

ಬೆಂಗಳೂರು:ಆ.22: ಕರ್ನಾಟಕದ ಕರಾವಳಿಯ ಏಲ್ಲಾ ಜಿಲ್ಲೆಗಳಲ್ಲೂ ಇಂದಿನಿಂದ ಒಂದು ವಾರದ ತನಕ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆಯೇ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ರಾಮನಗರ, ಶಿವಮ್ನಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ.ಮಂಕಿ, ಅಜ್ಜಂಪುರ, ಉಡುಪಿ, ಕಾರ್ಕಳ, ಕೋಟ, ಕೊಲ್ಲೂರು, ಮಂಗಳೂರು, ಮುಲ್ಕಿ, ಬಸವನ ಬಾಗೇವಾಡಿ, ಕ್ಯಾಸಲ್ರಾಕ್, ದೇವರಹಿಷ್ಪರಗೆ, ಶಿರಾಲಿ, ಬೆಳ್ಳೂರು, ಸೇಡಂನಲ್ಲಿ ನಿನ್ನೆ ಮಳೆಯಾಗಿದೆ