

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಬಂಟ್ವಾಳ ವಲಯದ ಸಹಯೋಗದಿಂದ ದಿನಾಂಕ 24-11-2024ರಂದು ಮೊಡಂಕಾಪು ಕನ್ನಡ ಮೀಡಿಯಂ ಶಾಲೆಯ ಸಭಾಂಗಣದಲ್ಲಿ ಯುವ ಲೇಖಕರಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಬಂಟ್ವಾಳ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫಾ| ವಲೇರಿಯನ್ ಡಿಸೋಜ, ಕಾರ್ಯಾಗಾರದ ಅಧ್ಯಕ್ಷರಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಮುಖ್ಯ ಅತಿಥಿಗಳಾಗಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಬಂಟ್ವಾಳ ವಲಯದ ಅಧ್ಯಕ್ಷರಾದ ಶ್ರೀ ಜೋನ್ ಲಸ್ರಾದೊ, ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮಿಣ ಅಭಿವೃದ್ದಿ ಬ್ಯಾಂಕ್ ಇದರ ಅಧ್ಯಕ್ಷರಾದ ಶ್ರೀ ಅರುಣ್ ರೋಶನ್ ಡಿಸೋಜ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಕೇಂದ್ರಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೊರವರು ಈ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು,
ತರಬೇತುದಾರರಾಗಿ ಕವಯತ್ರಿಯಾದ ಶ್ರೀಮತಿ ಡಿಂಪಲ್ ಜೆನಿಫರ್ ಫೆರ್ನಾಂಡಿಸ್ರವರು ಕವಿತೆ ರಚನೆ ಬಗ್ಗೆ ಹಾಗೂ ತಮ್ಮ ಅನುಭವದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಕವನಗಳು ಹೇಗೆ ಉದ್ಬವಗೊಳ್ಳುತ್ತವೆ, ಯಾವ ರೀತಿ ಕವನ ಬರೆಯಬಹುದೆಂದು ಮಾಹಿತಿ ನೀಡಿದರು. ಯುವಕವಿ, ಕಥೆಗಾರರಾದ ಶ್ರೀ ಗ್ಲ್ಯಾನಿಷ್ ಮಾರ್ಟಿಸ್ ಯುವ ಲೇಖಕರಿಗೆ ಕಥೆ ಬರೆಯುವ ವಿಧಾನ/ ಹಂತಗಳ ಬಗ್ಗೆ ಮಾಹಿತಿ ನೀಡಿ, ಕಥೆ ಹೇಗೆ ಬರೆಯಬೇಕೆಂದು ತಿಳಿಸಿದರು.
ಶ್ರೀ ಸಮರ್ಥ್ ಭಟ್ರವರ ಸದಸ್ಯ ಸಂಚಾಲಕತ್ವದಲ್ಲಿ ಈ ನಡೆಯಿತು, ಅಕಾಡೆಮಿ ಸದಸ್ಯರುಗಳಾದ ಶ್ರೀ ನವೀನ್ ಲೋಬೊ, ಶ್ರೀಮತಿ ಅಕ್ಷತಾ ಎಂ. ನಾಯಕ್ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.


