ಕೋಲಾರ:- ಕರ್ನಾಟಕ ಸಂಭ್ರಮ-50ರ ಅಂಗವಾಗಿ ಜು.31 ರಂದು ಜಿಲ್ಲೆಗೆ ಆಗಮಿಸುತ್ತಿರುವ ಕನ್ನಡ ಜ್ಯೋತಿ ರಥವನ್ನು ಅದ್ದೂರಿಯಿಂದ ಸ್ವಾಗತಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಹರ್ಷವರ್ಧನ್ ತಿಳಿಸಿದರು.
ಕೋಲಾರಕ್ಕೆ ಕನ್ನಡ ಜ್ಯೋತಿ ರಥ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲು ಸೋಮವಾರ ಸಂಜೆ ಕರೆದಿದ್ದ ವಿವಿಧ ಕನ್ನಡಪರ ಸಂಘಟನೆಗಳು,ಮುಖAಡರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಥ ಸಂಚರಿಸುವ ಮಾರ್ಗಗಳ ಕುರಿತು ಸಭೆಯಲ್ಲಿ ಚರ್ಚಿಸಿದ್ದು, ಅದರಂತೆ ಕೋಲಾರ ಪ್ರವಾಸಿ ಮಂದಿರದಿAದ ಮೆರವಣಿಗೆ ಆರಂಭಿಸಿ, ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ದೊರೆಯುವಂತೆ ಮಾಡುವುದು. ನಂರ ರಥ ಗಾಂಧಿವನ, ಎಂ.ಜಿ.ರಸ್ತೆ, ಹಳೆ ಬಸ್ ನಿಲ್ದಾಣ, ಮೆಕ್ಕೆ ವೃತ್ತದ ಮೂಲಕ ಮುಕ್ತಾಯಗೊಳ್ಳಲಿದ್ದು, ಮೆರವಣಿಗೆ ಪೊಲಿಸ್ ಬಂದೋಬಸ್ತ್ ಒದಗಿಸಲು ಸೂಚಿಸಲಾಯಿತು.
ನಂತರ ಮಾಲೂರು ತಾಲ್ಲೂಕಿಗೆ ರಥ ಹೊರಡಲಿದ್ದು, ಮಾರ್ಗಮಧ್ಯೆ ಗ್ರಾಮ ಪಂಚಾಯಿತಿ, ಹಳ್ಳಿಗಳಲ್ಲಿ ರಥ ಸಾಗುವಾಗ ಬೆಗ್ಲಿ ಹೊಸಹಳ್ಳಿ, ಮುದುವತ್ತಿ, ಪಾರ್ಶ್ವಗಾನಹಳ್ಳಿ ಕ್ರಾಸ್, ವಕ್ಕಲೇರಿ ಮಾರ್ಗದಿಂದ ಮಾಲೂರು ತಾಲ್ಲೂಕಿಗೆ ಹೋಗಲಿದ್ದು, ಅಲ್ಲಿಯೂ ಸ್ವಾಗತಿಸಲು ಸೂಚಿಸಲಾಯಿತು.
ಸಭೆಯಲ್ಲಿ ತಹಸೀಲ್ದಾರ್ ಮಾತನಾಡಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಪೂರ್ಣ ಕುಂಭ ಸ್ವಾಗತದ ಜವಾಬ್ದಾರಿ ಹೊರಬೇಕು ಎಂದು ಸಿಡಿಪಿಒ ಅವರಿಗೆ ಸೂಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ ರಥ ಸಾಗುವ ಮಾರ್ಗದ ಕುರಿತು ತಿಳಿಸಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ರಥ ಸಾಗುವ ಮಾರ್ಗದ ಕುರಿತು ಮಾಹಿತಿ ನೀಡಿದರು.
ರಥ ಸಾಗುವ
ಮಾರ್ಗ-ಗೀತಾ
ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಮಾಹಿತಿ ನೀಡಿ, ರಥ ಚಿಂತಾಮಣಿಯಿAದ ಜು.31ರ ಬೆಳಗ್ಗೆ 9 ಗಂಟೆಗೆ ಶ್ರೀನಿವಾಸಪುರಕ್ಕೆ ಆಗಮಿಸಲಿದ್ದು, ಅಲ್ಲಿ ಮಧ್ಯಾಹ್ನ 1-30ರವರೆಗೂ ಇರಲಿದೆ. ನಂತರ ಅದೇ ದಿನ ಮಧ್ಯಾಹ್ನ 2 ಗಂಟೆಗೆ ಮುಳಬಾಗಿಲಿಗೆ ತೆರಳಲಿದ್ದು, ಅಲ್ಲಿ ಸಂಜೆ 6 ಗಂಟೆಯವರೆಗೂ ಪಟ್ಟಣದಲ್ಲಿ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಆ.1 ರಂದು ಬೆಳಗ್ಗೆ 9 ಗಂಟೆಗೆ ಮುಳಬಾಗಿಲಿನಿಂದ ಹೊರಟು ಮಧ್ಯಾಹ್ನ 1-30 ಗಂಟೆಗೆ ಕೆಜಿಎಫ್ ನಗರದಲ್ಲಿ ಸಂಚಾರ ನಡೆಸಲಿದೆ, ನಂಗರ ಅದೇ ದಿನ ಮಧ್ಯಾಹ್ನ 2 ಗಂಟೆಗೆ ಅಲ್ಲಿಂದ ಹೊರಟು ಸಂಜೆ 6 ಗಂಟೆವರೆಗೂ ಬಂಗಾರಪೇಟೆ ಪಟ್ಟಣದಲ್ಲಿ ಮೆರವಣಿಗೆ ನಡೆಯಲಿದೆ ಎಂದ ಅವರು,ಆ.2 ರಂದು ಬೆಳಗ್ಗೆ 9 ಗಂಟೆಗೆ ಬಂಗಾರಪೇಟೆ ಬಿಟ್ಟು ಮಧ್ಹಾಯ್ನ 1-30 ರವರೆಗೂ ಕೋಲಾರದಲ್ಲಿ ರಥದ ಮೆರವಣಿಗೆ ನಡೆಯಲಿದೆ ನಂತರ ಆ.3ರ ಬೆಳಗ್ಗೆ 9 ಗಂಟೆಗೆ ಮಾಲೂರು ಪಟ್ಟಣಕ್ಕೆ ತೆರಳಲಿದ್ದು, ಅಲ್ಲಿ ಮಧ್ಯಾನ್ನ 1-30 ರವರೆಗೂ ಮೆರವಣಿಗೆ ನಡೆಯಲಿದೆ. ನಂತರ ಆ.4 ರಂದು ಬೆಳಗ್ಗೆ 9 ಗಂಟೆಗೆ ಹೊಸಕೋಟೆ ಮಾರ್ಗವಾಗಿ ತೆರಳಲಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ಮಾತನಾಡಿ, ಕನ್ನಡ ಜ್ಯೋತಿ ರಥದ ಅದ್ದೂರಿ ಸ್ವಾಗತಕ್ಕೆ ನೌಕರರ ಸಂಘ ಸಹಕಾರ ನೀಡಲಿದೆ,ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಅಗತ್ಯವಾದ ಶಾಲುಗಳನ್ನು ಒದಗಿಸುವುದಾಗಿ ತಿಳಿಸಿದರು.
ಕಸಾಪ ಅಧ್ಯಕ್ಷ ಗೋಪಾಲಗೌಡ ಮಾತನಾಡಿ,ಮೆರವಣಿಗೆಯಲ್ಲಿ ಆಶಾಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಪೂರ್ಣಕುಂಭ ಕಳಸದೊಂದಿಗೆ ಸ್ವಾಗತಿಸಲು ಕಳುಹಿಸಿಕೊಡಲು ಕೋರಿದರು. ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಶಾಲು ಬಾವುಟ ಒದಗಿಸುವಂತೆ ಕೋರಿ, ನಗರ ಭಾಗಗಳಲ್ಲಿ ಕನ್ನಡ ಧ್ವಜಕಟ್ಟುವುದು, ಮೆರವಣಿಗೆಗೆ ಶಾಲಾ,ಕಾಲೇಜು ವಿದ್ಯಾರ್ಥಿಗಳನ್ನು ಕಳುಹಿಸಲು ಪಿಯುಡಿಡಿ ಹಾಗೂ ಡಿಡಿಪಿಐಗೆ ಸೂಚಿಸಲು ಕೋರಲಾಯಿತು.
ಮೆರವಣಿಗೆಯಲ್ಲಿ ಬರುವವರಿಗೆ ಮಜ್ಜಿಗೆ ಒದಗಿಸಲು ಕೆಎಂಎಫ್ಗೆ ಮನವಿ ಮಾಡುವುದು. ಭಾಗವಹಿಸುವ ಕಲಾ ತಂಡಗಳಿಗೆ ಪ್ರಮಾಣ ಪತ್ರ ನೀಡಲು ಸೂಚಿಸಿದರು.
ಸಭೆಯಲ್ಲಿ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಿ.ಆರ್.ರಾಜಪ್ಪ, ಅಂಬೇಡ್ಕರ್ ಜನಪದ ಕಲಾ ಸಂಘದ ಅಧ್ಯಕ್ಷ ಎನ್.ನಾರಾಯಣಸ್ವಾಮಿ, ಕನ್ನಡ ಚಳುವಳಿ ನಾಯಕ ಅ.ಕೃ ಸೋಮಶೇಖರ್, ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಕೋ.ನ.ಪ್ರಭಾಕರ್, ಕಾರ್ಯದರ್ಶಿನಾ.ಮಂಜುನಾಥ್, ಐತರಾಸನಹಳ್ಳಿ ಸಂಜೀವಯ್ಯ, ಕನ್ನಡಪರ ಹೋರಾಟಗಾರ ಎಲ್.ಇ.ಕೃಷ್ಣೇಗೌಡ, ಬೆಸ್ತರ ಸಂಘದ ಅಧ್ಯಕ್ಷ ಜಿ.ಮುನಿಕೃಷ್ಣ, ಕಲಾವಿದ ಎಸ್.ನಾರಾಯಣಸ್ವಾಮಿ, ಹರಿಕಥಾ ದಾಸರಾದ ವಿ.ಪವಿತ್ರ ಮತ್ತತರರು ಹಾಜರಿದ್ದು, ಸಲಹೆ ನೀಡಿದರು.