯಪ್ಪ, ಉಪಾಧ್ಯಕ್ಷೆ ಶಾಂತಮ್ಮ, ನಿರ್ದೇಶಕರಾದ ಶಬ್ಬೀರ್ಅಹಮ್ಮದ್, ಬಿ.ವೆಂಕಟರೆಡ್ಡಿ, ಸಿ.ನಾರಾಯಣಸ್ವಾಮಿ, ಟಿ.ರಾಮಚಂದ್ರಪ್ಪ, ಬೈರಾರೆಡ್ಡಿ, ಭಾಗ್ಯಮ್ಮ, ಸಿ.ಗುರ್ರಪ್ಪ, ಮುನಿಸ್ವಾಮಿ, ಎಚ್.ಮುನಿಯಪ್ಪ, ಸಿಇಒ ಸಿ.ವಿ.ಶಿವಾರೆಡ್ಡಿ, ಸಿಬ್ಬಂದಿಗಳಾದ ಎಂ.ದೀಪಕ್, ಸಿ.ಎಸ್.ವಿನೋದ್, ಎಸ್.ಜಿ.ವೆಂಕಟೇಶ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎ.ವಿ.ಶ್ರೀನಿವಾಸ್, ಮುಖಂಡರಾದ ಸೀತರಾಮಡ್ಡಿ, ವೆಂಕಟೇಶ್, ಸೋಮಾಯಜಲಪಲ್ಲಿ ಮಂಜುನಾಥರೆಡ್ಡಿ, ಲಕ್ಷಣರೆಡ್ಡಿ, ಅಕ್ಬರ್ಷರೀಫ್ ಇದ್ದರು.
15, ಎಸ್ವಿಪುರ್ 2 : ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರರ ಹಾಗು ರೈತ ಸೇವ ಸಹಕಾರ ಸಂಘದ ನೂತನ ಗೋದಾಮು ಮತ್ತು ಮಳಿಗೆಗಳನ್ನು ಕೆ.ಆರ್.ರಮೇಶ್ಕುಮಾರ್ ಉದ್ಗಾಟಿಸಿ ಮಾತನಾಡಿದರು.