ಬೆಂಗಳೂರು; ಅ.೩೦ಃ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರಾದ ರೆ| ಫಾ| ಪ್ರಶಾಂತ್ ಮಾಡ್ತ ರು ಬೆಂಗಳೂರು ವಿ.ವಿಯಿಂದ ಸ್ವರ್ಣ ಪದಕಗಳೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾನಕೊತ್ತರ ಪದವಿ ಪಡೆದ ಬಳಿಕ ಮಂಗಳೂರಿನ ಸಂತ ಅಲೋಶೀಯಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ವೃತ್ತಿಯ ಬಳಿಕ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಮಾಡಿದ್ದಾರೆ, ಹಾಗೂ ಶ್ರೇಷ್ಟ ಶಿಕ್ಶಣ ತಜ್ಞರಾಗಿ ಹೊರಹೊಮ್ಮಿದರು. ‘ಯೇಸು ಸಭೆ’ಯನ್ನು ಸೇರಲು ಅವರು ಪೂರ್ವಭಾವಿಯಾಗಿ ಜಗದ ಹಲವು ಧರ್ಮಗಳನ್ನು, ತತ್ವಶಾಸ್ತ್ರಗಳನ್ನು ದಶಕಗಳ ಕಾಲ ಅದ್ಯಯನ ಮಾಡಿದ್ದರು. ರೆ|ಪ್ರಶಾಂತ್ ಅವರು ಸಾಹಿತ್ಯ ವಿಮರ್ಶೆ, ಸಂಸ್ಕ್ರತಿ ವಿಮರ್ಶೆ, ನಿಘಂಟು ಶಾಸ್ತ್ರ ಹಾಗೂ ವಿವಿಧ ಸಾಹಿತ್ಯ ಪ್ರಕಾರಗಳನ್ನು ಅವುಗಳ ಮೂಲ ಗ್ರಂಥಗಳಲ್ಲಿ ಅಧ್ಯಯನ ಮಾಡಿ ಕರಗತ ಮಾಡಿಕೊಂಡಿದ್ದಾರೆ.
ಸಾಹಿತ್ಯ ಸೇವೆ
1.ಕನ್ನಡದ ಥೆಸಾರಸ್-ಪದನಿಧಿ
2.ಕೊಂಕಣಿ ಥೆಸಾರಸ್-ಥೆಸಾರ್[೧]’ 3.ಕೊಂಕಣಿ ನುಡಿಗಟ್ಟುಗಳ ಬೃಹತ್ ಕೋಶವಾದ -‘ಕೊಂಕಣಿ ಪಿಕೊಳಿಂ’
4.’ನಿನ್ನಂತೆ ನಾನಗಲು’,ಮತ್ತು ‘ಸಾನಿಧ್ಯ’-ಅವರು ಕನ್ನಡಕ್ಕೆ ಅನುವಾದಿಸಿದ ಜಗದ್ಪ್ರಸಿದ್ದ ಅನುಭವಿ ಬರಹಗಳು.
5.’ರಾಟವಳ್’,’ಶೆಂಭರ್ ಕಿಟಾಳಾಂ’ ಕೊಂಕಣಿ ಲೇಖನಗಳ ಸಂಗ್ರಹ.
6.ಕರ್ನಾಟಕದ ಹಿರಿಯ ಶಿಕ್ಷಣ ಸಂಸ್ಥೆಯಾದ ಸಂತ ಅಲೋಶಿಯಸ್ ಕಾಲೇಜಿನ ಇತಿಹಾಸವನ್ನು ‘ಆನ್ ಈಗಲ್ಸ್ ವಿಂಗ್ಸ್’-ಎಂಬ ಗೃಂಥವನ್ನು ಆಂಗ್ಲ ಭಾಷೆಯಲ್ಲಿ ರಚಿಸಿದ್ದಾರೆ.
7.ಸಮಾಜವನ್ನು, ಸಂಸ್ಕೃತಿಯವನ್ನು ವಿರಚನೆ ಮಾಡಿನೊಡಿ, ವಿಚಾರಕ್ಕೆ ನವಿರು ಹಾಸ್ಯ ಬೆರೆಸಿ, ಓದುಗರನ್ನು ಚಿಂತನೆಗೆ ಹಚ್ಚುವ ಅವರ ಅಂಕಣ ‘ಚಕಿತ ಚಿತ್ತ’ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟನೆಗೊಂಡಿದೆ.
8.ಅಲೋಶಿಯಸ್ ಪ್ರಕಾಶನದಲ್ಲಿ ಪ್ರಕಟವಾದ ಪ್ರಾಂಶುಪಾಲ ಕೃತಿ.
ಸತತ ಅಭ್ಯಾಸ, ಅಧ್ಯಯನ, ಶಂಶೋಧನೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಕನ್ನಡ ಸಾಹಿತ್ಯದ ಹಿರಿಮೆಗೆ ಹೆಗಲೆಣೆಯಾಗಿ ನಿಂತ ನಮ್ಮ ಸಂಸ್ಥೆಯ ವಿಶ್ರಾಂತ ಪ್ರಾಂಶುಪಾಲರಾದ ಫಾ| ಪ್ರಶಾಂತ್ ಮಾಡ್ತಾ ಅವರಿಗೆ ಕನ್ನಡ ನಾಡು ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ನಮಗೆಲ್ಲ ಹೆಮ್ಮೆ ತಂದಿದೆ. ಶುಭವಾಗಲಿ ಎಂದು ‘ಯೇಸು ಸಭೆ’ ಹಾರೈಸುತ್ತದೆ.