ಬ್ಲಾಕ್ ಕಾಂಗ್ರೆಸ್ ಕಾರ್ಕಳ;ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸುರವರ ಜನ್ಮದಿನಾಚರಣೆ

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು


ಕಾರ್ಕಳ:ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗು ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸುರವರ ಜನ್ಮದಿನಾಚರಣೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಹಾಗೂ ಕುಕ್ಕುಂದೂರು ಗ್ರಾಮೀಣ ಸಮಿತಿಯ ಅಧ್ಯಕ್ಷ ತೋಮಸ್ ಮಸ್ಕರೇನಸ್ ರವರು ದೀಪ ಬೆಳಗಿಸಿ ಗೌರವ ಸಲ್ಲಿಸುವ ಮೂಲಕ ಆಚರಿಸಲಾಯಿತು ನಂತರ  ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಶಾಂತ್ ಸುಧಾಕರ್ ರವರು ರಾಜೀವ್ ಗಾಂಧಿಯವರು *ಸಾರ್ವತ್ರಿಕ ಪ್ರತಿರಕ್ಷಣೆ (ರೋಗನಿರೋಧಕ) ಕಾರ್ಯಕ್ರಮ (U I P) ಜಾರಿಗೆತರುವ ಮೂಲಕ ಇಂದು ಕೊವಿಡ್ ನಂತ ಮಹಾಮಾರಿಗೆ  ಜನರಿಗೆ ಲಸಿಕೆ ಕೊಡಿಸಲು ಸಹಕಾರಿಯಾಯಿತು ಎಂದರು*. ಹಾಗೆಯೇ  ಸ್ವಾತಂತ್ರಪೂರ್ವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರವರ ಆಸ್ಥಾನದಲ್ಲಿ ದಿವಾನರಾಗಿದ್ದ ಕಾಂತರಾಜ್ ಅರಸ್ ರವರು 1921ರಲ್ಲಿ  ಜಸ್ಟಿಸ್ ಮಿಲ್ಲರ್ ವರದಿಯನ್ನು ಜಾರಿ ಮಾಡಿ ಹಿಂದುಳಿದ ವರ್ಗಗಳ ಹಿತರಕ್ಷಕರಾದಂತೆ ಸ್ವಾತಂತ್ರ ನಂತರ ದೇವರಾಜ ಅರಸುರವರು  1977ರಲ್ಲಿ ಹಾವನೂರು ಆಯೋಗದ ವರದಿಯನ್ನು ಜಾರಿಗೊಳಿಸುವ ಮೂಲಕ

ಹಿಂದುಳಿದವರ್ಗದ ಹಿತರಕ್ಷಕರೆಣಿಸಿದರು ಎಂದರು ಕಾರ್ಯಕ್ರಮದಲ್ಲಿ ರಾಜ್ಯ ಕಿಸಾನ್ ಸಮಿತಿಯ ಕಾರ್ಯದರ್ಶಿ ಉದಯ ವಿ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಸಂಘಟನಾ ಕಾರ್ಯದರ್ಶಿ ನಕ್ರೆ ಜಯರಾಮ್ ಆಚಾರ್ಯ ಸುನಿಲ್ ಕುಮಾರ್ ಭಂಡಾರಿ  ಐ.ಟಿ ಸೆಲ್ ಅಧ್ಯಕ್ಷರಾದ ಸತೀಶ್ ಕಾರ್ಕಳ ಉಪಸ್ಥಿತರಿದ್ದರು ಪಕ್ಷದ ವಕ್ತಾರರಾದ ಶುಭದ ರಾವ್ ರವರು ಕಾರ್ಯಕ್ರಮ ನಿರೂಪಿಸಿದರು. *ರಾಜೀವ್ ಗಾಂಧಿಯವರು ಸಾರ್ವತ್ರಿಕ ಪ್ರತಿರಕ್ಷಣೆ (ರೋಗನಿರೋಧಕ) ಕಾರ್ಯಕ್ರಮ (U I P) ಜಾರಿಗೆತರುವ ಮೂಲಕ ಇಂದು ಕೊವಿಡ್ ನಂತ ಮಹಾಮಾರಿಗೆ  ಜನರಿಗೆ ಲಸಿಕೆ ಕೊಡಿಸಲು ಸಹಕಾರಿಯಾಯಿತು ಸುಶಾಂತ್ ಸುಧಾಕರ್*