JANANUDI.COM NETWORK
ಕುಂದಾಪುರ,ನ.೧೯: ಕರ್ನಾಟಕ ಸರ್ಕಾರ ಜಾರಿಗೆ ತರಲಿಚ್ಚಿಸುವ ಮತಾಂತರ ನಿಷೇಧ ಕಾಯ್ದೆ ಹಾಗೂ ಹಿಂದುಳಿದರ‍್ಗಗಳ ಕಲ್ಯಾಣ ಇಲಾಖೆಯು ಆದೇಶಿಸಿರುವ ಕ್ರೈಸ್ತ ಸಮುದಾಯದ ರ‍್ಚುಗಳು ಮತ್ತು ಸಂಘ ಸಂಸ್ಥೆಗಳ ಗಣತಿಯಯನ್ನು ಕೈಬೀಡಬೇಕೆಂದು ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚನ್ ಫೋರಮ್ ಫೋರ್ ಹ್ಯುಮನ್ ರೈಟ್ಸ್ ಇವರ ಪದಾಧಿಕಾರಿಗಳು ಕುಂದಾಪುರದ ಸಹಾಯಕ ಜಿಲ್ಲಾಧಿಕಾರಿ ಕೆ.ರಜುವನ್ನು ಭೇಟಿ ಮಾಡಿ ಮನವಿ ಮಾಡಿತು.
ಈ ಸಂದರ್ಭದಲ್ಲಿ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚನ್ ಫೋರಮ್ ಫೋರ್ ಹ್ಯುಮನ್ ರೈಟ್ಸ್ ನ ಹಲವಾರು ಪದಾಧಿಕಾರಿಗಳು ಹಾಗೂ ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಪಧಾಧಿಕಾರಿಗಳಿದ್ದರು.
ಈ ಸಂದರ್ಭದಲ್ಲಿ ಪಿಯುಸ್ ನಗರ ಚರ್ಚಿನ ಫಾ| ವಂ. ಆಲ್ಬರ್ಟ್ ಕ್ರಾಸ್ತಾ, ಆಸೆಂಬ್ಲಿ ಆಫ್ ಗಾಡ್ ಕುಂದಾಪುರ (ಕಟ್ ಬೆಲ್ತೂರ್) ಚರ್ಚಿನ ಪಾಸ್ಟರ್ ವಂ| ಕೆ.ವಿ.ಪೌಲ್, ಬೈಂದೂರಿನ ಕೆ.ಜೆ.ಎಮ್. ಚರ್ಚಿನ ಫಾ| ವಂ|ಬೊಬ್ಬಿ ಎಮ್. ಜಾರ್ಜ್, ಮುತ್ತುರಿನ ಬೆತೆಲ್ ಚಚಿನ ಫಾ| ವಂ|ಲಾರೆನ್ಸ್ ಬಾಬು, ಹೊಸ ಅಂಗಡಿಯ ಸಿರಿಯನ್ ಚರ್ಚಿನ ಫಾ|ವಂ|ಲಾರೆನ್ಸ್ ಡಿಸೋಜಾ, ಕುಂದಾಪುರ ಸಿ.ಎಸ್.ಐ. ಚರ್ಚಿನ ಫಾ| ವಂ|ಜೊಯೆಲ್ ಸುಹಾಸ್, ಫಾ|ವಂ| ಫಾಸ್ಟರ್ ವಂ|ಚಂದ್ರಶೇಖರ .ವಂ| ಸುರೆಶ್ ಕೋಣಿ, ಜೀವನ್ ಸಾಲಿನ್ಸ್, ಬಸ್ರೂರು ಸಿ.ಎಸ್.ಐ. ಚರ್ಚಿನ ವಂ|ಫಾ|ಕ್ರಪಾ ಕಿರಣ್, ಕಂಡ್ಲೂರಿನ ಸಿರಿಯನ್ ಚರ್ಚಿನ ಫಾ|ವಂ| ಕುರಿಯ ಕೋಸ್, ವಿನೋದ್ ಕ್ರಾಸ್ಟೊ, ಶೇವೊಟ್ ಪ್ರತಿಷ್ಠಾನ್ ಅಧ್ಯಕ್ಷರು, ವಲಯ ಸಮಿತಿ ಕಥೊಲಿಕ್ ಸಭಾದ ಅಧ್ಯಕ್ಷರಾದ ಮೇಬಲ್ ಡಿಸೋಜಾ, ಕಾರ್ಯದರ್ಶಿ ಡಾಯಾನ ಸೆರಾವೊ, ಖಜಾಂಚಿ ಮೈಕಲ್ ಪಿಂಟೊ, ಕುಂದಾಪುರ ಕಥೊಲಿಕ್ ಸಭಾದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಮೇರಿ ಡೆಸಾ ಕಂಡ್ಲೂರು, ರಿಚಾರ್ಡ್ ವಿಲ್ಸನ್ ಬಸ್ರೂರು, ಎಡ್ವರ್ಡ್ ಕರ್ಕಡಾ, ಬಸ್ರೂರು, ಜಯಪ್ರಕಾಶ್ ಸಾಲಿನ್ಸ್ ಕುಂದಾಪುರ, ಮುತಾಂದವರು ಉಪಸ್ಥಿತರಿದ್ದರು.
ಮನವಿಯನ್ನು ಸಹಾಯಕ ಜಿಲ್ಲಾಧಿಕಾರಿ ಕೆ.ರಾಜು ಅವರಿಗೆ ವಿವರಣೆ ನೀಡಿ ಮನವಿ ಸಲ್ಲಿಸಿ ಈ ಮನವಿಯನ್ನು ಮಾನ್ಯ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ತಲುಪಿಸ ಬೇಕೆಂದು ಮನವಿ ಅರ್ಪಿಸಲಾಯಿತು.
ರಿಗೆ,
ಸಹಾಯಕ ಆಯುಕ್ತರು,
ಕುಂದಾಪುರ, ಉಡುಪಿ ಜಿಲ್ಲೆ
ವಿಷಯ: ಕರ್ನಾಟಕ ಸರ್ಕಾರ ಜಾರಿಗೆ ತರಲಿಚ್ಚಿಸುವ ಮತಾಂತರ ನಿಷೇದ ಕಾಯ್ದೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆದೇಶಿಸಿರುವ ಕ್ರೈಸ್ತ ಸಮುದಾಯದ ಚರ್ಚುಗಳು ಮತ್ತುಸಂಘ ಸಂಸ್ಥೆಗಳ ಗಣತಿಯ ಕುರಿತು.
1, ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ‘ಮತಾಂತರ ನಿμÉೀಧ ಕಾಯ್ದೆಯನ್ನು ಜಾರಿಗೊಳಿಸಲು ಚಿಂತನೆ ನಶಿಸುತ್ತಿದೆ ಎಂಬುದಾಗಿ ಆಡಳಿತ ಪಕ್ಷದ ವಿವಿಧ ನಾಯಕರುಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡುತ್ತಿವೆ. ಇದು ನಿಜವೇ ಆಗಿದ್ದರೆ, ಕರ್ನಾಟಕದ ಸಮಸ್ತ ಕೈಸ ಸಮುದಾಯವು ಒಮ್ಮನಸ್ಸಿನಿಂದ ಅಂಥಹ ಕಾಯಿದೆಯನ್ನು ವಿರೋಧಿಸುತ್ತದೆ. ಭಾರತದ ಸಂವಿಧಾನದ 5 ನೇ ಅನುಚ್ಛೇದವು ಏನು ಇಚ್ಚಿಸಿದ ಯಾವುದೇ ಧರ್ಮವನ್ನು ಪಾಲಿಸಲು, ಆಚರಿಸಲು ಮತ್ತು ಅದನ್ನು ಪ್ರಚಾರ ಮಾಡುವ ಹಕ್ಕನ್ನು ಎಲ್ಲ ನಾಗರಿಕರಿಗೆ ನೀಡಿದೆ. ಹೀಗಿರುವಾಗ, ಈ ರಾಜ್ಯದಲ್ಲಿ ಜಾರಿಗೊಳಿಸಲು ಯೋಚಿಸಿರುವ ಮತಾಂತರ ನಿμÉೀಧ ಕಾಯ್ದೆಯು ಸಂವಿಧಾನದತ್ತ ಹಕ್ಕುಗಳ ದಮನವಾಗುತ್ತದೆ. ಇದಕ್ಕೆ ಕರ್ನಾಟಕದ ಕ್ರೈಸ್ತ ಸಮುದಾಯ ಯಾವತ್ತೂ ಅವಕಾಶವನ್ನು ನೀಡುವುದಿಲ್ಲ ಹಾಗೂ ಇದನ್ನು ಬಲವಾಗಿ ವಿರೋಧಿಸುತ್ತದೆ.
2 ಹಿಂದುಳಿದ ವರ್ಗಗಳ ಕಲಾಣ ಇಲಾಖೆ ತನ್ನ ಸಭೆಯೊಂದರಲ್ಲಿ ರಾಜ್ಯದಲ್ಲಿನ ಕ್ರೈಸ್ತ ಸಮುದಾಯದ z ಚರ್ಚುಗಳ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳ ಗಣತಿಯನ್ನು ನಡೆಸಬೇಕೆಂದು ಆದೇಶಿಸಿದೆ. ಇದನ್ನು ಪೆÇಲೀಸ್ ಇಂಟೆಲಿಜೆನ್ಸ್ ವಿಭಾಗಕ್ಕೆ ವಹಿಸಿದೆ ಎಂದು ಮಾಧ್ಯಮದ ವರದಿಗಳಿಂದ ತಿಳಿದು ಬಂಧಿದೆ. ಭಾರತದ ಸಂವಿಧಾನದ 15 ನೇ ಪರಿಚ್ಛೇದ ಧರ್ಮ, ಜಾತಿ, ಲಿಂಗ್ ಜನ್ಮಸ್ಥಳ ಇನ್ನಿಹದ ವಿಷಯಗಳ ಆಧಾರದಲ್ಲಿ ತಾರತಮ್ಯ ಗೊಳಿಸುವುದನ್ನು ನಿಬರ್ಂಧಿಸುತ್ತದೆ. ಹೀಗಿರುವಾಗ ಕ್ರೈಸ್ತ ಸಮುದಾಯವನ್ನು ಮಾತ್ರ ಗುರಿಯಾಗಿಸಿ ಗಣತಿಯನ್ನು ನಡೆಸುವುದು ಸಂವಿಧಾನ ವಿರೋಧಿ ಎಂದು ನಮ್ಮ ಅನಿಸಿಕೆ. ಹಿಂದೊಮ್ಮೆ ಜಾತಿ ಗಣತಿಯು ನಡೆದಿದೆ. ಅದಲ್ಲದೆ, ಚರ್ಚುಗಳ ವಿವರಗಳೆಲ್ಲವೂ ಈಗಾಗಲೇ ಸರ್ಕಾರದ ಬಳಿ ಇರುವಾಗ ಮತ್ತೊಮ್ಮೆ ಗಣತಿ ನಡಸುವ ಅಗತ್ಯವಾದರೂ ಏನು?
3 ರಾಜ್ಯದಲ್ಲಿ ಕ್ರೈಸ್ತ ಸಮುದಾಯವು ಸಾವಿರಾರು ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ಮೂಲಕ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದೆ. ಕ್ರೈಸ್ತ ಸಮುದಾಯದ ಈ ಸೇವೆಯು ಹಿಂದೆಯೂ, ಇಂದೂ ಹಾಗೂ ಮುಂದೆಯೂ ಮಾನವೀಯತೆ ನೆಲೆಯಲ್ಲಿ ನಿಸ್ವಾರ್ಥದಿಂದ ನಡೆಯುತ್ತದೆ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇವೆ, ಒಂದೊಮ್ಮೆ ಮಾಧ್ಯಮಗಳಲ್ಲಿ ಚರ್ಚಿತ ಮತಾಂತರ ನಿಷೇದ ಕಾಯ್ದೆ ಜ್ಯಾರಿಯಾದರೆ ಅದು ಸ್ಥಾಪಿತ ಹಿತಾಸಕ್ತಿಗಳ ಕೈಯಲ್ಲಿ ದುರುಪಯೋಗವಾಗುವ ಎಲ್ಲಾ ಸಾಧ್ಯತೆಗಳಿವೆ ಎಂಬುದು ನಮ್ಮ ಅನಿಸಿಕೆ.
ಮಾಧ್ಯಮಗಳಲ್ಲಿ ಚರ್ಚಿತ ಮತಾಂತರ ನಿಷೇಧ ಕಾಯ್ದೆಯು ಚಿಂತನೆಯನ್ನು ಹಾಗೂ ಕ್ರೈಸ್ತ ಸಮುದಾಯದ ಚರ್ಚುಗಳ ಹಾಗೂ ಧಾರ್ಮಿಕ ಸ್ಥಳಗಳ ಗಣತಿಯ ಆದೇಶವನ್ನು ಕೈಬಿಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಕ್ರೈಸ್ತ ಸಮುದಾಯವು ಈ ಮೂಲಕ ವಿನಂತಿಸಿಕೊಳ್ಳುತ್ತಿದೆ.
ಫಾಸ್ಟರ್, ಕೆ.ವಿ.ಪೌಲ್
ಅಸೆಂಬ್ಲಿ ಆಫ್ ಗಾಡ್ ಚರ್ಚ್.
ಕುಂದಾಪುರ, ಉಡುಪಿ-576201
ಸಹಿಗಳು
ಪ್ರತಿಗಳು:
- ಮಾನ್ಯ ರಾಜ್ಯಪಾಲರು
- ಮುಖ್ಯಮಂತ್ರಿಗಳು
- ಜಿಲ್ಲಾಧಿಕಾರಿ