ಶ್ರೀನಿವಾಸಪುರ : ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಸೋಮವಾರ ನವ ಕರ್ನಾಟಕ ವೇದಿಕೆ ಹಾಗು ಇತರೆ ಕನ್ನಡಪರ ಸಂಘನೆಗಳ ವತಿಯಿಂದ ಖಾಸಗಿ ವಲಯಗಳ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಾತಿ ಮತ್ತು ವೃತ್ತಿಪರ ವಿದ್ಯಾಭ್ಯಾಸಕ್ಕೆ ಶೇ.10% ರಷ್ಟು ಶುಲ್ಕ ಹೆಚ್ಚು ಮಾಡಿರುವ ಬಗ್ಗೆ. ಪ್ರತಿಭಟನೆ ನಡೆಸಿ ದಂಡಾಧಿಕಾರಿ ಜಿ.ಎನ್.ಸುದೀಂದ್ರರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಅದೇ ರೀತಿ ಈಗಿನ ಕಾಲದಲ್ಲಿ ವಿದ್ಯಾಭ್ಯಾಸ ವ್ಯಾಪಾರಿಕರಣವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ವೃತ್ತಿಪರ (ಇಂಜಿನಿಯರಿಂಗ್ ಮುಂತಾದ) ಕೋರ್ಸ್ಗಳಿಗೆ ಶೇ.10% ರಷ್ಟು ಹೆಚ್ಚಳ ಮಾಡಿದ್ದಲ್ಲದೇ 2024-2025ನೇ ಸಾಲಿನಲ್ಲಿ ಅನ್ವಯವಾಗುವಂತೆ ಆದೇಶಿಸಿದೆ. ಇದರಿಂದ ಯಾವುದೇ ಕಾರಣಕ್ಕೂ ಯಾವುದೇ ವೃತ್ತಿಪರ ಕೋರ್ಸ್ಗಳ ಶುಲ್ಕ ಹೆಚ್ಚಿಸದಂತೆ ತಮ್ಮ ನಿರ್ಧಾರವನ್ನು ಕೈಬಿಡಬೇಕು ವಿದ್ಯಾಭ್ಯಾಸಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇದರಿಂದ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯಲು ಅನುವು ಮಾಡಿಕೊಡಬೇಕು ಎಂದು ನವ ಕರ್ನಾಟಕ ವೇದಿಕೆ ರಾಜ್ಯ ಪ್ರದಾನ ಕಾರ್ಯದರ್ಶಿ ಸಾಧಿಕ್ಅಹಮ್ಮದ್ ಒತ್ತಾಯಿಸಿದರು.
ಸಮರ ಸೇನೆ ಜಿಲ್ಲಾ ಕಾರ್ಯದರ್ಶಿ ಜಗದೀಶ್, ಸದಸ್ಯರಾದ ಶ್ರೀನಿವಾಸರೆಡ್ಡಿ, ನಾಗರಾಜ್, ನವ ಕರ್ನಾಟಕ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ಲಾ, ತಾಲೂಕು ಎಚ್.ಎಂ ಅರುಣ್ಕುಮಾರ್, ಯುವ ಘಟಕದ ಅಧ್ಯಕ್ಷ ಸಾಬೀರ್ ಬರೀದ್, ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವಿ.ಆನಂದ್ ಇದ್ದರು.