

ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರ ಸಂಘÀಟನೆ ನೀಡಲ್ಪಡುವ ಕರ್ನಾಟಕ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿಗೆ ಈ ಬಾರಿ ಸಾಮಾಜಿಕ, ಸಾಂಸ್ಕøತಿಕ, ಕ್ರೀಡಾ, ಧಾರ್ಮಿಕ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಕಳೆದ 23 ವರ್ಷಗಳಿಂದ ತನ್ನದೇ ವೈಶಿಷ್ಟ್ಯಪೂರ್ಣ ಶೈಲಿಯ ಮೂಲಕ ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಸ್ಥೆಗೆ ಕರ್ನಾಟಕ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಹಾಗೂ 75 ಸಾವಿರ ರೂ. ನಗದು ಮತ್ತು ಪ್ರಶಂಸಾ ಪತ್ರವನ್ನು ನೀಡಿ ಸಂಘದ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮತ್ತು ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಡುಪಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕರಾದ ನಟರಾಜ್ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಈ ಸಂಧರ್ಭದಲ್ಲಿ ಉಡುಪಿ ನೆಹರೂ ಯುವ ಕೇಂದ್ರ ಸಂಘಟನೆಯ ಜಿಲ್ಲಾ ಯುವ ಸಮಾನ್ವಯಾಧಿಕಾರಿ ವಿಲ್ಪ್ರೆಡ್ ಡಿ’ಸೋಜಾ, ಉಡುಪಿ ನೆಹರೂ ಯುವ ಕೇಂದ್ರ ಸಂಘಟನೆಯ ಉಭಯ ಜಿಲ್ಲೆಗಳ ಲೆಕ್ಕಾಧಿಖಾರಿ ವಿಷ್ಣು ಮೂರ್ತಿ, ಉಡುಪಿ ನೆಹರೂ ಯುವ ಕೇಂದ್ರ ಸಂಘಟನೆಯ ನೂತನ ಅಧಿಕಾರಿ ಯಶವಂತ್ ಯಾಧವ್, ಉಡುಪಿ ಯುವಜನ ಕ್ರೀಡಾ ಮತ್ತು ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರೋಶನ್ ಶೆಟ್ಟಿ, ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೊ, ಸಾಣುರು ಯುವಕ ಮಂಡಳದ ಅಧ್ಯಕ್ಷ ಪ್ರಸಾದ್ ಪೂಜಾರಿ, ಕುಡಿಬೈಲು – ಕುಚ್ಚೂರು ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ದೀಕ್ಷೀತ್, ಚೇರ್ಕಾಡಿ - ಪೇತ್ರಿ ಸಮೃದ್ಧಿ ಮಹಿಳಾ ಮಂಡಳಿಯ ಅಧ್ಯಕ್ಷೆ ಪ್ರಸನ್ನಾ ಭಟ್, ಉಡುಪಿ ಸ್ವಚ್ಛ ಭಾರತ್ ಫ್ರೆಂಡ್ಸ್ನ ಅಧ್ಯಕ್ಷರಾದ ಗಣೇಶ್ ಪ್ರಸಾದ್ ನಾಯಕ್, ಸಂಯೋಜಕರಾದ ರಾಘವೇಂದ್ರ ಪ್ರಭು ಕರ್ವಾಲು, ಶಿರ್ವ ಮಹಿಳಾ ಮಂಡಳಿಯ ಅಧ್ಯಕ್ಷೆ ಗೀತಾ ವಾಗ್ಳೆ, ಹೆಜಮಾಡಿ ಕರಾವಳಿ ಯುವಕ ಹಾಗೂ ಯುವತಿ ಮಂಡಳಿಯ ಶರಣ್ ಮಟ್ಟು, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದಿನೇಶ್ ಪೂಜಾರಿ ಬೀರೊಟ್ಟು, ಪೂರ್ವಾಧ್ಯಕ್ಷರಾದ ರಘುವೀರ್ ಶೆಟ್ಟಿ, ಸುರೇಶ್ ಕಾಸರಬೈಲು, ಸತೀಶ್ ಅಬ್ಬನಡ್ಕ, ಉಪಾಧ್ಯಕ್ಷೆ ಲೀಲಾ ಪೂಜಾರಿ, ಕಾರ್ಯದರ್ಶಿ ಲಲಿತಾ ಆಚಾರ್ಯ, ಜೊತೆ ಕಾರ್ಯದರ್ಶಿ ಸುದರ್ಶನ್ ಕುಂದರ್, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಸದಸ್ಯರಾದ ಸುರೇಶ್ ಅಬ್ಬನಡ್ಕ, ಹರೀಶ್ ಪೂಜಾರಿ, ಬಾಲಕೃಷ್ಣ ಮಡಿವಾಳ, ಮಂಜುನಾಥ ಆಚಾರ್ಯ, ಕೀರ್ತನ್ ಪೂಜಾರಿ, ಆರತಿ ಕುಮಾರಿ, ವೀಣಾ ಪೂಜಾರಿ, ಪುಷ್ಪ ಕುಲಾಲ್, ಸುಲೋಚನಾ ಕೋಟ್ಯಾನ್, ಹರಿಣಾಕ್ಷಿ ಪೂಜಾರಿ, ಅಶ್ವಿನಿ ಪೂಜಾರಿ ಮೊದಲಾದವರು ಉಪಸ್ಥಿತಿತರಿದ್ದರು.