ಅರೆ ಬರೆ ಪ್ಯಾಕೇಜ್ : ಸಿಪಿಐ(ಎಂ)

JANANUDI.COM NETWORK

ಉಡುಪಿ,.19. ರಾಜ್ಯದ ಮುಖ್ಯಮಂತ್ರಿ ಪ್ರಕಟಿಸಿರುವ ಪ್ಯಾಕೇಜ್ ಅರೆ ಬರೆ ಪ್ಯಾಕೇಜ್ ಆಗಿದೆ. ಇದು ಅರೆ ಬರೆ ಲಾಕ್ಡೌನ್ ಹಾಗೆ ಇದೆ. ಕೋವಿಡ್ ಸಂಕಷ್ಟದ ವೇಳೆ ಜನತೆಯ ಜೀವನ ಉಳಿಸಲು ಇದು ಸಾಲದು ಎಂದು ಭಾರತ
ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಉಡುಪಿ ಜಿಲ್ಲಾ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಉಡುಪಿ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಖಾಸಗಿ ಬಸ್ ನೌಕರರು, ಹಂಚು ಕಾರ್ಮಿಕರು, ಬೀಡಿ ಕಾರ್ಮಿಕರು, ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡುವವರು ಇದ್ದಾರೆ. ಅವರಿಗೆ ಯಾವುದೇ ಪರಿಹಾರ ಘೋಷಿಸಿಲ್ಲ.
ಆದಾಯ ತೆರಿಗೆಯಿಂದ ಹೊರಗಿರುವ ರಾಜ್ಯದ ಪ್ರತಿ ಕುಟುಂಬಕ್ಕೆ ಮಾಸಿಕ ಹತ್ತು ಸಾವಿರ ರೂಪಾಯಿ ಪರಿಹಾರವನ್ನು ಕನಿಷ್ಠ 6 ತಿಂಗಳು ನೀಡಬೇಕು ಮತ್ತು ಪ್ರತಿಯೊಂದು ಕುಟುಂಬಕ್ಕೂ ತಲಾ 10 ಕೆಜಿ ಉಚಿತ ಪಡಿತರ ನೀಡಬೇಕು ಹಾಗು ಉದ್ಯೋಗ ಖಾತ್ರಿ ಕೆಲಸವನ್ನು 600 ರೂ ಕೂಲಿಯೊಂದಿಗೆ 200 ದಿನಗಳಿಗೆ ಹೆಚ್ಚಿಸಿ ನಗರ ಪ್ರದೇಶಕ್ಕೂ ವಿಸ್ತರಿಸ ಬೇಕಂಬುದು ಸಿಪಿಐ(ಎಂ) ಮತ್ತು ಜನತೆಯ ಒತ್ತಾಯವಾಗಿದೆ. ಈ ಒತ್ತಾಯವನ್ನು ಕಳೆದ 1 ವರ್ಷದಿಂದ ಮಾಡಲಾಗುತ್ತಿದೆ. ಆದರೆ ಮುಖ್ಯ ಮಂತ್ರಿಗಳು ಪ್ರಕಟಿಸಿರುವ ಕೇವಲ 1250 ಕೋಟಿ ರೂಗಳ ಪ್ಯಾಕೇಜ್ ಅಗತ್ಯದ ಒಂದು ಶೇಕಡ ಪರಿಹಾರ ಸಹಾ ಆಗಿರುವುದಿಲ್ಲ.
ಸರಕಾರವೇ ನೀಡಿದ ಪಟ್ಟಿ ಪ್ರಕಾರ 1111.82 ಕೋಟಿ ರೂ.ಗಳನ್ನು ವಿವಿಧ ಇಲಾಖೆಗಳ ಮೂಲಕ ನೀಡುತ್ತಿದ್ದು ಕಟ್ಟಡ ಕಾರ್ಮಿಕರಿಗೆ ನೀಡಲಾಗುವ ಅಂದಾಜು ವೆಚ್ಚ 494 ಕೋಟಿ ರೂಪಾಯಿಗಳನ್ನು ಕಲ್ಯಾಣ ಮಂಡಲಿಯಿಂದ ನೀಡಲಾಗುತ್ತಿದೆ. ಅಂದರೆ ಸರಕಾರಿ ಬೊಕ್ಕಸದಿಂದ ನೀಡುತ್ತಿರುವುದು ಕೇವಲ 618 ಕೋಟಿ ರೂಪಾಯಿ ಮಾತ್ರ.
ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸದ ರಾಜ್ಯ ಬಿಜೆಪಿ ಸಕಾ೯ರವು ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. ಲಸಿಕೆಯ ಅಲಭ್ಯತೆ, ದುಬಾರಿ ಚಿಕಿತ್ಸಾ ವೆಚ್ಚ, ಉದ್ಯೋಗ ನಷ್ಟ ಇತ್ಯಾದಿ ಕ್ರಮಗಳಿಂದ ಜನರು ಸಾಕಷ್ಟು ನೊಂದಿದ್ದಾರೆ. ಅಭದ್ರತೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಈಗ ಘೋಷಿಸಿರುವ ಪ್ಯಾಕೆಜ್ ಏನೇನೂ ಸಾಲದು.
ಕಳೆದ ವಷ೯ದ ಪ್ಯಾಕೇಜ್ ನ ಅಧ೯ದಷ್ಟು ಸಹಾ ಇರದ ಪ್ರಸಕ್ತ ಪ್ಯಾಕೇಜ್ ಕೋವಿಡ್ 2ನೇ ಅಲೆಯ ವ್ಯಾಪಕತೆ, ಸಾವು ನೋವಿನ ಪ್ರಮಾಣಕ್ಕೆ ಅನುಗುಣವಾಗಿಲ್ಲ.ಕೇವಲ ಮೂಗಿಗೆ ತುಪ್ಪ ಸವರುವ ಪ್ಯಾಕೇಜ್ ಅನ್ನು ಜನತೆಯ ಸಿಟ್ಟನ್ನು ಶಮನ ಮಾಡಲು ರಾಜ್ಯ ಬಿಜೆಪಿ ಸಕಾ೯ರವು ಪ್ರಕಟಿಸಿದೆ.
ಈ ಹಿನ್ನೆಲೆಯಲ್ಲಿ ಮೇ 21 ರಂದು ರಾಜ್ಯದ ಕಾಮಿ೯ಕರು, ರೈತರು ಮತ್ತು ಕೂಲಿಕಾರರು ಹಮ್ಮಿಕೊಂಡಿರುವ ಮನೆಯಿಂದಲೆ ಪ್ರತಿಭಟನೆ ಪ್ರತಿರೋಧವನ್ನು ಸಿಪಿಐ(ಎಂ) ಬೆಂಬಲಿಸಿದೆ ಹಾಗು ಜನತೆ ಅದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸ ಬೇಕೆಂದು ಮನವಿ ಮಾಡಿದೆ. ಬಾಲಕ್ರಷ್ಣ ಶೆಟ್ಟಿ ಕಾಯ೯ದಶಿ೯, ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ. ಇವರು ಮಾದ್ಯಮಕ್ಕೆ ತಿಳಿಸಿದ್ದಾರೆ